newsfirstkannada.com

ಲೋಕಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಲ್ವಾ? ಅನುಮಾನ ಹುಟ್ಟಿಸಿದೆ ಮಾಜಿ ಸಚಿವನ ಹೇಳಿಕೆ

Share :

Published February 6, 2024 at 8:59am

    ಕಲಬುರಗಿ ಮಲ್ಲಿಕಾರ್ಜುನ ಖರ್ಗೆಯವರ ತವರು ಕ್ಷೇತ್ರ

    ಪಕ್ಷದ ಜವಾಬ್ದಾರಿ ಹಿನ್ನೆಲೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ?

    ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣರನ್ನ ಎಲೆಕ್ಷನ್ ಗೆ ನಿಲ್ಲಿಸ್ತಾರಾ?

ಕಲಬುರಗಿ: 2024ರ ಲೋಕಸಭೆಯ ಚುನಾವಣೆ ಕಾವು ರಂಗೇರುತ್ತಿದೆ. ಹೀಗಿರುವಾಗ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಆಯ್ಕೆಯು ತೀವ್ರ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸೋದು ಡೌಟ್ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ.

ಕಲಬುರಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರು ಕ್ಷೇತ್ರವಾಗಿದ್ದು, ಖರ್ಗೆ ಇಲ್ಲಿಂದ ಸ್ಪರ್ಧಿಸುತ್ತಾರಾ? ಅಥವಾ ಇಲ್ಲವೇ? ಎಂಬ ಅನುಮಾನವೊಂದು ಮೂಡಿದೆ. ಮತ್ತೊಂದೆಡೆ ಈ ಬಾರಿ ಲೋಕಸಭೆ ಚುನಾವಣೆಗೆ ಖರ್ಗೆ ನಿಲ್ಲದಿರಲು ನಿರ್ಧಾರ  ಮಾಡಿದ್ದಾರಾ? ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ. ಅದರ ಜೊತೆ ಜೊತೆಗೆ ಪಕ್ಷದ ಜವಾಬ್ದಾರಿ ಹಿನ್ನೆಲೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರಾ ಎಂಬುದು ಕೂಡ ಎಲ್ಲರನ್ನು ಕಾಡಲಾರಂಭಿಸಿದೆ.

ಆದರೆ ಇವೆಲ್ಲದಕ್ಕೆ ಕೈ ನಾಯಕ ನೀಡಿದ ಹೇಳಿಕೆ ಇದೀಗ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡದಿರುವ ಬಗ್ಗೆ ಅನುಮಾನ ಹುಟ್ಟಿಸಿದೆ. ಮಾಜಿ ಸಚಿವ, ಕಾಂಗ್ರೆಸ್ ನಾಯಕ ರೇವೂ ನಾಯಕ್ ಬೆಳಮಗಿ ಹೇಳಿಕೆ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣೆ ಸ್ಪರ್ಧೆ ಬಗ್ಗೆ ಈವರೆಗೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಹೊರತು ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ? ಎಂಬುದು ಕೂಡ ಕುತೂಹಲವನ್ನು ಹುಟ್ಟಿಸಿದೆ. ಖರ್ಗೆಯವರ ಅಳಿಯ ರಾಧಾಕೃಷ್ಣ ರನ್ನ ಎಲೆಕ್ಷನ್ ಗೆ ನಿಲ್ಲಿಸ್ತಾರಾ?. ಒಟ್ಟಿನಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಆಯ್ಕೆ ಬಗ್ಗೆ ಭಾರೀ ಚರ್ಚೆ ಶುರುವಾಗಿದ್ದು, ಇದೆಲ್ಲಕ್ಕೆ ಉತ್ತರ ಖರ್ಗೆಯವರೇ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಲ್ವಾ? ಅನುಮಾನ ಹುಟ್ಟಿಸಿದೆ ಮಾಜಿ ಸಚಿವನ ಹೇಳಿಕೆ

https://newsfirstlive.com/wp-content/uploads/2023/09/Mallikarjun-Kharge.jpg

Load More