newsfirstkannada.com

6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್​ ಆ 6 ನಿಮಿಷದ ವಿಲ್​ ಜಾಕ್ಸ್ ಬ್ಯಾಟಿಂಗ್​ ರಣಾರ್ಭಟ ಹೇಗಿತ್ತು?

Share :

Published April 29, 2024 at 10:18am

    ವಿಲ್​ ಜಾಕ್ಸ್​​ 100 ರನ್​ಗಳ ಪೈಕಿ 60 ರನ್​ ಬಂದಿದ್ದು ಸಿಕ್ಸರ್​ನಿಂದ!

    24 ಎಸೆತಗಳಲ್ಲಿ ಗುಜರಾತ್​ ಬೌಲರ್ಸ್​ಗೆ ನರಕ ದರ್ಶನ ಮಾಡಿಸಿದ್ರು

    ಜಾಕ್ಸ್​ ಬ್ಯಾಟಿಂಗ್​ನಿಂದ ಕೇವಲ 6 ನಿಮಿಷದಲ್ಲೇ ಗೇಮ್ ಬದಲಾಯ್ತು

ಗುಜರಾತ್​​ ಟೈಟನ್ಸ್​ ಎದುರಿನ ಗೆಲುವಿಗಿಂತ ಆರ್​​ಸಿಬಿ ಅಭಿಮಾನಿಗಳನ್ನ ರಂಜಿಸಿದ್ದು, ವಿಲ್​ ಜಾಕ್ಸ್​ ಬ್ಯಾಟಿಂಗ್. ಒಂದೊಂದು ಏಟು ಕೂಡ ಸಖತ್​​.. ಸ್ವತಃ ಕಿಂಗ್​ ಕೊಹ್ಲಿ ಕೂಡ ಜಾಕ್ಸ್​ ಜಬರ್ದಸ್ತ್​ ಆಟವನ್ನ ಕಂಡು ವಾರೆ ವ್ಹಾ.. ಅಂದ್ರು. ಸತತ ಸೋಲನ್ನ ಕಂಡು ಬೇಸತ್ತಿದ್ದ ಫ್ಯಾನ್ಸ್​ ಅಂತೂ ಸಖತ್​ ಥ್ರಿಲ್​ ಆದ್ರು. ವಿಲ್​ ಜಾಕ್ಸ್​ ಆಟ ಹೇಗಿತ್ತು?.

ಅಬ್ಬಬ್ಬಾ..! ಏನ್​ ಬ್ಯಾಟಿಂಗ್​ ಗುರು..! ವಿಲ್​ ಜಾಕ್ಸ್​ ಆಡಿದ ಆಟ ನೋಡಿದ ಪ್ರತಿಯೊಬ್ಬ ಫ್ಯಾನ್ಸ್​ ಹೇಳ್ತಿರೋ ಮಾತಿತು. ಬ್ಯಾಟಿಂಗ್​ ಅಂದ್ರೆ ಹಿಂಗಿರಬೇಕು. ಬೌಲರ್​​ ಯಾರು, ಏನ್​ ಕಥೆ ಅಂತಾ ಯೋಚನೆ ಮಾಡೋ ಸೀನೆ ಇಲ್ಲ.. ದಂಡಂ ದಶಗುಣಂ ಅಷ್ಟೇ.

ಇದನ್ನೂ ಓದಿ: ನಗುನಗುತಾ ಕಳುಹಿಸಿಕೊಡಿ ಎಂದಿದ್ರಂತೆ ಶ್ರೀನಿವಾಸ್ ಪ್ರಸಾದ್.. ಅಪ್ಪನ ಕುರಿತು ಹಿರಿಯ ಮಗಳು ಭಾವುಕ ನುಡಿಗಳು

ನಮೋ ಅಂಗಳದಲ್ಲಿ ವಿಲ್​ ಜಾಕ್ಸ್​​ ವೀರಾವೇಷ..!

ನಮೋ ಮೈದಾನದಲ್ಲಿ 201 ರನ್​ಗಳ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಆರ್​​ಸಿಬಿ ಆರಂಭದಲ್ಲೇ ಎಡವಿತು. ಕ್ಯಾಪ್ಟನ್​ ಡುಪ್ಲೆಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. ಈ ಪಂದ್ಯನೂ ದೇವ್ರಿಗೆ ಅಂತಾ ಫ್ಯಾನ್ಸ್​ ಅಂದುಕೊಂಡಿದ್ರು. ಆದ್ರೆ, ಎಲ್ಲರ ಲೆಕ್ಕಾಚಾರವನ್ನ ​ ವಿಲ್​ ಜಾಕ್ಸ್​ ಬುಡಮೇಲು ಮಾಡಿದ್ರು. ವೀರಾವೇಷದ ಇನ್ನಿಂಗ್ಸ್​ ಹಂಗಿತ್ತು.

ಗುಜರಾತ್​ ಬೌಲರ್​ಗಳ ಚಳಿ ಬಿಡಿಸಿದ ವಿಲ್​ ಜಾಕ್ಸ್​.!

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲ್​ ಜಾಕ್ಸ್​​, ಅತ್ಯಮೋಘ ಆಟವಾಡಿದ್ರು. ಸೆಟಲ್​ ಆಗೋವರೆಗೆ ಎಚ್ಚರಿಕೆಯ ಆಟವಾಡಿದ ವಿಲ್​ ಜಾಕ್ಸ್​​, ನಂತರದಲ್ಲಿ ಘರ್ಜಿಸಿದ್ರು. ವಿಲ್​ ಜಾಕ್ಸ್​ ಆರ್ಭಟವನ್ನ ಕಂಡು ಗುಜರಾತ್​ ಬೌಲರ್ಸ್​ ಬೆಸ್ತು ಬಿದ್ರು. ರಣಾರ್ಭಟಕ್ಕೆ ಬ್ರೇಕ್​ ಹಾಕೋದ್ಹೇಗೆ ಅನ್ನೋದೆ ತಿಳಿಯದೇ ತಲೆ ಮೇಲೆ ಕೈ ಹೊತ್ತು ಬಿಟ್ರು.

ಮೊದಲ 17 ಎಸೆತ, 17 ರನ್​, ನಂತರದ 24 ಎಸೆತಕ್ಕೆ 83 ರನ್​.!

ಪ್ಯಾಡ್​ ಕಟ್ಟಿ ಕ್ರಿಸ್​ಗೆ ಬಂದ ವಿಲ್​ ಜಾಕ್ಸ್​​, ಎಚ್ಚರಿಕೆಯ ಆಟ ಮೊರೆ ಹೋಗಿದ್ರು. ಮೊದಲ 17 ಎಸೆತಗಳಲ್ಲಿ ಕೇವಲ 17 ರನ್​ ಮಾತ್ರಗಳಿಸಿದ್ರು. ಆದ್ರೆ, ನಂತರದ 24 ಎಸೆತಗಳಲ್ಲಿ ಗುಜರಾತ್​ ಬೌಲರ್ಸ್​ಗೆ ನರಕ ದರ್ಶನ ಮಾಡಿಸಿಬಿಟ್ರು. ಬೌಂಡರಿ, ಸಿಕ್ಸರ್​​ಗಳಲ್ಲಿ ರನ್​ ಡೀಲ್​ ಮಾಡಿ 83 ರನ್​ ಚಚ್ಚಿದ್ರು. ಗಳಿಸಿದ 100 ರನ್​ಗಳ ಪೈಕಿ 60 ರನ್​ ಬಂದಿದ್ದು ಸಿಕ್ಸರ್​ಗಳಿಂದ ಅಂದ್ರೆ ನೀವೇ ಊಹೆ ಮಾಡಿ ಹೆಂಗಿತ್ತು ಆಟ ಅಂತಾ.

ಗುಜರಾತ್​ ಎದುರು ವಿಲ್​ ಜಾಕ್ಸ್

ಪಂದ್ಯದಲ್ಲಿ 41 ಎಸೆತಗಳನ್ನ ಎದುರಿಸಿದ ವಿಲ್​ ಜಾಕ್ಸ್​ ಅಜೇಯ 100 ರನ್​ ಸಿಡಿಸಿದ್ರು. ಬರೋಬ್ಬರಿ 243.90ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿ 5 ಬೌಂಡರಿ, 10 ಸಿಕ್ಸರ್​ ಚಚ್ಚಿದ್ರು.

ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್​ ಅಬ್ಬರ, ಎಲ್ಲಿ?

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

ರಶೀದ್​ ಖಾನ್​.. ಟಿ20 ಕ್ರಿಕೆಟ್​ ಲೋಕ ಕಂಡ ಲೆಜೆಂಡ್​ ಎನಿಸಿಕೊಂಡಿದ್ದಾರೆ. ಇಂತಾ ಲೆಜೆಂಡ್​ಗೆ 25 ವರ್ಷದ ವಿಲ್​ ಜಾಕ್ಸ್​ ನರಕ ದರ್ಶನ ಮಾಡಿಸಿದ್ರು. ಓವರ್​ಗಳಲ್ಲಿ 4 ಸಿಕ್ಸರ್​​, 5 ಬೌಂಡರಿ ಸಿಡಿಸಿ ರಶೀದ್​ ಖಾನ್​ಗೆ ಶಾಕ್​ ಕೊಟ್ರು. ಅದಕ್ಕೂ ಹಿಂದಿನ ಮೋಹಿತ್​ ಶರ್ಮಾ ಓವರ್​ನಲ್ಲಿ 29 ರನ್​ ಚಚ್ಚಿದ್ರು. ಸಂಜೆ 6.41ಕ್ಕೆ ಅರ್ಧಶತಕ ಪೂರೈಸಿದ ವಿಲ್​ಜಾಕ್ಸ್​​, 6.47ಕ್ಕೆ ಸೆಂಚುರಿ ಸಿಡಿಸಿದ್ರು. ಜಸ್ಟ್​ ಆರೇ ನಿಮಿಷದಲ್ಲಿ ಗೇಮ್​ ಬದಲಾಯಿಸಿ ಬಿಟ್ರು.

ವಿಲ್​ ಜಾಕ್ಸ್​ ರಣಾರ್ಭಟಕ್ಕೆ ದಂಗಾದ ಕಿಂಗ್​​​ ಕೊಹ್ಲಿ.!

ಒಂದೆಡೆ ವಿಲ್​ ಜಾಕ್ಸ್​ ಬೌಲರ್​​ಗಳ ರುಬ್ತಾ ಇದ್ರೆ, ಕಿಂಗ್​ ಕೊಹ್ಲಿ ಕೂಡ ದಂಗಾಗಿ ಹೋದ್ರು. ವಿಲ್​ ಜಾಕ್ಸ್​​ ಸಿಡಿಸಿದ ಒಂದೊಂದು ಸಿಕ್ಸರ್​​ಗಳನ್ನ ವಿರಾಟ್​​ ಕೊಹ್ಲಿ ಸಖತ್​ ಎಂಜಾಯ್​ ಮಾಡಿದ್ರು. ಶತಕ ಸಿಡಿಸಿದ ಬೆನ್ನಲ್ಲೇ ಜಾಕ್ಸ್​ನ ಹಗ್​ ಮಾಡಿಕೊಂಡು ಫುಲ್​ ಸಂಭ್ರಮಿಸಿದ್ರು. ಕೊಹ್ಲಿ ಮಾತ್ರವಲ್ಲ.. ಆರ್​​ಸಿಬಿಯ ಸತತ ಸೋಲುಗಳನ್ನ ಕಂಡು ಬೇಸತ್ತಿದ್ದ ಆರ್​ಸಿಬಿ ಫ್ಯಾನ್ಸ್​​ ಕೂಡ ಫುಲ್​ ಖುಷ್​ ಆದ್ರು. ಪೈಸಾ ವಸೂಲ್​ ಎಂಟರ್​​ಟೈನ್​​ಮೆಂಟ್​ ಸಿಕ್ಕ ಖುಷಿಯಲ್ಲಿ ತೇಲಾಡಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್​ ಆ 6 ನಿಮಿಷದ ವಿಲ್​ ಜಾಕ್ಸ್ ಬ್ಯಾಟಿಂಗ್​ ರಣಾರ್ಭಟ ಹೇಗಿತ್ತು?

https://newsfirstlive.com/wp-content/uploads/2024/04/VIRAT_JACKS_NEW.jpg

Load More