ವಿಲ್ ಜಾಕ್ಸ್ 100 ರನ್ಗಳ ಪೈಕಿ 60 ರನ್ ಬಂದಿದ್ದು ಸಿಕ್ಸರ್ನಿಂದ!
24 ಎಸೆತಗಳಲ್ಲಿ ಗುಜರಾತ್ ಬೌಲರ್ಸ್ಗೆ ನರಕ ದರ್ಶನ ಮಾಡಿಸಿದ್ರು
ಜಾಕ್ಸ್ ಬ್ಯಾಟಿಂಗ್ನಿಂದ ಕೇವಲ 6 ನಿಮಿಷದಲ್ಲೇ ಗೇಮ್ ಬದಲಾಯ್ತು
ಗುಜರಾತ್ ಟೈಟನ್ಸ್ ಎದುರಿನ ಗೆಲುವಿಗಿಂತ ಆರ್ಸಿಬಿ ಅಭಿಮಾನಿಗಳನ್ನ ರಂಜಿಸಿದ್ದು, ವಿಲ್ ಜಾಕ್ಸ್ ಬ್ಯಾಟಿಂಗ್. ಒಂದೊಂದು ಏಟು ಕೂಡ ಸಖತ್.. ಸ್ವತಃ ಕಿಂಗ್ ಕೊಹ್ಲಿ ಕೂಡ ಜಾಕ್ಸ್ ಜಬರ್ದಸ್ತ್ ಆಟವನ್ನ ಕಂಡು ವಾರೆ ವ್ಹಾ.. ಅಂದ್ರು. ಸತತ ಸೋಲನ್ನ ಕಂಡು ಬೇಸತ್ತಿದ್ದ ಫ್ಯಾನ್ಸ್ ಅಂತೂ ಸಖತ್ ಥ್ರಿಲ್ ಆದ್ರು. ವಿಲ್ ಜಾಕ್ಸ್ ಆಟ ಹೇಗಿತ್ತು?.
ಅಬ್ಬಬ್ಬಾ..! ಏನ್ ಬ್ಯಾಟಿಂಗ್ ಗುರು..! ವಿಲ್ ಜಾಕ್ಸ್ ಆಡಿದ ಆಟ ನೋಡಿದ ಪ್ರತಿಯೊಬ್ಬ ಫ್ಯಾನ್ಸ್ ಹೇಳ್ತಿರೋ ಮಾತಿತು. ಬ್ಯಾಟಿಂಗ್ ಅಂದ್ರೆ ಹಿಂಗಿರಬೇಕು. ಬೌಲರ್ ಯಾರು, ಏನ್ ಕಥೆ ಅಂತಾ ಯೋಚನೆ ಮಾಡೋ ಸೀನೆ ಇಲ್ಲ.. ದಂಡಂ ದಶಗುಣಂ ಅಷ್ಟೇ.
ಇದನ್ನೂ ಓದಿ: ನಗುನಗುತಾ ಕಳುಹಿಸಿಕೊಡಿ ಎಂದಿದ್ರಂತೆ ಶ್ರೀನಿವಾಸ್ ಪ್ರಸಾದ್.. ಅಪ್ಪನ ಕುರಿತು ಹಿರಿಯ ಮಗಳು ಭಾವುಕ ನುಡಿಗಳು
ನಮೋ ಅಂಗಳದಲ್ಲಿ ವಿಲ್ ಜಾಕ್ಸ್ ವೀರಾವೇಷ..!
ನಮೋ ಮೈದಾನದಲ್ಲಿ 201 ರನ್ಗಳ ಬಿಗ್ ಟಾರ್ಗೆಟ್ ಚೇಸಿಂಗ್ಗಿಳಿದ ಆರ್ಸಿಬಿ ಆರಂಭದಲ್ಲೇ ಎಡವಿತು. ಕ್ಯಾಪ್ಟನ್ ಡುಪ್ಲೆಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. ಈ ಪಂದ್ಯನೂ ದೇವ್ರಿಗೆ ಅಂತಾ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ, ಎಲ್ಲರ ಲೆಕ್ಕಾಚಾರವನ್ನ ವಿಲ್ ಜಾಕ್ಸ್ ಬುಡಮೇಲು ಮಾಡಿದ್ರು. ವೀರಾವೇಷದ ಇನ್ನಿಂಗ್ಸ್ ಹಂಗಿತ್ತು.
ಗುಜರಾತ್ ಬೌಲರ್ಗಳ ಚಳಿ ಬಿಡಿಸಿದ ವಿಲ್ ಜಾಕ್ಸ್.!
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲ್ ಜಾಕ್ಸ್, ಅತ್ಯಮೋಘ ಆಟವಾಡಿದ್ರು. ಸೆಟಲ್ ಆಗೋವರೆಗೆ ಎಚ್ಚರಿಕೆಯ ಆಟವಾಡಿದ ವಿಲ್ ಜಾಕ್ಸ್, ನಂತರದಲ್ಲಿ ಘರ್ಜಿಸಿದ್ರು. ವಿಲ್ ಜಾಕ್ಸ್ ಆರ್ಭಟವನ್ನ ಕಂಡು ಗುಜರಾತ್ ಬೌಲರ್ಸ್ ಬೆಸ್ತು ಬಿದ್ರು. ರಣಾರ್ಭಟಕ್ಕೆ ಬ್ರೇಕ್ ಹಾಕೋದ್ಹೇಗೆ ಅನ್ನೋದೆ ತಿಳಿಯದೇ ತಲೆ ಮೇಲೆ ಕೈ ಹೊತ್ತು ಬಿಟ್ರು.
ಮೊದಲ 17 ಎಸೆತ, 17 ರನ್, ನಂತರದ 24 ಎಸೆತಕ್ಕೆ 83 ರನ್.!
ಪ್ಯಾಡ್ ಕಟ್ಟಿ ಕ್ರಿಸ್ಗೆ ಬಂದ ವಿಲ್ ಜಾಕ್ಸ್, ಎಚ್ಚರಿಕೆಯ ಆಟ ಮೊರೆ ಹೋಗಿದ್ರು. ಮೊದಲ 17 ಎಸೆತಗಳಲ್ಲಿ ಕೇವಲ 17 ರನ್ ಮಾತ್ರಗಳಿಸಿದ್ರು. ಆದ್ರೆ, ನಂತರದ 24 ಎಸೆತಗಳಲ್ಲಿ ಗುಜರಾತ್ ಬೌಲರ್ಸ್ಗೆ ನರಕ ದರ್ಶನ ಮಾಡಿಸಿಬಿಟ್ರು. ಬೌಂಡರಿ, ಸಿಕ್ಸರ್ಗಳಲ್ಲಿ ರನ್ ಡೀಲ್ ಮಾಡಿ 83 ರನ್ ಚಚ್ಚಿದ್ರು. ಗಳಿಸಿದ 100 ರನ್ಗಳ ಪೈಕಿ 60 ರನ್ ಬಂದಿದ್ದು ಸಿಕ್ಸರ್ಗಳಿಂದ ಅಂದ್ರೆ ನೀವೇ ಊಹೆ ಮಾಡಿ ಹೆಂಗಿತ್ತು ಆಟ ಅಂತಾ.
ಗುಜರಾತ್ ಎದುರು ವಿಲ್ ಜಾಕ್ಸ್
ಪಂದ್ಯದಲ್ಲಿ 41 ಎಸೆತಗಳನ್ನ ಎದುರಿಸಿದ ವಿಲ್ ಜಾಕ್ಸ್ ಅಜೇಯ 100 ರನ್ ಸಿಡಿಸಿದ್ರು. ಬರೋಬ್ಬರಿ 243.90ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ 5 ಬೌಂಡರಿ, 10 ಸಿಕ್ಸರ್ ಚಚ್ಚಿದ್ರು.
ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್ ಅಬ್ಬರ, ಎಲ್ಲಿ?
ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ
ರಶೀದ್ ಖಾನ್.. ಟಿ20 ಕ್ರಿಕೆಟ್ ಲೋಕ ಕಂಡ ಲೆಜೆಂಡ್ ಎನಿಸಿಕೊಂಡಿದ್ದಾರೆ. ಇಂತಾ ಲೆಜೆಂಡ್ಗೆ 25 ವರ್ಷದ ವಿಲ್ ಜಾಕ್ಸ್ ನರಕ ದರ್ಶನ ಮಾಡಿಸಿದ್ರು. ಓವರ್ಗಳಲ್ಲಿ 4 ಸಿಕ್ಸರ್, 5 ಬೌಂಡರಿ ಸಿಡಿಸಿ ರಶೀದ್ ಖಾನ್ಗೆ ಶಾಕ್ ಕೊಟ್ರು. ಅದಕ್ಕೂ ಹಿಂದಿನ ಮೋಹಿತ್ ಶರ್ಮಾ ಓವರ್ನಲ್ಲಿ 29 ರನ್ ಚಚ್ಚಿದ್ರು. ಸಂಜೆ 6.41ಕ್ಕೆ ಅರ್ಧಶತಕ ಪೂರೈಸಿದ ವಿಲ್ಜಾಕ್ಸ್, 6.47ಕ್ಕೆ ಸೆಂಚುರಿ ಸಿಡಿಸಿದ್ರು. ಜಸ್ಟ್ ಆರೇ ನಿಮಿಷದಲ್ಲಿ ಗೇಮ್ ಬದಲಾಯಿಸಿ ಬಿಟ್ರು.
ವಿಲ್ ಜಾಕ್ಸ್ ರಣಾರ್ಭಟಕ್ಕೆ ದಂಗಾದ ಕಿಂಗ್ ಕೊಹ್ಲಿ.!
ಒಂದೆಡೆ ವಿಲ್ ಜಾಕ್ಸ್ ಬೌಲರ್ಗಳ ರುಬ್ತಾ ಇದ್ರೆ, ಕಿಂಗ್ ಕೊಹ್ಲಿ ಕೂಡ ದಂಗಾಗಿ ಹೋದ್ರು. ವಿಲ್ ಜಾಕ್ಸ್ ಸಿಡಿಸಿದ ಒಂದೊಂದು ಸಿಕ್ಸರ್ಗಳನ್ನ ವಿರಾಟ್ ಕೊಹ್ಲಿ ಸಖತ್ ಎಂಜಾಯ್ ಮಾಡಿದ್ರು. ಶತಕ ಸಿಡಿಸಿದ ಬೆನ್ನಲ್ಲೇ ಜಾಕ್ಸ್ನ ಹಗ್ ಮಾಡಿಕೊಂಡು ಫುಲ್ ಸಂಭ್ರಮಿಸಿದ್ರು. ಕೊಹ್ಲಿ ಮಾತ್ರವಲ್ಲ.. ಆರ್ಸಿಬಿಯ ಸತತ ಸೋಲುಗಳನ್ನ ಕಂಡು ಬೇಸತ್ತಿದ್ದ ಆರ್ಸಿಬಿ ಫ್ಯಾನ್ಸ್ ಕೂಡ ಫುಲ್ ಖುಷ್ ಆದ್ರು. ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ಸಿಕ್ಕ ಖುಷಿಯಲ್ಲಿ ತೇಲಾಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ