ಜಗತ್ತಿನ ನಿದ್ದೆಗೆಡಿಸಿದ್ದ ಬಾಬಾ ವಂಗಾ.. ಈ ಬಾರಿ ನುಡಿದ ಭವಿಷ್ಯವಾಣಿ ಏನು..? ನಾಳೆ ಏನಾಗುತ್ತೆ?

author-image
Veena Gangani
Updated On
ಜಗತ್ತಿನ ನಿದ್ದೆಗೆಡಿಸಿದ ಬಾಬಾ ವಂಗಾ ಭವಿಷ್ಯವಾಣಿ.. 2024ರ ಬಗ್ಗೆ ಇವ್ರು ಹೇಳಿದ್ದೇನು..?
Advertisment
  • ಸುನಾಮಿ, ಭೂಕಂಪ ಬಗ್ಗೆ ಭವಿಷ್ಯ ನುಡಿದ ಬಾಬಾ ವಂಗಾ
  • ಬಾಬಾ ವಂಗಾರ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ
  • ಜುಲೈ 5ರಂದು ಈ ದೇಶದಲ್ಲಿ ದೊಡ್ಡ ವಿಪತ್ತು ಅಪ್ಪಳಿಸಲಿದೆ!

ಸುನಾಮಿ, ಭೂಕಂಪ, ಭಯೋತ್ಪಾದಕ ದಾಳಿ, ಯುದ್ಧಗಳ ಬಗ್ಗೆ ಭವಿಷ್ಯ ನುಡಿಯುವ ಬಾಬಾ ವಂಗಾ 2025ರ ಬಗ್ಗೆ ಕೆಲ ಭವಿಷ್ಯಗಳು ಸಂಚಲನ ಸೃಷ್ಟಿಸಿವೆ. ಇದುವರೆಗೂ ಬಾಬಾ ವಂಗಾರ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ ಅನ್ನೋ ನಂಬಿಕೆ ಇದೆ. ಜುಲೈ 5ರಂದು ಜಗತ್ತಿಗೆ ವಿಪತ್ತು ಸಂಭವಿಸಲಿದ್ದು, ಬಹುಶಃ ಭೂಕಂಪ ಅಥವಾ ಸುನಾಮಿ ದೇಶವನ್ನು ಅಪ್ಪಳಿಸುತ್ತದೆ ಎಂದು ಭವಿಷ್ಯಗಾರ್ತಿ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ.

ಇದನ್ನೂ ಓದಿ:ಗುಡ್​​ನ್ಯೂಸ್​ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್​ವುಡ್ ನಟಿ

ಜುಲೈ 2025ರಲ್ಲಿ ಜಗತ್ತಿಗೆ ದೊಡ್ಡ ನೈಸರ್ಗಿಕ ವಿಕೋಪವೊಂದು ಅಪ್ಪಳಿಸಲಿದೆ ಎಂದು ಬಾಬಾ ವಂಗಾ ಊಹೆ ಮಾಡಿದ್ದರು. ಇದೀಗ ಬಾಬಾ ವಂಗಾ ಮಾತುಗಳು ಸಂಚಲನ ಸೃಷ್ಟಿಸಿದೆ. ಬಾಗ್ಲೇರಿಯನ್ ಭವಿಷ್ಯ ಹೇಳುವ ಬಾಬಾ ವಂಗಾ ಅವರು ಹೇಳುವ ಭವಿಷ್ಯವಾಣಿಗಳು ಯಾವಾಗಲೂ ಸುದ್ದಿಯಲ್ಲಿರುತ್ತವೆ. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದಾರೆ.

publive-image

ಈಗ, ಬಾಬಾ ವಂಗಾ ಅವರ 'ದಿ ಫ್ಯೂಚರ್' ಪುಸ್ತಕವು ಜುಲೈ ತಿಂಗಳಲ್ಲಿ ದೊಡ್ಡ ಪ್ರವಾಹ ಸಂಭವಿಸುತ್ತದೆ ಎಂದು ಹೇಳುತ್ತದೆ. ಇದರಿಂದಾಗಿ ಜುಲೈ ತಿಂಗಳಲ್ಲಿ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸುತ್ತವೆ. ಈ ಎಲ್ಲಾ ಬದಲಾವಣೆಗಳು ಪರಿಸರ, ರೋಗಗಳು ಮತ್ತು ವಿಶ್ವ ರಾಜಕೀಯಕ್ಕೆ ಸಂಬಂಧಿಸಿರಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ. ಬಾಬಾ ವಂಗಾ ಅವರ ಈ ಭವಿಷ್ಯವಾಣಿಯು ನಿಜವಾಗಲಿದೆ ಎಂದು ಹೇಳಲಾಗುತ್ತಿದೆ, ಏಕೆಂದರೆ ಜಪಾನಿನ ಬಾಬಾ ವಂಗಾ ಕೂಡ ಇದೇ ರೀತಿಯ ಭವಿಷ್ಯವಾಣಿಯನ್ನು ನೀಡಿದ್ದಾರೆ.

publive-image

ಅವರ ಒಂದು ಪುಸ್ತಕದಲ್ಲಿ, ಜುಲೈ 5 ರಂದು ಜಪಾನ್‌ಗೆ ದೊಡ್ಡ ವಿಪತ್ತು ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಜಪಾನ್‌ನಲ್ಲಿ ಸುನಾಮಿ ಅಪ್ಪಳಿಸಲಿದ್ದು, ಸಮುದ್ರದಲ್ಲಿ ಮೂರು ಪಟ್ಟು ಹೆಚ್ಚಿನ ಅಲೆಗಳು ಎದ್ದಿದ್ದು, ಇದು ದೊಡ್ಡ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ. ಹೀಗಾಗಿ ಜಪಾನಿನ ಬಾಬಾ ವಂಗಾ ಅವರ ಈ ಭವಿಷ್ಯವಾಣಿಯು ಪ್ರಸ್ತುತ ವೈರಲ್ ಆಗುತ್ತಿದೆ. ಇದರಿಂದಾಗಿ, ಅನೇಕ ಜನರು ತಮ್ಮ ಹೋಟೆಲ್ ಮತ್ತು ವಿಮಾನ ಟಿಕೆಟ್ ಬುಕಿಂಗ್ ಅನ್ನು ಸಹ ರದ್ದುಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment