ಬಿಗ್‌ಬಾಸ್ ಸೀಸನ್‌ 11ಗೆ ಭರ್ಜರಿ ತಯಾರಿ; ಪಾರು ಖ್ಯಾತಿಯ ಮೋಕ್ಷಿತಾ ಹೋಗೋದು ಪಕ್ಕಾನಾ?

author-image
admin
Updated On
ಬಿಗ್‌ಬಾಸ್ ಸೀಸನ್‌ 11ಗೆ ಭರ್ಜರಿ ತಯಾರಿ; ಪಾರು ಖ್ಯಾತಿಯ ಮೋಕ್ಷಿತಾ ಹೋಗೋದು ಪಕ್ಕಾನಾ?
Advertisment
  • ಬಿಗ್‌ಬಾಸ್ ಸೀಸನ್ 11ರ ಸಂಭವನೀಯ ಸ್ಪರ್ಧಿಗಳ ಲಿಸ್ಟ್ ರೆಡಿ!
  • ಮೋಕ್ಷಿತಾ ಅವ್ರಿಗೆ ಬಿಗ್​ಬಾಸ್​ ಮನೆ ಪ್ರವೇಶಕ್ಕೆ ಆಹ್ವಾನ ಬಂದಿದ್ಯಾ?
  • ಪಾರು ಸೀರಿಯಲ್‌ ಬಳಿಕ ಯಾವುದೇ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ!

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್‌ 11ರ ಬಗ್ಗೆ ಈಗಾಗಲೇ ಗುಸುಗುಸು ಶುರುವಾಗಿವೆ. ಸೀಸನ್​ 10 ಅಂತೂ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು. ಸೀಸನ್​ ಹನ್ನೊಂದನ್ನ ಹೊಸ ಹುಮ್ಮಸ್ಸಿನಿಂದ ತರೋದಕ್ಕೆ ಬಿಗ್​ಬಾಸ್​ ತಂಡ ಸ್ಪರ್ಧಿಗಳ ಆಯ್ಕೆಗೆ ಪಟ್ಟಿ ರೆಡಿ ಮಾಡುತ್ತಿದೆ. ಈ ಲಿಸ್ಟ್​ನಲ್ಲಿ ಈ ಕಿರುತೆರೆಯ ನಟಿಯ ಹೆಸರು ಜೋರಾಗಿ ಕೇಳಿ ಬರ್ತಿದೆ.

ಇದನ್ನೂ ಓದಿ: ವೀಕ್ಷಕರಿಗೆ ಗುಡ್​ನ್ಯೂಸ್​​.. ​ಬಿಗ್ ಬಾಸ್ ಕನ್ನಡ ಸೀಸನ್ 11 ಶುರು ಯಾವಾಗ? 

publive-image

ಬಿಗ್​​ ಬಾಸ್​ ಸೀಸನ್​ 11ರ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಖಂಡಿತ ಬಿಗ್​​ ಬಾಸ್​ ಹೊಸ ಸೀಸನ್​ ಬರೋದು ಪಕ್ಕಾ. ಈಗಾಗ್ಲೇ ತಯಾರಿ ನಡೀತಾರೋದು ನಿಜ. ಹಾಗೆನೇ ಸ್ಪರ್ಧಿಗಳ ಆಯ್ಕೆ ಕುರಿತು ಚರ್ಚೆಗಳಾಗ್ತಿರೋದು ಸತ್ಯ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಸನ್ನಿವೇಶ.. ಹೀಗೆ ಬಂದು ಹಾಗೇ ಹೋದ ಕಾರ್ತಿಕ್ ತಾಯಿ ಹೇಳಿದ್ದೇನು? 

ನಿಮಗೆಲ್ಲಾ ಗೊತ್ತಿರೋ ಹಾಗೆ ಬಿಗ್​ ಬಾಸ್​ ಫಾರ್ಮೆಟ್​ ಪ್ರಕಾರ ತಿಂಗಳುಗಳ ಹಿಂದೆಯೇ ಸಂಭವನೀಯ ಸ್ಪರ್ಧಿಗಳ ಲಿಸ್ಟ್​ ಸಜ್ಜಾಗಿರುತ್ತೆ. ಇವರನ್ನು ಬಿಗ್‌ ಹೌಸ್‌ಗೆ ಕರೆದ್ರೆ ಚೆನ್ನಾಗಿರುತ್ತಾ? ಇಲ್ಲ ಅವ್ರನ್ನ ಕರೆದ್ರೆ ವೀಕ್ಷಕರಿಗೆ ಇಷ್ಟ ಆಗುತ್ತಾ? ಕೊನೆ ಘಳಿಗೆಯಲ್ಲಿ ಯಾರಾದ್ರು ಸ್ಪರ್ಧಿ ಕೈಕೊಟ್ರೆ ಬ್ಯಾಕ್​ ಅಪ್​ನಲ್ಲಿ ಒಂದಿಷ್ಟು ಹೆಸರುಗಳನ್ನ ಪಟ್ಟಿ ಮಾಡಿಕೊಂಡು ಇಟ್ಕೊಂಡಿರ ಬೇಕಾಗುತ್ತೆ.
ಇದು ಪ್ರತಿ ವರ್ಷ ಬಿಗ್​ಬಾಸ್​ ತಂಡಕ್ಕೆ ಚಾಲೆಂಜ್​ ಅಂತಾನೇ ಹೇಳಬಹುದು. ಈ ಬಗ್ಗೆ ಸಾಕಷ್ಟು ಬಾರಿ ತೆರೆಮರೆಯಲ್ಲಿ ಕೆಲಸ ಮಾಡೋರೇ ಹೇಳಿಕೊಂಡಿದ್ದಾರೆ ಕೂಡ. ಸದ್ಯ ಸೀಸನ್​​ 11ಕ್ಕೂ ಅಂತಹದ್ದೇ ಒಂದು ಲಿಸ್ಟ್​ ರೆಡಿಯಾಗುತ್ತಿದೆ.

publive-image

ಬಿಗ್​ಬಾಸ್​ ತಂಡ ಒಂದು ಲಿಸ್ಟ್​ ಪ್ರಕಾರ ಕೆಲಸ ಶುರು ಮಾಡಿದ್ದು, ಒಂದಿಷ್ಟು ಕಿರುತೆರೆ ಕಲಾವಿದರಿಗೆ ಕರೆ ಮಾಡಿದ್ದಾರೆ ಅನ್ನೋದು ಸೋಷಿಯಲ್ ಮೀಡಿಯಾದಲ್ಲಿ ಪುಕಾರ್‌ ಎಬ್ಬಿದೆ. ಅದ್ರಲ್ಲಿ ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರ್ತಿರೋ ಹೆಸರು ಪಾರು ಖ್ಯಾತಿಯ ಮೋಕ್ಷಿತಾ ಪೈ.

ಇದನ್ನೂ ಓದಿ: ಅಯ್ಯೋ.. ವೇದಿಕೆ ಮೇಲೆ ಜಾರಿ ಬಿದ್ದ ಬಿಗ್​ಬಾಸ್​ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್ ಪತ್ನಿ; ಆಗಿದ್ದೇನು..? 

ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಪಾರು. ಪಾರು ಮುಕ್ತಾಯವಾಗಿ ತಿಂಗಳುಗಳೇ ಉರುಳಿವೆ. ನಾಯಕಿ ಪಾರು ಪಾತ್ರ ನಿರ್ವಹಿಸಿದ್ದ ಮೋಕ್ಷಿತಾ ಇದುವರೆಗೂ ಯಾವುದೇ ಹೊಸ ಪ್ರಾಜೆಕ್ಟ್​ನ ಅನೌನ್ಸ್​ ಮಾಡಿಲ್ಲ. ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಆಗಾಗ ಹೊಸ ಪ್ಲೇಸ್​ಗಳನ್ನ ಎಕ್ಸ್‌ಪ್ಲೋರ್​ ಮಾಡುತ್ತಾ ಇರ್ತಾರೆ. ಪಾರು ನಂತರ ಜಾಲಿ ಮೂಡ್‌ಗೆ ಜಾರಿರೋ ಮೋಕ್ಷಿತಾ ಅವ್ರಿಗೆ ಬಿಗ್​ಬಾಸ್​ ಮನೆ ಪ್ರವೇಶಕ್ಕೆ ಆಹ್ವಾನ ಹೋಗಿದೆಯಂತೆ ಅನ್ನೋದು ಸೋಷಿಯಲ್ ಮೀಡಿಯಾದ ಸದ್ಯದ ಹಾಟ್‌ ಟಾಪಿಕ್.

publive-image

ಇದು ನಿಜಾನಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋದೆಲ್ಲಾ ಸತ್ಯವಂತೂ ಅಲ್ಲ. ಹೀಗಾಗಿ ನ್ಯೂಸ್ ಫಸ್ಟ್ ಖುದ್ದು ಮೋಕ್ಷಿತಾ ಪೈ ಅವರನ್ನೇ ಈ ಬಗ್ಗೆ ಕೇಳಿದೆ. ಅವರಂತೂ ಈ ಸುದ್ದಿಯನ್ನ ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ. ನನಗೆ ಯಾವುದೇ ಕರೆ ಬಂದಿಲ್ಲ. ಯಾರೂ ಕೂಡ ಚರ್ಚೆ ಮಾಡಿಲ್ಲ. ಹೀಗಾಗಿ ಇದೆಲ್ಲಾ ಕೇವಲ ರೂಮರ್ಸ್ ಅಂತ ನ್ಯೂಸ್‌ಫಸ್ಟ್ ಜೊತೆ ಹೇಳಿದರು.
ಹೀಗಾಗಿ, ಮೋಕ್ಷಿತಾ ಅವ್ರಿಗೆ ಬಿಗ್​ಬಾಸ್​ ಮನೆ ಪ್ರವೇಶಕ್ಕೆ ಆಹ್ವಾನ ಹೋಗಿದೆ ಅನ್ನೋ ಸೋಷಿಯಲ್ ಮೀಡಿಯಾದಲ್ಲಿ ಬಂದಿರೋ ಈ ಸುದ್ದಿಯಂತೂ ಸುಳ್ಳು. ಹಾಗಂತ ಇವರು ಬಿಗ್‌ಬಾಸ್‌ ಶೋಗೆ ಬರೋದೇ ಇಲ್ವಾ? ಆ ಬಗ್ಗೆ ಇಲ್ಲಿ ಚರ್ಚೆಯೇ ನಡೆದಿಲ್ಲ. ಇಲ್ಲಿರೋ ಪ್ರಶ್ನೆ ಮೋಕ್ಷಿತಾ ಪೈ ಬಿಗ್‌ಬಾಸ್ ಟೀಮ್‌ನಿಂದ ಕಾಲ್ ಹೋಗಿದೆ ಅನ್ನೋದು. ಅದು ಸುಳ್ಳು ಅನ್ನೋದನ್ನ ಮೋಕ್ಷಿತಾ ಅವರೇ ಹೇಳಿದ್ದಾರೆ. ಹಾಗಂತಾ ಮುಂದಿನ ದಿನಗಳಲ್ಲಿ ಬಿಗ್‌ಬಾಸ್‌ ಟೀಮ್ ಸಂಪರ್ಕವನ್ನೇ ಮಾಡೋದಿಲ್ಲ ಅಂತಲ್ಲ. ಮಾಡಿದರೂ ಮಾಡಬಹುದು. ಅವ್ರು ಬಿಗ್‌ಬಾಸ್ 11ಕ್ಕೆ ಬಂದರೂ ಬರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment