ಡೊನಾಲ್ಡ್​ ಟ್ರಂಪ್​ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದ ಭಾರತೀಯರು.. ಈ ಮಹತ್ವದ ಸ್ಥಾನಗಳು ಸಿಗುತ್ತಾ?

author-image
Bheemappa
Updated On
ಡೊನಾಲ್ಡ್​ ಟ್ರಂಪ್​ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದ ಭಾರತೀಯರು.. ಈ ಮಹತ್ವದ ಸ್ಥಾನಗಳು ಸಿಗುತ್ತಾ?
Advertisment
  • ಟ್ರಂಪ್ ಸರ್ಕಾರದಲ್ಲಿ ಯಾರ್ ಯಾರಿಗೆ ಯಾವ್ಯಾವ ಸ್ಥಾನ..?
  • ಎಲಾನ್‌ ಮಸ್ಕ್​ಗೆ ಆಡಳಿತಾತ್ಮಕ ಹುದ್ದೆ ಸಿಗುವ ಸಾಧ್ಯತೆ ಇದೆ
  • ಭಾರತ ಮೂಲದವರನ್ನ ನೇಮಿಸಲು ಅಮೆರಿಕ ಸಕಲ ಸಿದ್ಧತೆ

ಅಮೆರಿಕದಲ್ಲಿ ಡೆಮಾಕ್ರಟಿಕ್‌ ಕೋಟೆಯನ್ನ ಭೇದಿಸಿರುವ ಡೊನಾಲ್ಡ್‌ ಟ್ರಂಪ್‌ ಮತ್ತೊಂದು ಬಾರಿ ಅಧ್ಯಕ್ಷರಾಗುವುದು ಖಚಿತವಾಗಿದೆ. ಡೊನಾಲ್ಡ್‌ ಟ್ರಂಪ್‌ ಗೆಲ್ಲಲು ಇಂಡೋ-ಅಮೆರಿಕನ್‌ ಲೀಡರ್‌ಗಳು ಪ್ರಮುಖ ಪಾತ್ರ ವಹಿಸಿರುವುದರಿಂದ ಒಂದಿಷ್ಟು ಭಾರತ ಮೂಲದ ಅಮೆರಿಕನ್ನರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡುವ ಸಾಧ್ಯತೆ ಇದೆ.

ಡೊನಾಲ್ಡ್‌ ಟ್ರಂಪ್‌ ಟೀಮ್‌ನಲ್ಲಿ ಭಾರತೀಯರದ್ದೇ ಪ್ರಾಬಲ್ಯ!

ಯುನೈಟೆಡ್ ಸ್ಟೇಟ್ಸ್​ನ ಕೇಂದ್ರ ಗುಪ್ತಚರ ಸಂಸ್ಥೆ (CIA). ಜೇಮ್ಸ್ ಬಾಂಡ್ ಸಿನಿಮಾ ಇದರದ್ದೇ ಆಧಾರದ ಸಿನಿಮಾ. ಪ್ರಪಂಚದ ದಿ ಮೋಸ್ಟ್​ ಇಂಟಿಲಿಜೆನ್ಸ್ ಎಜೆನ್ಸಿ. ವಿಶ್ವದಲ್ಲಿ ನಡೆಯೋ ಎಂಥದ್ದೇ ಸುದ್ದಿಗಳ ಕಲೆಕ್ಟ್​ ಮಾಡೋ ಸೋರ್ಸ್​ ಹೊಂದಿರೊ ಈ ಸಂಸ್ಥೆಗೆ ಯಾರು ಅಧ್ಯಕ್ಷರಾಗ್ತಾರೆ ಎಂಬ ಕುತೂಹಲ ನಾನಾ ದೇಶಗಳಲ್ಲಿ ಮೂಡಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಸಂಪುಟ ರಚನೆ ಮಾಡೋ ಮೂಡ್​ನಲ್ಲಿರೋ ಟ್ರಂಪ್​ ಭಾರತ ಮೂಲದವರಾದ ಒಬ್ಬರನ್ನ ನೇಮಿಸಲು ಸಕಲ ಸಿದ್ಧತೆ ನಡೆಸಿದ್ದಾರಂತೆ.

ಇದನ್ನೂ ಓದಿ: ‘ಕ್ಷೇತ್ರದ ಮನೆಗಳನ್ನ ನೋಡಿದ್ರೆ ನನಗೆ ನಾಚಿಕೆ ಆಗುತ್ತೆ’- ಬೊಮ್ಮಾಯಿ ವಿರುದ್ಧ DCM ಡಿ.ಕೆ ಶಿವಕುಮಾರ್ ಆಕ್ರೋಶ

[caption id="attachment_95831" align="alignnone" width="800"]publive-image ವಿವೇಕ್‌ ರಾಮಸ್ವಾಮಿ[/caption]

ಡೊನಾಲ್ಡ್ ಟ್ರಂಟ್​ ಗೆಲುವಿನಲ್ಲಿ ಅನಿವಾಸಿ ಭಾರತೀಯ ಲೀಡರ್ಸ್‌ಗಳ ಪಾತ್ರ ಬಹಳಷ್ಟಿದೆ. ಆದ್ದರಿಂದ ಟ್ರಂಪ್‌ 2.0 ಸರ್ಕಾರದಲ್ಲಿನ ಹಲವು ಆಯಕಟ್ಟಿನ ಹುದ್ದೆಗಳು ಭಾರತದ ಮೂಲದ ನಾಯಕರ ಪಾಲಾಗಲಿವೆ ಎಂಬ ನಿರೀಕ್ಷೆ ಮೂಡಿದೆ. ಈ ಪೈಕಿ ಸಿಐಎ ನಿರ್ದೇಶಕ ಹುದ್ದೆಗೆ ಭಾರತೀಯ ಮೂಲದ ಹಾಗೂ ಡೊನಾಲ್ಡ್ ಟ್ರಂಪ್, ನಿಷ್ಠ ಕಶ್ಯಪ್ ಕಶ್​ ಪಟೇಲ್ ಹೆಸರು ಮುಂಚೂಣಿಯಲ್ಲಿದೆ.

ಯಾರಿದು ಕಶ್ಯಪ್ ಕಶ್​ ಪಟೇಲ್?

ಮಾಜಿ ರಿಪಬ್ಲಿಕನ್ ಪಕ್ಷದ ಸಿಬ್ಬಂದಿಯಾಗಿ, ರಕ್ಷಣಾ ಇಲಾಖೆ ಹಾಗೂ ಗುಪ್ತಚರ ವಿಭಾಗದಲ್ಲಿ ಹಲವಾರು ಉನ್ನತ ದರ್ಜೆಯ ಹುದ್ದೆಗಳನ್ನ ನಿಭಾಯಿಸಿರುವ ಕಶ್ ಪಟೇಲ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅವರು ಈ ಮುನ್ನ ರಕ್ಷಣಾ ಪ್ರಭಾರ ಕಾರ್ಯದರ್ಶಿಯ ಸಿಬ್ಬಂದಿ ಮುಖ್ಯಸ್ಥ ಕ್ರಿಸ್ಟೋಫರ್ ಮಿಲ್ಲರ್ ಅವರ ಕೈಕೆಳಗೆ ಕೆಲಸ ಮಾಡಿದ್ದರು. ಫೆಬ್ರವರಿ 25, 1980ರಂದು ನ್ಯೂಯಾರ್ಕ್​ನಲ್ಲಿ ಜನಿಸಿದ ಪಟೇಲ್, ಪೋಷಕರು ಭಾರತ ಮತ್ತು ಪೂರ್ವ ಆಫ್ರಿಕಾದ ವಲಸಿಗರಾಗಿದ್ದಾರೆ. ಪಟೇಲ್ ಮೂಲತಃ ಗುಜರಾತ್​ನ ವಡೋದರದ ಬೇರು ಹೊಂದಿದ್ದಾರೆ. ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ವ್ಯಾಸಂಗ ಪೂರೈಸಿದ್ದ ಪಟೇಲ್, ನಂತರ ಕಾನೂನು ಪದವಿಯನ್ನ ಪಡೆದಿದ್ದರು. ಇದರೊಂದಿಗೆ ಯೂನಿವರ್ಸಿಟಿ ಕಾಲೇಜ್ ಲಂಡನ್​ನಿಂದ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಪ್ರಮಾಣ ಪತ್ರವನ್ನೂ ಪಡೆದಿದ್ದಾರೆ.

ಇದನ್ನೂ ಓದಿ: ಅಮೆರಿಕದ ನೂತನ ಉಪಾಧ್ಯಕ್ಷ ಭಾರತದ ಅಳಿಯ! ತೆಲುಗು ಕುವರಿ ಉಷಾ ವ್ಯಾನ್ಸ್​ ಬಗ್ಗೆ ನಿಮಗೆ ತಿಳಿದಿದೆಯೇ..?

ಪಟೇಲ್​ ಅಲ್-ಖೈದಾ ಹಾಗೂ ಐಸಿಸ್ ನಂತಹ ಗುಂಪುಗಳ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ವಿರುದ್ಧದ ತನಿಖೆಯ ನೇತೃತ್ವ ವಹಿಸಿದ್ದರು. ಅಲ್-ಬಾಗ್ದಾದಿ, ಖಾಸೆಮ್ ಅಲ್-ರಿಮಿಯ ನಿರ್ಮೂಲನೆ ಹಾಗೂ ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ರು. ಇದಾದ ನಂತರ, ನ್ಯಾಷನಲ್ ಇಂಟಲಿಜೆನ್ಸ್ ಪ್ರಭಾರ ನಿರ್ದೇಶಕರಿಗೆ ಪ್ರಧಾನ ಸಹಾಯಕರಾಗಿ ನೇಮಕಗೊಂಡ ಪಟೇಲ್, 17 ಗುಪ್ತಚರ ಸಂಸ್ಥೆಗಳ ಮೇಲುಸ್ತುವಾರಿ ವಹಿಸಿದ್ದರು.

[caption id="attachment_95832" align="alignnone" width="800"]publive-image ಡೊನಾಲ್ಡ್​ ಟ್ರಂಪ್ ಜೊತೆ ಕಶ್ಯಪ್ ಕಶ್​ ಪಟೇಲ್[/caption]

ಇದರ ಜೊತೆಗೆ ಟ್ರಂಪ್‌ ಸರ್ಕಾರದಲ್ಲಿ ಸ್ಥಾನ ಪಡೆಯಬಹುದಾದ ಪ್ರಮುಖ ಇಂಡೋ-ಅಮೆರಿಕನ್‌ ಯಾರು ಅಂತ ಕೇಳಿದರೆ ಮೊದಲಿಗೆ ಬರುವ ಹೆಸರೇ ವಿವೇಕ್‌ ರಾಮಸ್ವಾಮಿ. 38 ವರ್ಷದ ವಿವೇಕ್‌ ರಾಮಸ್ವಾಮಿ ತಮಿಳುನಾಡಿನ ಮೂಲದವರು. ಉದ್ಯಮಿ ಮತ್ತು ರಾಜಕಾರಣಿ. ಈ ಸಲದ ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿ ರೇಸ್‌ನಲ್ಲಿ ಕೂಡ ಇದ್ದರು. ಅಮೆರಿಕ ಫಸ್ಟ್‌ ಎಂಬ ಸಿದ್ಧಾಂತ ವಿವೇಕ್‌ ರಾಮಸ್ವಾಮಿ ಕೂಡ ಪ್ರತಿಪಾದಿಸುತ್ತಿರುವುದರಿಂದ ಟ್ರಂಪ್‌ ಸರ್ಕಾರದಲ್ಲಿ ಅವರಿಗೆ ಆಯಕಟ್ಟಿನ ಹುದ್ದೆ ಸಿಗುವುದು ಪಕ್ಕಾ ಆಗಿದೆ.

ಇನ್ನು ಚುನಾವಣೆಯಲ್ಲಿ ಟ್ರಂಪ್‌, ಬೆಂಬಲಕ್ಕೆ ಬಲವಾಗಿ ನಿಂತಿದ್ದ ಉದ್ಯಮಿ ಎಲಾನ್‌ ಮಸ್ಕ್​ಗೂ ಪ್ರಮುಖ ಆಡಳಿತಾತ್ಮಕ ಹುದ್ದೆ ಸಿಗುವ ಸಂಭವವಿದೆ. ಟ್ರಂಪ್‌ ಗೆಲುವಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದ ಇಂಡೋ-ಅಮೆರಿಕನ್ನರಿಗೆ ಉನ್ನತ ಹುದ್ದೆಗಳು ರೆಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment