/newsfirstlive-kannada/media/post_attachments/wp-content/uploads/2024/02/POLAR_BEER.jpg)
ಹಿಮಕರಡಿಯೊಂದು ಕೆತ್ತಿದಂತೆ ಇರುವ ನೈಸರ್ಗಿಕ ಸಣ್ಣ ಮಂಜುಗಡ್ಡೆ ಮಲಗಿದ ಫೋಟೋವೊಂದಕ್ಕೆ ಪ್ರತಿಷ್ಠಿತ ಈ ವರ್ಷದ ವೈಲ್ಡ್​​ಲೈಫ್ ಫೋಟೋಗ್ರಾಫರ್ ಪ್ರಶಸ್ತಿ ಸಿಕ್ಕಿದೆ. ಅಮೆರಿಕದ ಫೋಟೋಗ್ರಾಫರ್ ನಿಮಾ ಸರಿಖಾನಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೆತ್ತಿದಂತೆ ಇರುವ ಮಂಜುಗಡ್ಡೆ ಮೇಲೆ ಹಿಮ ಕರಡಿ ಪ್ರಶಾಂತವಾಗಿ ನಿದ್ದೆ ಮಾಡುತ್ತಿದೆ. ಈ ಫೋಟೋ ​ ಹವಾಮಾನ ಬದಲಾವಣೆಯ ಕುರಿತ ಉದ್ದೇಶದ ಬಗ್ಗೆ ಒತ್ತಿ ಹೇಳುವಂತಿದೆ. ಅಂದರೆ ಹವಾಮಾನ ವೈಪರಿತ್ಯದಿಂದ ಹಿಮ ಕರಗುತ್ತಿದೆ ಎಂಬುದನ್ನು ಇದು ಹೇಳುತ್ತದೆ. ಹೀಗಾಗಿ ಸುಮಾರು 75 ಸಾವಿರ ಜನರು ಇದಕ್ಕೆ ವೋಟ್ ಮಾಡಿದ್ದರು. ಎಲ್ಲರಿಗಿಂತಲೂ ಅಧಿಕ ವೋಟ್ ಪಡೆದ ಕಾರಣ ಇದೇ ಫೋಟೋಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ.
ಇನ್ನು ಫೋಟೋಗ್ರಾಫರ್ ನಿಮಾ ಸರಿಖಾನಿ ಅವರು ಈ ಫೋಟೋವನ್ನು ನಾರ್ವೆಯ ಸ್ವಾಲ್ಬಾರ್ಡ್ ದ್ವೀಪ ಸಮೂಹದಲ್ಲಿ ಕ್ಲಿಕ್ ಮಾಡಿದ್ದಾರೆ ಎನ್ನಲಾಗಿದೆ. ಈ ಫೋಟೋಗೆ ಐಸ್​ ಬೆಡ್​ ಎಂದು ಟೈಟಲ್​ ಅನ್ನು ಕೊಡಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಫುಲ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us