/newsfirstlive-kannada/media/post_attachments/wp-content/uploads/2025/01/NIMISHA-PRIYA-IRAN.jpg)
ಭಾರತೀಯ ಮೂಲದ ಯೆಮೆನ್ ನಿವಾಸಿ ನಿಮಿಷಾ ಪ್ರಿಯಾ ಬಿಡುಗಡೆ ಮಾಡಿಸಲು ದೊಡ್ಡ ಪ್ರಯತ್ನವೊಂದು ಜಾರಿಯಲ್ಲಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹಾಗೂ ನೆರೆ ರಾಷ್ಟ್ರಗಳ ನೆರವು ಕೂಡ ಈ ಪ್ರಕರಣದಲ್ಲಿ ತುಂಬಾ ಪ್ರಮುಖವಾಗುತ್ತವೆ. ಸದ್ಯ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ನಮಗೆ ಸಾಧ್ಯವಾದ ಎಲ್ಲ ಸಹಾಯವನ್ನು ಮಾನವೀಯ ನೆಲೆಗಟ್ಟಿನಲ್ಲಿ ಮಾಡುತ್ತೇವೆ ಎಂದು ಯೆಮೆನ್ನ ನೆರೆಯ ರಾಷ್ಟ್ರ ಇರಾನ್ ಹೇಳಿದೆ. ಕೇರಳ ಮೂಲದ ನರ್ಸ್ ಸದ್ಯ ಯೆಮೆನ್ನಲ್ಲಿ ಕೊಲೆ ಅಪರಾಧ ಹಿನ್ನೆಲೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದು ಅವರನ್ನು ಕಾಪಾಡಲು ಹಲವು ಪ್ರಯತ್ನಗಳು ಭಾರತ ಸರ್ಕಾರದಿಂದ ನಡೆದಿದೆ.
ಇದನ್ನೂ ಓದಿ:ಪಾನಿಪುರಿ ವ್ಯಾಪಾರಿಗೆ ಜಿಎಸ್ಟಿ ನೋಟಿಸ್; ಡಿಜಿಟಲ್ ಪೇಮೆಂಟ್ನಲ್ಲಿ ಗಳಿಸಿದ್ದು ಎಷ್ಟು ಲಕ್ಷ?
ಈ ಬಗ್ಗೆ ಮಾತನಾಡಿರುವ ಇರಾನ್ ಸರ್ಕಾರದ ವಕ್ತಾರರು ಮಾನವೀಯತೆಯ ನೆಲೆಗಟ್ಟಿನಲ್ಲಿ ತೆಹ್ರಾನ್ ಏನು ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನು ಮಾಡಲು ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಸಿದ್ಧವಿದೆ ಎಂದು ಹೇಳಿದ್ದಾರೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಸರ್ಕಾರದ ವ್ಯಾಪ್ತಿಯಲ್ಲಿ ಮಾನವೀಯತೆ ದೃಷ್ಟಿಯಿಂದ ಏನೆಲ್ಲಾ ಸಾಧ್ಯವಿದೆಯೋ ಅದನ್ನು ಮಾಡಲು ನಾವು ಸಿದ್ಧ ಎಂದು ಹೇಳಿದೆ
ಇರಾನ್ನ ಮನವಿಯನ್ನು ಯೆಮೆನ್ ಕೇಳುತ್ತಾ?
ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ನರ್ಸ್ ನಿಮಿಷಾ ಪ್ರಿಯಾರನ್ನ ಹೌಥೀಸ್ ನಿಯಂತ್ರಣದಲ್ಲಿರುವ ಪ್ರದೇಶದಿಂದ ಬಂಧಿಸಲಾಗಿದೆ ಹೀಗಾಗಿ ಬೇರೆ ರಾಷ್ಟ್ರಗಳು ನಿಮಿಷಾಳನ್ನು ಗಲ್ಲು ಶಿಕ್ಷೆಯಿಂದ ಕಾಪಾಡಲು ಪ್ರಯತ್ನ ಮಾಡುವ ಅವಕಾಶವಿದೆ . ಅದರಲ್ಲೂ ಯೆಮೆನ್ನ ಸಾನಾ ಪ್ರದೇಶ ಸಂಪೂರ್ಣವಾಗಿ ಹೌಥಿ ಚಳುವಳಿಗಳ ನಾಯಕ ಅನ್ಸಾರ್ ಅಲ್ಹಾ ನಿಯಂತ್ರಣದಲ್ಲಿದೆ. ಈತನ ಪ್ರತಿನಿಧಿಗಳ ಕಚೇರಿ ಇರಾನ್ನ ರಾಜಧಾನಿ ತೆಹ್ರಾನ್ನಲ್ಲಿದೆ. ಅದು ಮಾತ್ರವಲ್ಲ ಈತ ಇರಾನ್ನ ಸರ್ಕಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಆದ್ರೆ ಇರಾನ್ ಹೇಳುವ ಪ್ರಕಾರ ನೀತಿ ನಿಯಮಗಳ ವಿಷಯದಲ್ಲಿ ಹೌಥಿಸ್ಗಳು ವೈಯಕ್ತಿಕವಾಗಿ ಇರಾನ್ ಮಾತು ಕೇಳುವುದಿಲ್ಲ. ಆದ್ರೆ ನಾವೊಂದು ಸಲಹೆಯನ್ನು ಇಡಬಹುದು. ಆದ್ರೆ ಕೊನೆಯ ನಿರ್ಧಾರ ಅವರದಾಗಿರುತ್ತದೆ ಎಂದು ಹೇಳಿದೆ.
ಯಾರು ಈ ನಿಮಿಷಾ ಪ್ರಿಯಾ? ಗಲ್ಲು ಶಿಕ್ಷೆಯಾಗಿದ್ದು ಏಕೆ?
ಕೇರಳದ ಪಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ ವೃತ್ತಿಯಲ್ಲಿ ನರ್ಸ್, 2008ರಲ್ಲಿ ಅವರು ಯೆಮೆನ್ಗೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುವ ನಿಮಿಷಾ 2011ರಲ್ಲಿ ಟಾಮಿ ಥಾಮಸ್ ಎಂಬ ಎಲೆಕ್ಟ್ರಿಷನ್ನನ್ನು ಮದುವೆಯಾಗುತ್ತಾರೆ. ಈ ಜೋಡಿ ಮುಂದೆ ತಮ್ಮದೇ ಒಂದು ಕ್ಲಿನಿಕ್ ಓಪನ್ ಮಾಡುವ ಕನಸು ಕಂಡಿರುತ್ತದೆ. ಆದ್ರೆ ಯೆಮೆನ್ ಕಾನೂನಿನ ಪ್ರಕಾರ, ಸ್ಥಳೀಯ ಪಾಲುದಾರರಿಲ್ಲದೇ ಕ್ಲಿನಿಕ್ ಆರಂಭ ಮಾಡಲು ಅವಕಾಶವಿಲ್ಲ. ಹೀಗಾಗಿ ಇವರು ತಲಾಲ್ ಅಬ್ದೊ ಮೆಹ್ದಿಯೆಂಬ ಯೆಮೆನ್ ಪ್ರಜೆಯ ಜೊತೆ ಕೈ ಜೋಡಿಸುತ್ತಾರೆ. ದಿನ ಕಳೆದಂತೆ ನಿಮಿಷಾ ಕುಟುಂಬಕ್ಕೆ ಹತ್ತಿರವಾಗುತ್ತಾನೆ ಮೆಹ್ದಿ. 2014ರಲ್ಲಿ ಕ್ಲಿನಿಕ್ ಓಪನ್ಗೆ ಬೇಕಾದ ಸಹಾಯ ಮಾಡುವುದಾಗಿ ಮೆಹ್ದಿ ಹೇಳುತ್ತಾನೆ.
ಇದನ್ನೂ ಓದಿ: ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಜೀವ ಉಳಿಸಲು ಇದೇ ಕೊನೆಯ ದಾರಿ! ಏನಿದು ಬ್ಲಡ್ ಮನಿ?
ದಿನಕಳೆದಂತೆ ಮೆಹ್ದಿ ಪ್ರಿಯಾಳ ದಾಖಲೆಗಳನ್ನು ಅವನ ಪತ್ನಿ ಎನ್ನುವ ರೀತಿ ನಕಲಿಯಾಗಿ ಸೃಷ್ಟಿಸಲು ಆರಂಭಿಸುತ್ತಾನೆ. ನಿಮಿಷಾಳನ್ನ ಶೋಷಣೆ ಮಾಡಲು ಆರಂಭಿಸುತ್ತಾನೆ. ನಿಮಿಷಾಳ ಪ್ರಯಾಣದ ದಾಖಲೆಗಳನ್ನು ಕೂಡ ತಿರುಚಿ ಅವರು ಯೆಮೆನ್ನ ಸಿವಿಲ್ ವಾರ್ನಲ್ಲಿ ಸಿಲುಕುವಂತೆ ಮಾಡುತ್ತಾನೆ.
ಇದರಿಂದ ರೋಸಿ ಹೋದ ಪ್ರಿಯಾ 2017ರಲ್ಲಿ ಮತ್ತೊಬ್ಬ ನರ್ಸ್ ಸಹಾಯದೊಂದಿಗೆ ಅಬ್ದೊ ಮೆಹ್ದಿಯಿಂದ ತನ್ನ ದಾಖಲೆಗಳನ್ನು ವಾಪಸ್ ಪಡೆದುಕೊಳ್ಳಲು ನಿದ್ರೆಯ ಔಷಧಿ ನೀಡುತ್ತಾಳೆ. ಓವರ್ ಡೋಸ್ನಿಂದಾಗಿ ಮೆಹ್ದಿ ಅಸುನೀಗುತ್ತಾನೆ. ಕೊನೆಗೆ ಮೃತದೇಹವನ್ನು ತುಂಡು ತುಂಡು ಮಾಡಿ ವಾಟರ್ ಟ್ಯಾಂಕ್ನಲ್ಲಿ ಬಚ್ಚಿಟ್ಟಿರುತ್ತಾರೆ. 2017 ಜುಲೈನಲ್ಲಿ ಪ್ರಿಯಾ ಅರೆಸ್ಟ್ ಆಗುತ್ತಾರೆ. 2020ರಲ್ಲಿ ಸಾನಾದ ಟ್ರಯಲ್ ಕೋರ್ಟ್ ಅವರಿಗೆ ಮರಣದಂಡನೆ ಶಿಕ್ಷೆ ನೀಡುತ್ತದೆ. ಪ್ರಿಯಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಯೆಮೆನ್ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023ರಂದು ವಜಾಗೊಳಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ