VIDEO: ಪಾರ್ವತಮ್ಮನ ಬೆಟ್ಟದ ಬಳಿ ಕಂಡ ಒಂಟಿ ಸಲಗ! ಅಚ್ಚರಿಗೊಂಡ ಭಕ್ತರು

author-image
AS Harshith
Updated On
VIDEO: ಪಾರ್ವತಮ್ಮನ ಬೆಟ್ಟದ ಬಳಿ ಕಂಡ ಒಂಟಿ ಸಲಗ! ಅಚ್ಚರಿಗೊಂಡ ಭಕ್ತರು
Advertisment
  • ದೂರದ ಬೆಟ್ಟದ ಮೇಲೆ ನಿಂತಿದ್ದ ಕಾಡಾನೆ
  • ನೂರಾರು ಅಡಿ ಎತ್ತರವಿರುವ ಪಾರ್ವತಮ್ಮನ ಬೆಟ್ಟ
  • ಒಂಟಿ ಸಲಗವನ್ನು ಕಂಡು ಅಚ್ಚರಿಗೊಂಡ ದಾರಿಹೋಕರು

ಹಾಸನ: ಬೆಟ್ಟದ ಮೇಲೆ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಆಲೂರು ತಾಲ್ಲೂಕಿನ ದೈತಾಪುರ ಗ್ರಾಮದಲ್ಲಿ ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ದೂರದ ಬೆಟ್ಟದ ಮೇಲೆ ನಿಂತಿದ್ದ ಕಾಡಾನೆಯನ್ನು ಕಂಡು ದಾರಿ ಹೋಕರು ಅಚ್ಚರಿಗೊಂಡಿದ್ದಾರೆ.

ದೈತಾಪುರ ಗ್ರಾಮದ ಸಮೀಪವಿರುವ ಇತಿಹಾಸ ಪ್ರಸಿದ್ಧ ಪಾರ್ವತಮ್ಮನ ಬೆಟ್ಟ ಬಳಿ ಒಂಟಿ ಸಲಗ ಕಾಣಿಸಿಕೊಂಡಿದೆ. ಬೆಟ್ಟದ ಸುತ್ತಲು ಮೀಸಲು ಅರಣ್ಯ ಪ್ರದೇಶವಿದ್ದು, ನೂರಾರು ಅಡಿ ಎತ್ತರದಲ್ಲಿರುವ ಬೆಟ್ಟದ ಬಳಿ ಒಂಟಿ ಸಲಗ ಕಾಣಿಸಿದೆ.


">November 5, 2024

ಇದನ್ನೂ ಓದಿ: VIDEO: ಚಿಕ್ಕಮ್ಮ ರೀಲ್ಸ್​ ಮಾಡೋದರಲ್ಲೇ ಬ್ಯುಸಿ.. ಕಣ್ಮೆದುರೇ ಕೊಚ್ಚಿಕೊಂಡು ಹೋದಳು ಪುಟ್ಟ ಬಾಲಕಿ!

ಪಾರ್ವತಮ್ಮನ ಬೆಟ್ಟದ ಮೇಲೆ ಮಲ್ಲಿಕಾರ್ಜುನಸ್ವಾಮಿ ಹಾಗೂ ಶಿವಪಾರ್ವತಿ ದೇವಾಲಯವಿದೆ. ಪ್ರತಿನಿತ್ಯ ದೇವಾಲಯಕ್ಕೆ ಹಾಗೂ ಬೆಟ್ಟಕ್ಕೆ ಪ್ರವಾಸಿಗರು ಹಾಗೂ ಭಕ್ತರು ಬರುತ್ತಿರುತ್ತಾರೆ. ಇದೀಗ ಒಂಟಿ ಸಲಗವನ್ನು ಕಂಡ ಭಕ್ತರು ಅಚ್ಚರಿಗೊಂಡಿದ್ದಾರೆ. ಅರಣ್ಯ ಇಲಾಖೆ ಈ ಭಾಗದಲ್ಲಿ ಓಡಾಡುವವರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment