/newsfirstlive-kannada/media/post_attachments/wp-content/uploads/2025/04/Manvanth_Kumar_MYS.jpg)
ಯಂಗ್ ಆಲ್ರೌಂಡರ್ ಎಲ್ ಮನ್ವಂತ್ ಕುಮಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇರುವ ಮತ್ತೊಬ್ಬ ಕನ್ನಡಿಗ. ಕೆ.ಎಲ್ ರಾಹುಲ್ ಅವರು ಇರುವ ತಂಡದಲ್ಲೇ ಮನ್ವಂತ್ ಕುಮಾರ್ ಕೂಡ ಇದ್ದಾರೆ. ಈ ಬಾರಿಯ ಮೆಗಾ ಆಕ್ಷನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 30 ಲಕ್ಷ ಹಣ ನೀಡಿ 21 ವರ್ಷದ ಯುವ ಆಟಗಾರರನ್ನ ಖರೀದಿ ಮಾಡಿತ್ತು. ಈತನ ಪರ್ಫಾಮೆನ್ಸ್ ಮೆಚ್ಚಿಯೇ ಗಾಳ ಹಾಕಿದ್ದ ಡೆಲ್ಲಿ, ಸದ್ಯ ಇಂದಿನ ಆರ್ಸಿಬಿ ಜೊತೆಗಿನ ತವರು ನೆಲದಲ್ಲಿ ಕನ್ನಡಿಗನಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.
ಎಲ್ ಮನ್ವಂತ್ ಕುಮಾರ್ ಯಾರು ಎಂದು ನೋಡುವುದಾದ್ರೆ, ಇವರು ಮೂಲತಹ ಸಾಂಸ್ಕೃತಿಕ ನಗರಿ ಮೈಸೂರಿನವರು. 2004ರ ಜನವರಿ 11 ರಂದು ಜನಿಸಿದ್ದು ಇಲ್ಲಿಗೆ ಇವರಿಗೆ 21 ವರ್ಷಗಳು ಆಗಿವೆ. ಮೊದಲಿನಿಂದಲೂ ಕ್ರಿಕೆಟ್ ಅನ್ನೇ ಜೀವನವಾಗಿ ರೂಪಿಸಿಕೊಂಡಿದ್ದಾರೆ. ಈಗ ಮಹತ್ವದ ಟೂರ್ನಿಯಲ್ಲೂ ಸ್ಥಾನ ಪಡೆದಿದ್ದು ಡೆಲ್ಲಿ ತಂಡದಿಂದ ಇಂದು ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಶತಕ.. ಈ ಯಂಗ್ ಬ್ಯಾಟರ್ನ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಎಂದ್ರೆ..?
ಈಗಾಗಲೇ ಆಲ್ರೌಂಡರ್ ಎಂದು ಹೇಳಿದಂತೆ ಲೆಫ್ಟ್ಹ್ಯಾಂಡ್ ಬ್ಯಾಟಿಂಗ್ ಮಾಡುವ ಮನ್ವಂತ್ ಕುಮಾರ್, ರೈಟ್ ಆರ್ಮ್ ಫಾಸ್ಟ್ ಮೀಡಿಯಂ ಬೌಲಿಂಗ್ ಮಾಡುತ್ತಾರೆ. ಯುವ ಆಲ್ರೌಂಡರ್ ಸದ್ಯ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದು ಆ ಆಸೆ ಇಂದು ನೆರವೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪಂದ್ಯ ಆರಂಭದ ಬಳಿಕ ಇದೆಲ್ಲಾ ಗೊತ್ತಾಗಲಿದೆ.
ಇದಕ್ಕೆ ತಂಡದಲ್ಲಿ ಹಿರಿಯ ಆಟಗಾರರ ಕೃಪೆ ಕೂಡ ಕೆಲವೊಮ್ಮೆ ಬೇಕಾಗುತ್ತದೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಸ್ಟಾರ್ ಬ್ಯಾಟರ್, ಸ್ಟೈಲೀಶ್ ಬ್ಯಾಟರ್ ಕೆ.ಎಲ್ ರಾಹುಲ್ ಅವರ ಕೃಪೆ ಇದ್ದರೇ ಮನ್ವಂತ್ ಕುಮಾರ್ಗೆ ಒಂದು ಅತ್ಯುತ್ತಮ ಅವಕಾಶ ಸಿಗಬಹುದು. ಮೈಸೂರಿನ ಆಲ್ರೌಂಡರಿಗೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲೇ ಆರ್ಸಿಬಿ ಜೊತೆಗೆ ಆಡುವ ಒಂದು ಅವಕಾಶ ಸಿಕ್ಕರೇ ಮತ್ತೊಂದು ಅದೃಷ್ಟ ಬೇಕಿಲ್ಲ ಎನ್ನಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ