/newsfirstlive-kannada/media/post_attachments/wp-content/uploads/2025/04/PM-MODI.jpg)
ಹೊಸ ವಕ್ಫ್ ಕಾನೂನು ಜಾರಿಗೆ ಹೊರಟಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಇತ್ತೀಚೆಗೆ ಸಂಸತ್ನಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ವಿಧೇಯಕದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಒಟ್ಟು 72 ಅರ್ಜಿ ಸಲ್ಲಿಕೆ ಆಗಿದ್ದವು.
ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಕೈಗೆತ್ತಿಕೊಂಡಿದೆ. ವಿಚಾರಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಲವಾದ ಪ್ರಶ್ನೆಗಳನ್ನು ಕೇಳಿದೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದಾದರೆ, ಹಿಂದೂ ಧಾರ್ಮಿಕ ಟ್ರಸ್ಟ್ಗಳಲ್ಲಿ ಮುಸ್ಲೀಮರಿಗೆ ಅವಕಾಶ ನೀಡುತ್ತೀರಾ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ವಿಚಾರಣೆ ವೇಳೆ ಮಂಡಳಿಗೆ ಮುಸ್ಲಿಮೇತರರ ನೇಮಕ ಸೇರಿದಂತೆ ಕೆಲವೊಂದು ಅಂಶಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡುವ ಕುರಿತು ಸುಪ್ರೀಂಕೋರ್ಟ್ ಸುಳಿವು ನೀಡಿದೆ.
ಇದನ್ನೂ ಓದಿ: 5 ವರ್ಷ 5 ತಿಂಗಳು.. 1ನೇ ತರಗತಿಗೆ ಶಿಕ್ಷಣ ಇಲಾಖೆ ಅಧಿಕೃತ ಆದೇಶದಲ್ಲಿ ಏನಿದೆ? ಇದು ನ್ಯೂಸ್ಫಸ್ಟ್ ಬಿಗ್ ಇಂಪ್ಯಾಕ್ಟ್!
ಸುಪ್ರೀಂ ಕೇಳಿದ ಪ್ರಶ್ನೆಗಳು ಏನೇನು..?
ಕೇಂದ್ರ ಸರ್ಕಾರದ ಪರ ಸಾಲಿಸಿಟರ್‌ಜನರಲ್ ತುಷಾರ್ ಮೆಪ್ತಾ ವಾದ ಮಂಡಿಸಿದರು. ಈ ವೇಳೆ ನ್ಯಾಯಾಲಯವು ಅನೇಕ ಪ್ರಶ್ನೆಗಳನ್ನು ಕೇಂದ್ರದ ಮುಂದೆ ಇಟ್ಟಿದೆ. ವಕ್ಸ್ ಕ್ಸ್ ಬೈ ಯೂಸರ್ (ಹಿಂದಿನಿಂದಲೂ ವಕ್ಸ್ ಮಂಡಳಿ ಅನುಭವಿಸಿಕೊಂಡು ಬಂದಿರುವುದು) ಆಸ್ತಿಯನ್ನು ಹೇಗೆ ದಾಖಲು ಮಾಡಿಕೊಳ್ಳುತ್ತೀರಿ? ಅವರ ಬಳಿ ಯಾವ ದಾಖಲೆಗಳಿವೆ? ಒಂದು ವೇಳೆ ನೀವು ಅವುಗಳನ್ನು ಡೀನೋಟಿಫೈ ಮಾಡುತ್ತಾ ಹೋದರೆ ಏನಾಗಬಹುದು? ವಕ್ಸ್ ವಿಚಾರದಲ್ಲಿ ಕೆಲ ಪ್ರಕರಣಗಳಲ್ಲಿ ದುರ್ಬಳಕೆ ಆಗಿದೆ ನಿಜ. ಆದರೆ, ಕೆಲ ನೈಜ ಪ್ರಕರಣಗಳಿವೆ. ನಾನು ಹಿಂದಿನ ತೀರ್ಪುಗಳನ್ನು ನೋಡಿದ್ದೇನೆ. ವಕ್ಸ್ ಬೈ ಯೂಸರ್ ಅನ್ನು ನ್ಯಾಯಾಲಯವು ಮಾನ್ಯ ಮಾಡುತ್ತದೆ. ಒಂದು ವೇಳೆ ವಕ್ಸ್ ಬೈ ಯೂಸರ್ ಅನ್ನು ರದ್ದು ಮಾಡಿದರೆ ಸಮಸ್ಯೆಯಾಗಬಹುದು. ಶಾಸಕಾಂಗಕ್ಕೆ ತೀರ್ಪು, ಆದೇಶ ನೀಡಲು ಅಥವಾ ಅನೂರ್ಜಿತ ಎಂದು ಹೇಳಲು ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟಿತು.
ಇದನ್ನೂ ಓದಿ:ಬದುಕು ಬದಲಿಸಿದ ರೀಲ್ಸ್.. ಕಿರುತೆರೆ ಲೋಕಕ್ಕೆ ಕಾಲಿಟ್ಟ ಸ್ಟಾರ್ಸ್ಗಳು ಇವರೇ ನೋಡಿ!
ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕದ ಅವಕಾಶವನ್ನು ನ್ಯಾಯಾಲಯ ಪ್ರಶ್ನಿಸಿದ ವೇಳೆ ಸರ್ಕಾರದ ಪರ ವಕೀಲರು, ಪದನಿಮಿತ್ತ ಅಧಿಕಾರಿಗಳ ಹೊರತಾಗಿ ಇಬ್ಬರು ಮುಸ್ಲಿಮೇತರರನ್ನು ಮಾತ್ರವೇ ನೇಮಕ ಮಾಡಬಹುದಾಗಿದೆ ಎಂದರು. ಆದರೆ ಇದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿಲ್ಲ. ಹೊಸ ಕಾಯ್ದೆ ಪ್ರಕಾರ ಕೇಂದ್ರೀಯ ವಕ್ಸ್ ಮಂಡಳಿಯ 22 ಸದಸ್ಯರ ಪೈಕಿ 8 ಜನರು ಮಾತ್ರವೇ ಮುಸ್ಲಿಮರಾಗಿರಬಹುದು. ಈ 8 ಜನರ ಪೈಕಿ ಇಬ್ಬರು ನ್ಯಾಯಾಧೀಶರಾಗಿದ್ದು, ಅವರು ಮುಸ್ಲಿಮರಾಗದೆಯೂ ಇರಬಹುದು. ಹಾಗಾದಲ್ಲಿ ಮಂಡಳಿಯಲ್ಲಿ ಮುಸ್ಲಿಮೇತರರರೇ ಬಹುಮತ ಹೊಂದಿರುತ್ತಾರೆ. ಇದು ಹೇಗೆ ಧಾರ್ಮಿಕ ಗುಣಲಕ್ಷಣಗಳನ್ನು ಹೊಂದಿದಂತಾಗುತ್ತದೆ ಎಂದು ಪ್ರಶ್ನೆ ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂ ಕೊರ್ಟ್ ಬಳಿ ಸಮಯಾವಕಾಶ ಕೇಳಿದೆ.
ಇದನ್ನೂ ಓದಿ:ವಿಶ್ವದಲ್ಲೇ ಮೊದಲ ಬಾರಿ ‘ಗೋಲ್ಗೊಂಡಾ ನೀಲಿ ವಜ್ರ’ ಹರಾಜು; ಎಷ್ಟು ಕೋಟಿಗೆ? ಏನಿದರ ಇತಿಹಾಸ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ