ಕೋಲಾರದಲ್ಲಿ ದಾರುಣ ಘಟನೆ; ದೇವರ ದರ್ಶನಕ್ಕೆ ಬಂದಿದ್ದ ವೃದ್ಧನ ಮೇಲೆ ಕಾಡಾನೆ ದಾಳಿ, ಸಾವು

author-image
Bheemappa
Updated On
ಕೋಲಾರದಲ್ಲಿ ದಾರುಣ ಘಟನೆ; ದೇವರ ದರ್ಶನಕ್ಕೆ ಬಂದಿದ್ದ ವೃದ್ಧನ ಮೇಲೆ ಕಾಡಾನೆ ದಾಳಿ, ಸಾವು
Advertisment
  • ಗ್ರಾಮದ ಪಕ್ಕದ ಅರಣ್ಯದಲ್ಲಿರುವ ಮಲ್ಲೇಶ್ವರಸ್ವಾಮಿ ದೇವಾಲಯ
  • ಎಂದಿನಂತೆ ದೇವರ ದರ್ಶನ ಪಡೆಯಲು ದೇವಾಲಯಕ್ಕೆ ಬಂದಿದ್ದರು
  • ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಮೃತದೇಹ ಗುರುತು ಸಿಗದಂತೆ ಆಗಿದೆ

ಕೋಲಾರ: ಅರಣ್ಯ ಪ್ರದೇಶದಲ್ಲಿರುವ ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಬಂದಿದ್ದ ವೃದ್ಧರೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಹಿನ್ನೆಲೆ ಮೃತಪಟ್ಟಿದ್ದಾರೆ. ಈ ಘಟನೆಯು ಬಂಗಾರಪೇಟೆ ತಾಲೂಕಿನ ಮೂತನೂರು ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ:ಇವರು ವಿಶ್ವದ ದೀರ್ಘಾಯುಷಿ.. 2ನೇ ವಿಶ್ವಯುದ್ಧ ಕಣ್ಣಾರೆ ಕಂಡ ಏಕೈಕ ವ್ಯಕ್ತಿ, ಅಜ್ಜನ ಲೈಫ್​ಸ್ಟೈಲ್ ರೋಚಕ..!

ತಮಿಳುನಾಡು ಮೂಲದ‌ ಚಿಕ್ಕ ಬೀರಪ್ಪ (60) ಮೃತ ದುರ್ದೈವಿ. ಮೂತನೂರು ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಮಲ್ಲೇಶ್ವರಸ್ವಾಮಿ ದೇವಾಲಯವಿದೆ. ಇಲ್ಲಿಗೆ ದೇವರ ದರ್ಶನ ಪಡೆಯಲೆಂದು ವೃದ್ಧ ಬಂದಿದ್ದರು. ಈ ವೇಳೆ ವೃದ್ಧನ ಮೇಲೆ ಆನೆ ದಾಳಿ ಮಾಡಿ ಬಲಿ ಪಡೆದುಕೊಂಡಿದೆ. ಆನೆ ದಾಳಿಯಿಂದ ಮೃತದೇಹವೆಲ್ಲ ಮಾಂಸದ ಮುದ್ದೆಯಂತಾಗಿದೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment