/newsfirstlive-kannada/media/post_attachments/wp-content/uploads/2024/11/Manoj.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2023 ಐಪಿಎಲ್‌ಗೂ ಮುನ್ನ 20 ಲಕ್ಷಕ್ಕೆ ಮನೋಜ್ ಅವರನ್ನು ಆರ್‌ಸಿಬಿ ಬಿಡ್ ಮಾಡಿತ್ತು. ಇದಾದ ನಂತರ ಸತತ ಎರಡು ಆವೃತ್ತಿಗಳಲ್ಲೂ ಅವರಿಗೆ ಆಡಲು ಒಂದೇ ಒಂದು ಅವಕಾಶ ನೀಡಲಿಲ್ಲ. ಹೀಗಾಗಿ ಇವರು ಕೇವಲ ಬೆಂಚ್ ಕಾಯುವುದಕ್ಕಷ್ಟೇ ಸೀಮಿತವಾಗಿದ್ದರು. ಇತ್ತೀಚೆಗಷ್ಟೇ ನಡೆದ ಮಹಾರಾಜ ಟ್ರೋಫಿಯಲ್ಲಿ ಅಬ್ಬರಿದ ಮನೋಜ್ ಅವರನ್ನು ಮತ್ತೆ ಆರ್‌ಸಿಬಿ ಖರೀದಿ ಮಾಡಿದೆ.
ಬಹುನಿರೀಕ್ಷಿತ 2025ರ 2ನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನ್ನಡಿಗ ಮನೋಜ್ ಅವರಿಗೆ ಮಣೆ ಹಾಕಿತ್ತು. ಬೇಸ್ ಪ್ರೈಸ್ 30 ಲಕ್ಷ ನೀಡಿ ಮನೋಜ್ ಅವರನ್ನು ಆರ್‌ಸಿಬಿ ಬಿಡ್ ಮಾಡಿಕೊಂಡಿತ್ತು.
ಈ ಬಾರಿ ಆದ್ರೂ ಸಿಗುತ್ತಾ ಕನ್ನಡಿಗನಿಗೆ ಚಾನ್ಸ್?
ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಯುವ ಕ್ರಿಕೆಟಿಗ ಮನೋಜ್ ಭಾಂಡಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ರು. ಆದರೆ ಇಲ್ಲಿವರೆಗೂ ಫ್ರಾಂಚೈಸಿ ಮನೋಜ್ ಅವರಿಗೆ ಆಡಲು ಒಂದೇ ಒಂದು ಅವಕಾಶ ನೀಡಿಲ್ಲ. ಮನೋಜ್‌ಗೆ ಆಡುವ ಸಾಮರ್ಥ್ಯವಿದ್ದರೂ ಅವಕಾಶ ನೀಡದ ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ರು. ಇಷ್ಟೇ ಅಲ್ಲ ಈ ಸಲ ಆದ್ರೂ ಆರ್‌ಸಿಬಿ ತಂಡದಲ್ಲಿ ಕನ್ನಡಿಗನಿಗೆ ಸ್ಥಾನ ನೀಡಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಐಫೋನ್ ಬಳಿಕ ಗೂಗಲ್ ಪಿಕ್ಸೆಲ್ ಬ್ಯಾನ್! ಮೊಬೈಲ್ ಬಳಕೆದಾರರು ಓದಲೇಬೇಕಾದ ಸ್ಟೋರಿ ಇದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ