newsfirstkannada.com

ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಶಾಕಿಂಗ್​ ಸುದ್ದಿ; ಕಮ್​ಬ್ಯಾಕ್​​ಗಾಗಿ ಕೊಹ್ಲಿ ರಣಜಿ ಆಡಲೇಬೇಕಾ..?

Share :

Published February 13, 2024 at 7:40pm

    ಇಂಗ್ಲೆಂಡ್​​ ವಿರುದ್ಧ ಟೆಸ್ಟ್​ ಸೀರೀಸ್​ನಿಂದ ದೂರ ಉಳಿದ ಕೊಹ್ಲಿ

    ಕೊಹ್ಲಿ ಅಲಭ್ಯತೆಗೆ ಕಾರಣವೇನು? ಎಂದು ತಿಳಿಸಿದ ಬಿಸಿಸಿಐ..!

    ಕಮ್​ಬ್ಯಾಕ್​​ ಮಾಡಲು ಕೊಹ್ಲಿ ರಣಜಿ ಕ್ರಿಕೆಟ್​ ಆಡಲೇಬೇಕಾ?

ಸದ್ಯ ನಡೆಯುತ್ತಿರೋ ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸೀರೀಸ್​ನಿಂದ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ದೂರ ಉಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ವಿರಾಟ್​ ಕೊಹ್ಲಿ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಜತೆಗೆ ಮುಂದಿನ 5 ತಿಂಗಳು ವಿರಾಟ್​ ಕ್ರಿಕೆಟ್​​ ಆಡೋದು ಡೌಟ್​ ಅನ್ನೋ ಮಾತುಗಳು ಕೇಳಿ ಬಂದಿವೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರೋ ಬಿಸಿಸಿಐ ಜನರಲ್​ ಸೆಕ್ರೆಟರಿ ಜಯ್​ ಶಾ, ವಿರಾಟ್​ ಕೊಹ್ಲಿ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರು ಯಾವಾಗ ಕ್ರಿಕೆಟ್​​ಗೆ ಮರಳುತ್ತಾರೋ ಅಂದಿನಿಂದಲೇ ಟೀಮ್​ ಇಂಡಿಯಾ ಸೇರಿಕೊಳ್ಳಬಹುದು. ಕೊಹ್ಲಿ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

ಇನ್ನೂ, ಈ ಮಧ್ಯೆ ವಿರಾಟ್​ ಕಮ್​​ಬ್ಯಾಕ್​ ಮಾಡೋ ಮುನ್ನ ರಣಜಿ ಆಡಬೇಕಾ? ಅನ್ನೋ ಚರ್ಚೆ ನಡೆಯುತ್ತಿದೆ. ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​​, ಪಾಂಡ್ಯ ಬ್ರದರ್ಸ್​​​ ರೀತಿ ಕೊಹ್ಲಿ ಕೂಡ ರಣಜಿ ಆಡಲಿ ಎಂದು ಬಿಸಿಸಿಐ ಸೂಚನೆ ಕೊಡುತ್ತಾ? ಎಂಬ ಪ್ರಶ್ನೆಗಳು ಎದ್ದಿವೆ.

ಕೊಹ್ಲಿ ರಣಜಿ ಆಡಬೇಕಾ..?

ಇನ್ನೊಂದೆಡೆ ರಣಜಿ ಟ್ರೋಫಿ ಆಡುವ ನಿಯಮಗಳು ಕೊಹ್ಲಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಬಿಸಿಸಿಐಗೆ ವೈಯಕ್ತಿಕ ಕಾರಣ ಹೇಳಿದ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇದರರ್ಥ ಅವರು ಎಲ್ಲಿದ್ದಾರೆ ಎಂದು ಮಂಡಳಿಗೆ ತಿಳಿದಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಶಾಕಿಂಗ್​ ಸುದ್ದಿ; ಕಮ್​ಬ್ಯಾಕ್​​ಗಾಗಿ ಕೊಹ್ಲಿ ರಣಜಿ ಆಡಲೇಬೇಕಾ..?

https://newsfirstlive.com/wp-content/uploads/2024/01/VIRAT-21.jpg

Load More