/newsfirstlive-kannada/media/post_attachments/wp-content/uploads/2024/08/SOFTDRINKS-ERA-END-1.jpg)
ನವದೆಹಲಿ: ಭಾರತದಲ್ಲಿ ಸಾಫ್ಟ್​ಡ್ರಿಂಕ್ಸ್​ಗಳ ಯುಗಾಂತ್ಯ ಆರಂಭವಾಗಿದೆಯಾ ಅನ್ನೋ ಮಾತುಗಳು ಸದ್ಯ ಪ್ರಮುಖ ಚರ್ಚೆಯ ವಿಷಯವಾಗಿದೆ. ಜೆನ್​-ಝಡ್ ಅಂದ್ರೆ 1997 ರಿಂದ 2012 ರೊಳಗೆ ಜನಿಸಿರುವ ತಲೆಮಾರು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಈ ಸಾಪ್ಟ್​ಡ್ರಿಂಕ್ಸ್​ಗಳಿಂದ ದೂರ ಉಳಿಯುತ್ತಿದ್ದಾರೆ ಅನ್ನೊ ವರದಿ ಸದ್ಯ ತಜ್ಞರಿಂದ ಹೊರಬೀಳುತ್ತಿದೆ.
ಈಗೀನ ಪೀಳಿಗೆ ದೇಹದಾರೋಗ್ಯಕ್ಕಾಗಿ ಮಾಡುತ್ತಿರುವ ಡಯಟ್​ಗಳು ಸಾಫ್ಟ್​ಡ್ರಿಂಕ್ಸ್​ನಿಂದ ಅವರನ್ನು ದೂರವಿಡುವಂತೆ ಮಾಡಿದೆ. ಪ್ರಮುಖವಾಗಿ ಸಾಫ್ಟ್​ಡ್ರಿಂಕ್ಸ್​ಗಳಲ್ಲಿರುವ ಸಕ್ಕರೆ ಅಂಶ ಅವರನ್ನು ಅದರಿಂದ ವಿಮುಖರನ್ನಾಗಿ ಮಾಡುವಂತೆ ಮಾಡಿದೆ. ಒಂದು 500 ಎಂಎಲ್​ ಸಾಫ್ಟ್​ಡ್ರಿಂಕ್ಸ್​ನಲ್ಲಿ ಸುಮಾರು 54 ರಿಂದ 60 ಗ್ರಾಮ್ಸ್​ನಷ್ಟು ಸಕ್ಕರೆ ಅಂಶ ಇರುತ್ತದೆ. ಅಂದ್ರೆ 13 ರಿಂದ 14 ಟೀ ಸ್ಪೂನ್​ನಷ್ಟು ಸಕ್ಕರೆ ಅಂಶ ಇರುತ್ತದೆ.
/newsfirstlive-kannada/media/post_attachments/wp-content/uploads/2024/08/SOFTDRINKS-ERA-END.jpg)
ಕಾರಣ ಇದೊಂದೇ ಅಲ್ಲಾ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಆಗುತ್ತಿರುವ ಬೆಲೆ ಏರಿಕೆಯೂ ಕೂಡ ಸಾಫ್ಟ್​ಡ್ರಿಂಕ್ಸ್​ ಸೇವನೆಯ ಮೇಲೆ ಪರಿಣಾಮ ಬೀರಿದೆ. ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಮಾಡುವಾಗಲೂ ಇತ್ತೀಚೆಗೆ ಸಾಫ್ಟ್​​ಡ್ರಿಂಕ್ಸ್​ನ್ನು ಬೇರೆಯಿಟ್ಟು ಆರ್ಡರ್ ಮಾಡುತ್ತಿದ್ದಾರೆ ಅನ್ನೋ ವರದಿಗಳು ಕೂಡ ಬರುತ್ತಿವೆ.
ಹೊಸ ತಲೆಮಾರಿನ ಆರೋಗ್ಯಕರ ಜೀವನ ಶೈಲಿ.
ಹಲವು ಅಧ್ಯಯನಗಳು ಹೇಳುವ ಪ್ರಕಾರ, ಈ ತಲೆಮಾರು ಅಂದ್ರೆ ಈಗಾಗಲೇ ಹೇಳಿದಂತೆ ಜೆನರೇಷನ್ ಝಢ್​ ಇದೆಯಲ್ಲಾ, ಇವರು ಅತ್ಯಂತ ಶ್ರೇಷ್ಠ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರತ್ತ ಗಮನ ಹರಿಸಿದ್ದಾರೆ. ಇತ್ತೀಚೆಗೆ ಮಿಂಟೆಲ್ ಅನ್ನೋ ಸಂಸ್ಥೆ ನಡೆಸಿದ ವರದಿ ಪ್ರಕಾರ ಭಾರತದಲ್ಲಿ ಶೇಕಡಾ 33 ರಷ್ಟು ಈ ಪೀಳಿಗೆಗಳು ನವಜೀವನ ಶೈಲಿಯತ್ತ ಮುಖ ಮಾಡಿವೆ. ಅತ್ಯುತ್ತಮ ಆಹಾರ ಪದ್ಧತಿ, ಸರಿಯಾದ ನಿದ್ದೆ, ತ್ವಚೆಯ ಬಗ್ಗೆ ಕಾಳಜಿ ಹೀಗೆ ಹಲವು ರೀತಿಯ ಆರೋಗ್ಯ ಕಾಳಜಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಆರೋಗ್ಯಕ ಪೋಷಕಾಂಶಯುಕ್ತ ಮತ್ತು ಪೌಷ್ಠಿಕಾಂಶವುಳ್ಳ ಆಹಾರದ ಕಡೆಗೆ ಅವರ ಗಮನ ಹರಿದಿದೆ. ಅದಿರಂದಾಗಿ ಹೆಚ್ಚು ಹೆಚ್ಚು ಯುವಕರು ಈ ಸಾಫ್ಟ್​ಡ್ರಿಂಕ್ಸ್​ನಿಂದ ದೂರ ಉಳಿಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/SOFTDRINKS-ERA-END-2.jpg)
ಇದನ್ನೂ ಓದಿ:ಡೈರಿ ಉತ್ಪನ್ನಗಳ ಕಂಪನಿಗಳಿಗೆ FSSAI ಖಡಕ್ ವಾರ್ನಿಂಗ್: ಎ1, ಎ2 ಗುಣಮಟ್ಟದ ಬಗ್ಗೆ ಸ್ಪಷ್ಟನೆ ನೀಡುವಂತೆ ತಾಕೀತು
ಹೀಗಾಗಿ ಭಾರತದಲ್ಲಿ ಸಾಪ್ಟ್​​ಡ್ರಿಂಕ್ಸ್​ಗಳ ಯುಗ ಅಂತ್ಯಗೊಳ್ಳುವ ಸನಿಹಕ್ಕೆ ಬಂದಿದೆಯಾ ಅನ್ನೋ ಅನುಮಾನಗಳು ಶುರುವಾಗಿವೆ. ಅದರಲ್ಲೂ ಡಯಟ್​ ಪರಿಣಿತರು ಸಾಫ್ಟ್​ಡ್ರಿಂಕ್ಸ್​​ಗಳಿಂದ ದೂರ ಇರಿ ಅಂತ ಪದೇ ಪದೇ ಹೇಳುವುದು ಕೂಡ ಸಾಫ್ಟ್​ಡ್ರಿಂಕ್ಸ್​ ಖರೀದಿಯ ಮೇಲೆ ದೊಡ್ಡ ಪ್ರಭಾವ ಬೀರಿದೆ. ಹೈದ್ರಾಬಾದ್​​ನ ಸಿಟಿಜನ್ಸ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯ ಡಾ ಪಾಪಾರಾವ್ ನಡಾಕುಡುರು ಅವರು ಹೇಳುವ ಪ್ರಕಾರ ಈಗೀನ ಕಾಲದ ಮಕ್ಕಳು ಆರೋಗ್ಯದ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುತ್ತಿದ್ದಾರೆ. ನಾನು ಗಮನಿಸಿದಂತೆ ಸಾಫ್ಟ್​ಡ್ರಿಂಕ್ಸ್ ವಿಚಾರದಲ್ಲಿ ಅವರ ಆಯ್ಕೆಗಳು ತುಂಬಾ ಬದಲಾಗಿವೆ. ಮತ್ತು ಆದಷ್ಟು ಅವುಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us