BBK11: ಬಿಗ್​ಬಾಸ್‌ ಮನೆಯಲ್ಲಿ 9ನೇ ವಾರಕ್ಕೆ ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಆಗುತ್ತಾ? ಏನಿದು ಹೊಸ ಟ್ವಿಸ್ಟ್‌?

author-image
Veena Gangani
Updated On
BBK11: ಗೌತಮಿ ಜಾಧವ್​ ಮೇಲೆ ಅಸಮಾಧಾನ ಹೊರಹಾಕಿದ ಮೋಕ್ಷಿತಾ ಪೈ.. ಏನದು?
Advertisment
  • ಒಂದು ಕಡೆ ಶಿಶಿರ್​ ಮತ್ತೊಂದು ಕಡೆ ಉಗ್ರಂ ಮಂಜು ಚರ್ಚೆ
  • ಬಿಗ್​ಬಾಸ್​ ಒಂದೇ ಮನೆಯಲ್ಲಿ ಎರಡೆರಡು ತಂಡ ರಚನೆ
  • ಯಾರಾಗ್ತಾರೆ ಮುಂದಿನ ವಾರದ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11 9ನೇ ವಾರಕ್ಕೆ ಕಾಲಿಟ್ಟಿದೆ. ಇನ್ಮುಂದೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳಿಗೆ ಆಟ ಕಷ್ಟವಾಗುತ್ತಾ ಹೋಗುತ್ತದೆ.

ಇದನ್ನೂ ಓದಿ:ಉಪಚುನಾವಣೆ ಮಹಾ ವಿಜಯ, ಕೈ ಪಾಳಯದ ಹೊಸ ಲೆಕ್ಕಾಚಾರ; ಗೃಹಲಕ್ಷ್ಮೀ ಸಂಘಗಳ ಸ್ಥಾಪನೆಗೆ ಚಿಂತನೆ

publive-image

ದಿನಕೊಂದು ಹೊಸ ಹೊಸ ಟಾಸ್ಕ್​ ಕೊಡುತ್ತಾ ಹೋಗುತ್ತಾರೆ ಬಿಗ್​ಬಾಸ್​. ಇದರ ಮಧ್ಯೆ ಸ್ಪರ್ಧಿಗಳು ಕ್ಯಾಪ್ಟನ್ಸಿ ಪಟ್ಟಕ್ಕಾಗಿ ನಿದ್ದೆಯನ್ನು ಬಿಟ್ಟು ಲೆಕ್ಕಾಚಾರ ಶುರು ಮಾಡಿಕೊಂಡಿಕೊಂಡಿದ್ದಾರೆ.

publive-image

ಹೌದು, ಈಗ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಬಿಗ್​ಬಾಸ್​ ಮನೆಯಲ್ಲಿ ಎರಡು ತಂಡಗಳಾಗಿ ಬದಲಾಗಿ ಹೋಗಿದೆ. ಒಂದು ಕಡೆ ಗೌತಮಿ, ಮಂಜು, ತ್ರೀವಿಕ್ರಮ್​, ಭವ್ಯಾ ಗೌಡ. ಮತ್ತೊಂದು ಕಡೆ ಶಿಶಿರ್​, ಐಶ್ವರ್ಯ, ಮೋಕ್ಷಿತಾ ಹಾಗೂ ಚೈತ್ರಾ ಕುಂದಾಪುರ. ಬಿಗ್​ಬಾಸ್​ ಮನೆಯಲ್ಲಿ ಲೈಟ್ಸ್​ ಆಫ್​ ಆದರು ಕೂಡ ಯಾರು ಮಲಗಿಕೊಳ್ಳದೇ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ.

ಒಂದು ಕಡೆ ಕ್ಯಾಪ್ಟನ್ಸಿ ಟಾಸ್ಕ್​ ಅನ್ನು ಬಿಡುವ ಮಾತೇ ಇಲ್ಲ ಅಂತ ಗೌತಮಿ ಹೇಳಿದ್ರೆ, ಮತ್ತೊಂದು ಕಡೆ ನಾವೆಲ್ಲಾ ನಮ್ಮ ರೀತಿಯಲ್ಲಿ ಆಟ ಆಡೋಣ ಅಂತ ಐಶ್ವರ್ಯ ಟೀಮ್ ಮಾತಾಡಿಕೊಳ್ಳುತ್ತಿದ್ದಾರೆ. ಸದ್ಯ ಮುಂದಿನ ವಾರ ಯಾರು ಕ್ಯಾಪ್ಟನ್ಸಿ ಪಟ್ಟವನ್ನು ಸ್ವೀಕರಿಸುತ್ತಾರೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment