/newsfirstlive-kannada/media/post_attachments/wp-content/uploads/2024/12/KICHCHA-SUDEEP-POLITICS.jpg)
ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ಪಕ್ಷ ಕಟ್ಟಿ ಸಂಚಲನ ಸೃಷ್ಟಿಸಿದಂತೆ ರಾಜ್ಯದಲ್ಲೂ ನಟರೊಬ್ಬರು ರಾಜಕೀಯ ಅಖಾಡಕ್ಕೆ ಇಳಿತಾರೆ ಅನ್ನೋ ಚರ್ಚೆ ಜೋರಾಗಿದೆ. ಕಿಚ್ಚ ಸುದೀಪ್ ರಾಜಕೀಯ ಪ್ರವೇಶ ಬಗ್ಗೆ ಮನಬಿಚ್ಚಿ ಮಾತಾಡಿದ್ದು ಪ್ರಾದೇಶಿಕ ಪಕ್ಷದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಬಹುದಿನಗಳಿಂದಲೂ ಅಭಿಮಾನಿಗಳಲ್ಲಿ ಕಾಡ್ತಿದ್ದ ಪ್ರಶ್ನೆಗೆ ಕೊನೆಗೂ ಕಿಚ್ಚ ಉತ್ತರ ಕೊಟ್ಟಿದ್ದಾರೆ.
ತಮಿಳುನಾಡಿನಲ್ಲಿ ವಿಜಯ್​ ದಳಪತಿ,ಇತ್ತೀಚೆಗಷ್ಟೇ ಟಿವಿಕೆ ಪಕ್ಷ ಸ್ಥಾಪಿಸಿ ಬೃಹತ್ ಸಮಾವೇಶದ ಮೂಲಕ ರಾಜಕೀಯದ ಅಖಾಡಕ್ಕೆ ಧುಮುಕಿದ್ದರು. ಇತ್ತ ಆಂಧ್ರಪ್ರದೇಶದಲ್ಲಿ ಪವನ್​ ಕಲ್ಯಾಣ್ ಕೂಡ ಈಗಾಗಲೇ ರಾಜಕೀಯ ರಂಗ ಪ್ರವೇಶಿಸಿದ್ದಲ್ಲದೇ ಭರ್ಜರಿ ಗೆಲುವಿನ ಮೂಲಕ ಉಪಮುಖ್ಯಮಂತ್ರಿಯಾಗಿ ಸಂಚಲನ ಸೃಷ್ಟಿಸಿದ್ದಾರೆ. ಹೀಗೆ ಪಕ್ಕದ ರಾಜ್ಯಗಳ ಖ್ಯಾತ ಸಿನಿಮಾ ನಟರು ರಾಜಕೀಯ ಪ್ರವೇಶಿಸಿರುವಾಗಲೇ ರಾಜ್ಯದಲ್ಲೂ ಖ್ಯಾತ ನಟ ರಂಗಪ್ರವೇಶ ಮಾಡ್ತಾರೆ ಅನ್ನೋ ಚರ್ಚೆ ಜೋರಾಗಿದೆ.
ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರಾ ಕಿಚ್ಚ?
ರೆಬೆಲ್ ಸ್ಟಾರ್ ಅಂಬರೀಶ್​, ನವರಸ ನಾಯಕ ಜಗ್ಗೇಶ್​.. ಸಿ.ಪಿ ಯೋಗೇಶ್ವರ್​.. ಬಿ.ಸಿ ಪಾಟೀಲ್​.. ಹೀಗೆ ಹುಡುಕುತ್ತಾ ಹೋದ್ರೆ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡ ಸಿನಿಮಾ ನಟರ ದೊಡ್ಡ ಲಿಸ್ಟೇ ಸಿಗುತ್ತೆ. ಆದ್ರೆ ಈಗ ರಾಜ್ಯ ರಾಜಕಾರಣಕ್ಕೆ ಮತ್ತೊಬ್ಬ ಸೂಪರ್​ಸ್ಟಾರ್​ ಎಂಟ್ರಿ ಬಗ್ಗೆ ಚರ್ಚೆ ಜೋರಾಗಿದೆ. ಅವರೇ ಕರುನಾಡ ಬಾದ್​ಶಾ.. ಕಿಚ್ಚ ಸುದೀಪ್​..
‘ಮಹಾರಾಜ‘ನಿಗೆ ಸ್ಥಳೀಯ ಪಕ್ಷ ಕಟ್ಟುವ ಬಗ್ಗೆ ಕಿಚ್ಚ ಆಸಕ್ತಿ!
ಕಿಚ್ಚ ಸುದೀಪ್​.. ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ನಾಯಕ.. ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಕಿಚ್ಚ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಇಂದು ನಿನ್ನೆಯದಲ್ಲ.. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ಕಿಚ್ಚ ಸುದೀಪ್ ನ್ಯೂಸ್​ ಫಸ್ಟ್​ ಜೊತೆ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ರಾಜಕೀಯದಲ್ಲಿ ಆಸಕ್ತಿ ಇದೆ ಅನ್ನೋ ಅರ್ಥದಲ್ಲಿಯೇ ಮಾತನಾಡಿದ್ದಾರೆ. ಜೊತೆಗೆ ಸ್ಥಳೀಯ ಪಕ್ಷದ ಮಹತ್ವವನ್ನೂ ಹೇಳಿದ್ದಾರೆ.
ಇನ್ನು ಇದೇ ವೇಳೆ ರಾಜಕೀಯ ಪಕ್ಷಕ್ಕೆ ಬರುವುದು ಸುಲಭದ ಮಾತಲ್ಲ ಅಂತ ಹೇಳಿರೋ ಸುದೀಪ್​ ದುಡ್ಡಿದ್ದವರೆಲ್ಲ ಜನನಾಯಕರಲ್ಲ ಎಂದಿದ್ದಾರೆ. ಮುಂದೆ ನೋಡೋಣ ಸಂದರ್ಭ ಬಂದ್ರೆ ಖಂಡಿತ ರಾಜಕೀಯಕ್ಕೆ ಬರ್ತೀನಿ ಎಂದು ಕಿಚ್ಚ ಹೇಳಿದ್ದಾರೆ
ಇನ್ನು ಕಿಚ್ಚನಿಗೆ ರಾಜಕೀಯ ನಾಯಕರ ಸಂಪರ್ಕವೂ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಿದ್ದರು. ಸದ್ಯ ಸುದೀಪ್ ತಮಿಳು ನಟ ವಿಜಯ್​ರಂತೆ ಸಂಚಲನ ಸೃಷ್ಟಿಸ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಇದೇ ವೇಳೆ ಸಿನಿಮಾಗಳು ಇದ್ದು ಅವಶ್ಯಕತೆ ಬಿದ್ರೆ ರಾಜಕೀಯ ಎಂಟ್ರಿ ಅಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us