/newsfirstlive-kannada/media/post_attachments/wp-content/uploads/2025/01/NAGABABU-BHAVISHYA-13.jpg)
ಕಾಲಪುರುಷ ಅಘೋರಿ ನಾಗಾ ಸಾಧು ನಿಜಕ್ಕೂ ಎಚ್ಚರಿಸುತ್ತಿದ್ದಾರೆ. ಮಹಾಕುಂಭಮೇಳಕ್ಕೆ ಬರೋ ಪ್ರತೀ ಪ್ರಜೆಯೂ ಜಾಗೃತಗೊಳ್ಳಬೇಕಿದೆ. ಇಲ್ಲವಾದಲ್ಲಿ ಕಲ್ಕಿ ಸಿನಿಮಾದ ಕಾಶಿ ನಗರದಂತೆಯೇ ಇಡೀ ಜಗತ್ತು ಬದಲಾಗುವ ಸಾಧ್ಯತೆ ಇದೆ ಅನ್ನೋದನ್ನೇ ಅಘೋರಿ ನಾಗಾ ಸಾಧು ತಮ್ಮ ಭವಿಷ್ಯವಾಣಿಯಲ್ಲಿ ಹೇಳುತ್ತಿದ್ದಾರೆ. ಆದರೇ, ಉತ್ತರದ ಗಂಗೆಗೂ, ದಕ್ಷಿಣದ ಕಾವೇರಿಗೂ ಸಂಚಕಾರ ತಪ್ಪಿದ್ದಲ್ಲ ಅನ್ನೋ ಬಹುದೊಡ್ಡ ಎಚ್ಚರಿಕೆ ಈ ಭವಿಷ್ಯವಾಣಿಯಲ್ಲಿ ಇರೋದೇಕೆ? ಮಾ ಗಂಗೆ ಅಳೋದೇಕೆ? ಈ ಭವಿಷ್ಯವಾಣಿಯ ಅಸಲಿ ಅರ್ಥವೇನು ಅನ್ನೋದನ್ನೇ ತೋರಿಸ್ತೀವಿ,
ಭಯ ಪಡಬೇಡ, ಮತ್ತೊಂದು ಪ್ರಪಂಚ ಬರಲಿದೆ. ಇದೊಂದು ಪಕ್ಕಾ ಸಿನಿಮಾ ಕಂಟೆಂಟ್ ಅಂತ ಹೇಳಿಬಿಡಬಹುದು. ಆದರೇ. ಜಗತ್ತು ಸಾಗುತ್ತಿರೋ ರೀತಿ ನೋಡಿದ್ರೆ ಭವಿಷ್ಯವಾಣಿಗಳ ಬಗ್ಗೆ ಎಚ್ಚರದಿಂದಲೇ ಇರಬೇಕಾಗುತ್ತದೆ. ಅದ್ರಲ್ಲೂ ಮಹಾಕುಂಭಮೇಳದಲ್ಲಿ ನಿಂತು ಮುಂದಿನ ಕುಂಭಮೇಳದ ಹೊತ್ತಿಗೆ ಬಹುದೊಡ್ಡ ಬದಲಾವಣೆ ಎದುರಾಗುತ್ತದೆ ಅನ್ನೋ ಕಾಲಪುರುಷ ಅಘೋರಿ ಬಾಬಾ ಭವಿಷ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತಿದೆ.
ಮಾ ಗಂಗೆ ಸ್ಥಿತಿ ಕಣ್ಣಿಂದ ನೋಡೋದಕ್ಕೂ ಆಗೋದಿಲ್ಲವೇ?
ಇವತ್ತು ಮಹಾಕುಂಭಮೇಳದಲ್ಲಿ ಭಾಗಿ ಆಗ್ತಿರೋ ಲಕ್ಷಾಂತರ ಸಾಧು ಸಂತರಿಗೆ, ಕೋಟ್ಯಂತರ ಭಕ್ತರಿಗೆ ಶಾಹಿ ಸ್ನಾನ ಮಾಡಿಸ್ತಿರೋ ಮಾ ಪವಿತ್ರ ಗಂಗೆ ಬಗ್ಗೆಯೇ ಅಘೋರಿ ಸಾಧು ಕಠೋರ ಭವಿಷ್ಯ ನುಡಿದಿದ್ದಾರೆ. ಮುಂದಿನ ಕುಂಭಮೇಳ ಪ್ರಯಾಗದಲ್ಲಿ ನಡೆಯೋದೇ ಅನುಮಾನ ಎನ್ನುತ್ತಿದ್ದಾರೆ.. ಕಾಲಪುರುಷ ಅಘೋರಿ ನಾಗಾ ಸಾಧು ಮತ್ತೆರಡು ಸಾಲಿನ ಭವಿಷ್ಯವಾಣಿ ಮೂಲಕ ನಡುಕ ಹುಟ್ಟಿಸಿದ್ದಾರೆ.
ಮುಂದಿನ ಕುಂಭಮೇಳದ ಹೊತ್ತಿಗೆ ಪವಿತ್ರ ನದಿ ಪಾತ್ರಗಳೇ ಬದಲಾಗಲಿದೆ. ಪವಿತ್ರ ನದಿಗಳಾದ ಗಂಗೆ, ಗೋದಾವರಿ, ಕೃಷ್ಣ, ಕಾವೇರಿಗಳು ದಿಕ್ಕು ಬದಲಿಸಲಿವೆ. ಪವಿತ್ರ ದೇಗುಲಗಳಲ್ಲಿ ಭೂಗರ್ಭ ಸೇರಲಿವೆ. ಯಾತ್ರಾ ಕ್ಷೇತ್ರಗಳು ಕಣ್ಮರೆ ಆಗಲಿವೆ. ಗಂಗಾ ನದಿ ತನ್ನ ಒಡಲನ್ನು ಬರಿದು ಮಾಡಿಕೊಂಡು ಹೊಸ ರೂಪವನ್ನೇ ಪಡೆಯಲಿದೆ ಅನ್ನೋ ಮೂಲಕ ಕಾಲಪುರುಷ ಅಘೋರಿ ಸಾಧು ಅಕ್ಷರಶಃ ಪ್ರಜ್ಞೆ ತಪ್ಪಿ ನಡೀತಿರೋ ಪೀಳಿಗೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮುಂದಿನ ಕುಂಭಮೇಳದ ಹೊತ್ತಿಗೆ ಬಹುದೊಡ್ಡ ಬದಲಾವಣೆ ಆಗಲಿದೆ.. ಸದ್ಯ, ಕಾಲಪುರುಷ ಅಘೋರಿ ನಾಗಾ ಸಾಧು ವಿನಾಶದ ಭವಿಷ್ಯ ಹೇಳುತ್ತಿಲ್ಲ. ಪ್ರಕೃತಿ ಮಾತೆಯೇ ಬಹುದೊಡ್ಡ ಬದಲಾವಣೆ ಮೂಲಕ ಮೈಮರೆತು ಕೂತಿರೋ ಮನುಕುಲಕ್ಕೆ ಚಳಿ ಜ್ವರ ಬಿಡಿಸಲಿದೆಯಂತೆ.
ಇದನ್ನೂ ಓದಿ: ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳಕ್ಕೆ ಭಕ್ತಕೋಟಿ; ಹೇಗಿದೆ ವಿಶೇಷ ರೈಲುಗಳ ವ್ಯವಸ್ಥೆ?
ಕಾಲಪುರುಷ ಅಘೋರಿ ನಾಗಾ ಸಾಧು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲೇ ಬಹುದೊಡ್ಡ ಮುನ್ಸೂಚನೆ ಸಿಗಲಿದೆ. ನೀರಿನ ಬಹುದೊಡ್ಡ ಅಭಾವ ಎದುರಾಗಲಿದೆಯಂತೆ. ಕಲ್ಕಿ ಸಿನಿಮಾದ ಅದೊಂದು ದೃಶ್ಯವೂ ಸಹ ಇದನ್ನೇ ಹೇಳುತ್ತಿದೆ. ಅಷ್ಟೇ ಅಲ್ಲ. ಪವಿತ್ರ ನದಿಗಳ ರೂಪ ಬದಲಾಗಲಿದೆ. ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುಂ ಅನ್ನೋ ಶ್ಲೋಕದಲ್ಲಿನ ಪವಿತ್ರ ನದಿಗಳ ರೂಪ ಬದಲಾಗಲಿದೆ. ಅಂದ್ರೆ ತಮ್ಮ ದಿಕ್ಕನ್ನೇ ಈ ನದಿಗಳು ಬದಲಿಸಿಬಿಡುವ ಸಾಧ್ಯತೆ ಇದೆ. ಇನ್ನು, ಮಂಜು ಮೆತ್ತಿಕೊಂಡ ಪರ್ವತಶ್ರೇಣಿಗಳು ಕರಗಿ ನೀರಾಗಲಿವೆ. ಇದೇ ವೇಳೆಯೇ ಮಂದಿರಗಳು ಮುಳುಗಬಹುದು ಅನ್ನೋ ಭವಿಷ್ಯವಾಣಿಯನ್ನು ಕಾಲಪುರುಷ ಅಘೋರಿ ನಾಗಾ ಸಾಧು ಹೇಳಿದ್ದಾರೆ.
ಕಾಲಪುರುಷ ಅಘೋರಿ ನಾಗಾ ಸಾಧು ಭವಿಷ್ಯವಾಣಿಯ ಪ್ರಕಾರ ನದಿ ಪಾತ್ರಗಳೇ ಬದಲಾಗಲಿವೆ.. ಹೊಸ ದಿಕ್ಕಿನತ್ತ ಹರಿಯೋ ಗಂಗೆಯಿಂದಾಗಿ ತ್ರಿವೇಣಿ ಸಂಗಮವೇ ಬದಲಾಗಲಿದೆ.. ಹಾಗಾಗಿಯೇ ಮುಂದಿನ ಕುಂಭಮೇಳದ ಸ್ಥಳವೂ ಬದಲಾಗಲಿದೆ ಅನ್ನೋ ಭವಿಷ್ಯವಾಣಿಗೆ ಸಕಲ ಸಾಧು ಸಂತರು ಯೋಚನೆಗೆ ಇಳಿದಿದ್ದಾರೆ. ಇದೇ ಕಾರಣಕ್ಕೇ ಅಘೋರಿ ಬಾಬಾ ಭವಿಷ್ಯವಾಣಿಗೆ ಆಧ್ಯಾತ್ಮದ ರಾಜಧಾನಿಯೇ ನಡುಗಿ ಹೋಗಿದೆ. ಹಾಗಂತ ಕಾಲಪುರುಷ ಅಘೋರಿ ಇದು ವಿನಾಶದ ಮುನ್ಸೂಚನೆ ಅಲ್ಲ ಅನ್ನೋದನ್ನ ಖಚಿತವಾಗಿ ಹೇಳುತ್ತಿದ್ದಾರೆ.. ಪ್ರಕೃತಿ ಮಾತೆಯ ವಿರುದ್ಧವೇ ಮಚ್ಚು ಮಸೆಯೋ ಮನುಕುಲದ ದುರಾಸೆಯ ದಿನಗಳಿಗೆ ಅಂತ್ಯ ಎದುರಾಗಲಿದೆ ಅನ್ನೋದು ಕಾಲಪುರುಷ ಅಘೋರಿ ಭವಿಷ್ಯವಾಣಿ ಅರ್ಥ ಎನ್ನಲಾಗುತ್ತಿದೆ.
ಪ್ರಕೃತಿ ಅನ್ನೋ ತಾಯಿ ಮಡಿಲಿನಲ್ಲಿ ಬೆಳೆದ ಪೀಳಿಗೆ ಇವತ್ತು ನಮ್ಮೊಂದಿಗಿಲ್ಲ. ಅವರ ಸಣ್ಣದೊಂದು ಪಳೆವಳಿಕೆಯೂ ಇಲ್ಲ. ಇದ್ದಿದ್ದರೇ ಎಚ್ಚರಿಕೆಯನ್ನಾದ್ರೂ ನೀಡುತ್ತಿದ್ದರು. ಇನ್ನು, ಮೈಮರೆತು ಕುಳಿತಿರೋ ನಮ್ಮ ಪೀಳಿಗೆಗೆ ಪ್ರಕೃತಿ ಅನ್ನೋದು ಅಕ್ಷರಶಃ ಸರಕಾಗಿದೆಯೇ ವಿನಃ ತಾಯಿ ಅನ್ನೋ ಅಭಿಮಾನವೇ ಇಲ್ಲ.. ಹಿಂದಿನ ಪೀಳಿಗೆ, ಇಂದಿನ ಪೀಳಿಗೆ ಈ ಇಬ್ಬರಿಗೂ ಬುದ್ಧಿ ಕಲಿಸೋ, ಪ್ರಕೃತಿಯೊಂದಿಗೆ ಅರಿತು ಬದುಕೋ ಹೊಸ ಪೀಳಿಗೆ ಬರುತ್ತದೆ ಅನ್ನೋ ಮುನ್ಸೂಚನೆಯನ್ನೂ ಕಾಲಪುರುಷ ಅಘೋರಿ ನಾಗಾ ಸಾಧು ಹೇಳಿದ್ದಾರೆ.. ತಮ್ಮ ಭವಿಷ್ಯವಾಣಿಯುದ್ಧಕ್ಕೂ ಅಘೋರಿ ನಾಗಾ ಸಾಧು ಪ್ರಕೃತಿ ಮಾತೆಯೊಂದಿಗೆ ಹೊಂದಿಕೊಂಡು ಬದುಕದಿದ್ದರೇ ಬಹುದೊಡ್ಡ ಸಮಸ್ಯೆ ಗ್ಯಾರಂಟಿ ಎಂಬುದನ್ನೇ ಹೇಳಿದ್ದಾರೆ.
ಇದನ್ನೂ ಓದಿ: mahakumbh mela: ಬೆಚ್ಚಿ ಬೀಳಿಸುವ ಭವಿಷ್ಯ ವಾಣಿ ನುಡಿದ ಅಘೋರಿ ನಾಗಾ ಸಾಧು; ಇವರು ಹೇಳಿದ ಮಾತು, ಎಚ್ಚರಿಕೆ ಏನು?
ಮಹಾಕುಂಭಮೇಳದಲ್ಲಿ, ಮಾ ಗಂಗೆಯಲ್ಲಿ ಮಿಂದೇಳೋ ಎಷ್ಟೋ ಮಂದಿ ನಮ್ಮೆದುರಿಗಿನ ನಿಸರ್ಗವನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡುತ್ತಿಲ್ಲ. ಕಟ್ಟುನಿಟ್ಟಿನ ಕಟ್ಟಾಳುಗಳಾದ ನಾಗಾ ಸಾಧುಗಳಿಗೆ ಇಂಥಾ ಅಶಿಸ್ತು ಕಂಡರೇ ಕೆಂಡವಾಗುತ್ತಾರೆ. ಆದಾಗ್ಯೂ, ಪ್ರಕೃತಿಯೇ ಪಾಠ ಕಲಿಸಲಿ ಅಂತ ಸುಮ್ಮನಿದ್ದು ಬಿಟ್ಟುಬಿಡುತ್ತಾರೆ.. ಅತ್ಯಂತ ರಹಸ್ಯಮಯ ಅನಿಸೋ ಹಿಮಾಲಯದ ಸಿದ್ಧಾಶ್ರಮದಿಂದ ಬಂದ ಕಾಲಪುರುಷ ಅಘೋರಿ ನಾಗಾ ಸಾಧು ಹೇಳಿದ ಭವಿಷ್ಯ ವಾಣಿ ನಿಜಕ್ಕೂ ದುರಾಸೆ ಮನುಷ್ಯನಿಗೆ ಕಲಿಯೋದಕ್ಕೆ ಒಂದು ಅವಕಾಶ ನೀಡುವಂತೆಯೇ ಇದೆ. ಆಧ್ಯಾತ್ಮದ ರಾಜಧಾನಿಯಲ್ಲಿ ಮುಳುಗೇಳೋ ಭಕ್ತರಿಂದಲೇ ಬದಲಾವಣೆಯ ಹೊಸ ಗಾಳಿ ಬಿಸಿದರೇ ಆ ತಾಯಿ ಗಂಗೆ, ತಂದೆ ಮಹಾಕಾಳನ ಆಶೀರ್ವಾದ ಇರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ