newsfirstkannada.com

ಲೋಕಸಭೆಗೆ ಬಿಜೆಪಿ ಹೊಸ ಪ್ರಯೋಗ; ಬೆಂಗಳೂರು ದಕ್ಷಿಣದಿಂದ ಜೈ ಶಂಕರ್​ ಕಣಕ್ಕೆ..?

Share :

Published February 1, 2024 at 6:35am

    ‘ಲೋಕಾ’ ಸಮರದಲ್ಲಿ ಮ್ಯಾಜಿಕ್​​ ಮಾಡಲು BJP ಸಿದ್ಧತೆ

    ಕೇಂದ್ರ ಸಚಿವರನ್ನ ಕಣಕ್ಕಿಳಿಸಿ ಬಿಜೆಪಿ ಹೊಸ ಪ್ರಯೋಗ

    ಬಿಜೆಪಿ ಹೈಕಮಾಂಡ್​ ಮಟ್ಟದಲ್ಲಿ ನಡೆದ ಆ ಚರ್ಚೆ ಏನು?

ಲೋಕಸಭೆ ಚುನಾವಣೆಯನ್ನ ಈ ಬಾರಿ ಬಿಜೆಪಿ ಭಾರೀ ಪ್ರಯೋಗಶಾಲೆ ಆಗಿಸ್ತಿದೆ. ರಾಜ್ಯದ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗ್ತಿದೆ. ಜೊತೆಗೆ ಜಾತಿಬಲ, ಹಣಬಲ, ತೋಳ್ಬಲ, ಪ್ರದೇಶ ತಾರತಮ್ಯಗಳನ್ನ ಬದಿಗೆ ತಳ್ಳಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದೆ. ಅದರಲ್ಲೂ ಬೆಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿ ಮತ್ತೊಮ್ಮೆ ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ. ರಾಜ್ಯಸಭಾ ಸದಸ್ಯರಾದ ಜೈಶಂಕರ್​ರನ್ನ ಸಕ್ರಿಯ ರಾಜಕಾರಣಕ್ಕೆ ಕರೆತರಲು ಪ್ರಯತ್ನ ಸಾಗಿದೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈ ಬಾರಿ ಮ್ಯಾಜಿಕ್ ಮಾಡಲು ಬಿಜೆಪಿ ಸಕಲ ಸಿದ್ಧತೆಗೆ ಸಜ್ಜಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮಿಷನ್-28 ಗುರಿ ಇಟ್ಟುಕೊಂಡಿರುವ ಬಿಜೆಪಿ, ಅಭ್ಯರ್ಥಿಗಳ ಆಯ್ಕೆಗೆ ಚಾಲನೆ ಕೊಟ್ಟಿದೆ. ಈ ಬಾರಿ ಹೊಸ ಮುಖಗಳನ್ನ ಎಲೆಕ್ಷನ್​​​ ಅಖಾಡಕ್ಕೆ ಇಳಿಸಲು ಹೈಕಮಾಂಡ್​​​ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ. ಅದರಲ್ಲೂ ಹೈಪ್ರೊಫೈಲ್​​ ನಾಯಕರನ್ನ ಕರ್ನಾಟಕದಿಂದ ಕಣಕ್ಕಿಳಿಸುವ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಚಮತ್ಕಾರಕ್ಕೆ ಮುಂದಾಯ್ತಾ ಹೈಕಮಾಂಡ್​​?

ಸುಬ್ರಹ್ಮಣ್ಯಂ ಜೈಶಂಕರ್​​.. ಹಾಲಿ ವಿದೇಶಾಂಗ ಸಚಿವ.. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಮೋದಿ ಕ್ಯಾಬಿನೆಟ್​​​ನ ಮಂತ್ರಿ.. ಜಗತ್ತಿನ ಎರಡು ದಿಗ್ಗಜ ಬಣಗಳ ಶೀತಲ ಸಮರದಲ್ಲಿ ಜೈಶಂಕರ್​​ ಇಟ್ಟ ಹೆಜ್ಜೆಗೆ ಭಾರತ ತಲೆ ಎತ್ತುವಂತೆ ಮಾಡಿದೆ.. ಈಗ ಇದೇ ಜೈಶಂಕರ್​​ಗೆ ಕರ್ನಾಟಕದಿಂದ ರಾಜಕೀಯ ನೆಲೆ ಕಲ್ಪಿಸಲು ಬಿಜೆಪಿ ಹೈಕಮಾಂಡ್​​​ ಮನಸ್ಸು ಮಾಡಿದೆ. ಅಲ್ಲದೆ, ನಿರ್ಮಲಾ ಸೀತಾರಾಮನ್​​ಗೂ ತಮಿಳುನಾಡಿನಿಂದ ಕಣಕ್ಕಿಳಿಸುವ ಚಿಂತನೆ ನಡೆದಿದೆ.

ಬೆಂ.ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಜೈಶಂಕರ್?

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಈ ಇಬ್ಬರು ಕೇಂದ್ರ ಸಚಿವರನ್ನ ಜನರಿಂದಲೇ ನೇಯವಾಗಿ ಲೋಕಸಭೆಗೆ ಕಳುಹಿಸಲು ತೀರ್ಮಾನಿಸಿದೆ. ಕೇಂದ್ರದ ಪ್ರಭಾವಿ ಸಚಿವರಾಗಿರುವ ನಿರ್ಮಲಾ ಮತ್ತು ಜೈಶಂಕರ್​ಗೆ ಸುರಕ್ಷಿತ ಕ್ಷೇತ್ರಗಳನ್ನ ಹುಡುಕಲಾಗ್ತಿದೆ. ಈ ಹುಡುಕಾಟದ ಭಾಗವಾಗಿ ಜೈಶಂಕರ್​ಗೆ ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಸುವ ಚಿಂತನೆ ಮೊಳಕೆಯೊಡೆಯುವಂತೆ ಮಾಡಿದೆ. ಜೈ ಶಂಕರ್‌ಗೆ ಬೆಂಗಳೂರು ದಕ್ಷಿಣ ಕ್ಷೇತ್ರ ಸೇಫ್ ಎಂಬ ಚರ್ಚೆ ನಡೆಯುತ್ತಿದ್ರೆ, ಇತ್ತ, ಬೆಂಗಳೂರು ದಕ್ಷಿಣಕ್ಕೆ ಜೈಶಂಕರ್​ ಆಗಮಿಸಿದ್ರೆ, ತೇಜಸ್ವಿ ಸೂರ್ಯಗೆ ಪರ್ಯಾತ ಕ್ಷೇತ್ರದ ವ್ಯವಸ್ಥೆ ಕಲ್ಪಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಇನ್ನು, ಜೈಶಂಕರ್‌ಗೆ ಹಿಂದಿನಿಂದಲೂ ಕರ್ನಾಟಕದ ನಂಟು ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಜೈಶಂಕರ್​ ಅವರ ಅಜ್ಜಿ ಮನೆ. ಹೀಗಾಗಿ ಜೈಶಂಕರ್​​​​ ತಮ್ಮ ಬಾಲ್ಯದ ಕೆಲ ದಿನಗಳು ಚಿಕ್ಕೋಡಿಯಲ್ಲಿ ಕಳೆದಿದ್ದಾರೆ.

ಕೇಸರಿಸೇನೆ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣದಿಂದ ಜೈಶಂಕರ್​​ಗೆ ಸ್ಥಾನ ಕಲ್ಪಿಸುವ ಚಿಂತನೆ ಇದೆ. ಇದರ ಜೊತೆಗೆ ಹಿಂದುತ್ವದ ನೆಲೆ, ಬಿಜೆಪಿಯ ಭದ್ರ ಅಡಿಪಾಯ ಆಗಿರುವ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡವೂ ಜೈಶಂಕರ್​​​ಗೆ ಆಫ್ಷನ್​ ಆಗಿದೆ. ಬೆಂಗಳೂರು ಜೊತೆ ಜೈಶಂಕರ್​​​, ದೀರ್ಘಕಾಲಿನ ವೈಯಕ್ತಿಕ ಒಡನಾಟ ಹೊಂದಿದ್ದಾರೆ. ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಜೈಶಂಕರ್​​​​ ವ್ಯಾಸಂಗ ಮಾಡಿದ್ದಾರೆ. ಎಲೆಕ್ಷನ್​​​ ಟೈಂನಲ್ಲಿ ಪ್ರಚಾರಕ್ಕೂ ಬಂದಿದೆ. ಕಬ್ಬನ್ ಪಾರ್ಕ್‌ನಲ್ಲಿನ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದ ಜೈಶಂಕರ್​​​, ಪ್ರಸಿದ್ಧ ವಿವಿ ಪುರಂ ಫುಡ್​ ಸ್ಟ್ರೀಟ್‌ನಲ್ಲಿಯೂ ತಿನ್ನಲು ಹೋಗಿದೆ. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನ ಕಳೆದ ಕೆಲ ದಿನಗಳ ಹಿಂದಷ್ಟೇ ಮಾಡಿದ್ರು.

ನಿರ್ಮಲಾ ಸೀತಾರಾಮನ್​​ರನ್ನ ಬಿಜೆಪಿಗೆ ಅಪಥ್ಯವಾದ ತಮಿಳುನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಸಲು ಹೊಸ ಪ್ರಯತ್ನಕ್ಕೆ ಬಿಜೆಪಿ ಕೈಹಾಕ್ತಿರುವಂತೆ ಕಾಣಿಸ್ತಿದೆ. ಚೆನ್ನೈ ಸೆಂಟ್ರಲ್​ ಕ್ಷೇತ್ರದಿಂದ ನಿರ್ಮಲಾ ಅವರ ಅಗ್ನಿಪರೀಕ್ಷೆಯ ಸಾಧ್ಯಾ-ಸಾಧ್ಯತೆಗಳ ಚರ್ಚೆ ನಡೆಯುತ್ತಿದೆ. ಈ ಗದ್ದಲದ ಮಧ್ಯೆ ಬೆಂಗಳೂರು ದಕ್ಷಿಣ ಹಾಲಿ ಸಂಸದ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ಯಾವ ಕ್ಷೇತ್ರದತ್ತ ವಲಸೆ ಹೋಗ್ತಾರೆ ಅನ್ನೋದು ಯಕ್ಷಪ್ರಶ್ನೆ. ಒಟ್ಟಾರೆ, ಮೇಲ್ಮನೆ ಪ್ರತಿನಿಧಿಸ್ತಿದ್ದ ಕೇಂದ್ರ ಪ್ರಭಾವಿಗಳು ಈಗ ಜನರಿಂದ ನೇರವಾಗಿ ಆಯ್ಕೆ ಆಗುವ ಸವಾಲು ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆಗೆ ಬಿಜೆಪಿ ಹೊಸ ಪ್ರಯೋಗ; ಬೆಂಗಳೂರು ದಕ್ಷಿಣದಿಂದ ಜೈ ಶಂಕರ್​ ಕಣಕ್ಕೆ..?

https://newsfirstlive.com/wp-content/uploads/2024/01/bjp-6.jpg

Load More