/newsfirstlive-kannada/media/post_attachments/wp-content/uploads/2024/11/Sunita-williams-2.jpg)
ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಮರಳಿ ಭೂಮಿಗೆ ಬರುವ ದಿನಗಳು ಹತ್ತಿರವಾಗಿವೆ. ಈಗಾಗಲೇ ಬಾಹ್ಯಾಕಾಶದಲ್ಲಿ ಅವರು ಬರೋಬ್ಬರಿ 9 ತಿಂಗಳನ್ನು ಕಳೆದಿದ್ದಾರೆ. ಮಾರ್ಚ್​ 19 ರಂದು ಉಭಯ ಗಗನಯಾತ್ರಿಗಳು ಸ್ಪೇಸ್​ ಎಕ್ಸ್​ನ ಡ್ರಾಗನ್ ಸ್ಪೇಸ್​​ಕ್ರಾಫ್ಟ್​ ಮೂಲಕ ಮರಳಿ ಭೂಮಿಗೆ ಬರಲಿದ್ದಾರೆ.
ಸದ್ಯ 9 ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಬದುಕು ಕಳೆದಿರು ಈ ಗಗನಯಾತ್ರಿಗಳಿಗೆ ನಾಸಾ ಹೆಚ್ಚುವರಿ ಸಂಬಳ ನೀಡುತ್ತಾ ಎಂಬುವ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ. ಈಗಾಗಲೇ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಸುನೀತಾ ಹಾಗೂ ವಿಲ್ಮೋರ್​ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಹೀಗಾಗಿ ಓವರ್​ ಟೈಮ್​ ಕಾರ್ಯನಿರ್ವಹಿಸಿದ್ದಕ್ಕೆ ಸ್ಯಾಲರಿಯಲ್ಲಿ ಹೆಚ್ಚು ಸಿಗುತ್ತದಾ ಎಂಬ ಪ್ರಶ್ನೆಗಳು ಗರಿಗೆದರಿದ್ದು, ನಾಸಾದಿಂದ ನೋ ಎಂಬ ಉತ್ತರ ಬಂದಿದೆ.
ನಾಸಾ ಹೇಳುವ ಪ್ರಕಾರ ನಮ್ಮಲ್ಲಿ ಓವರ್​​ ಟೈಮ್​ಗೆ ಹೆಚ್ಚಿನ ಸಂಬಳ ಅಥವಾ ಭತ್ಯೆ ನೀಡುವ ಪದ್ಧತಿಯಿಲ್ಲ. ಸುನಿತಾ ವಿಲಿಯಮ್ಸ್ ಹಾಗೂ ಬಚ್​ ವಿಲ್ಮೋರ್​​ಗೆ ಬಾಹ್ಯಾಕಾಶದಲ್ಲಿ ಹೆಚ್ಚುವರಿ ದಿನಗಳ ಕಾಲ ಉಳಿದಿದ್ದಕ್ಕೆ ಯಾವುದೇ ರೀತಿಯ ಹೆಚ್ಚವರಿ ಸಂಬಳ ಅಥವಾ ಭತ್ಯೆ ನೀಡಲಾಗುವುದಿಲ್ಲ ಎಂದು ಹೇಳಿದೆ.
/newsfirstlive-kannada/media/post_attachments/wp-content/uploads/2025/03/SAMPURN-SINGH-2.jpg)
ಇದನ್ನೂ ಓದಿ: ಭೂಮಿಗೆ ಬಂದ ಮೇಲೆ ಸುನಿತಾ ವಿಲಿಯಮ್ಸ್, ವಿಲ್ಮೋರ್ ಆರೋಗ್ಯ ಹೇಗಿರಲಿದೆ.. ಯಾವ್ಯಾವ ಸಮಸ್ಯೆಗಳು ಕಾಡುತ್ತವೆ?
ಗಗನಯಾತ್ರಿಗಳಿಗೆ ಫೆಡರಲ್​ ಎಂಪ್ಲಾಯಿಗಳು ನಡೆಸುವ ಬ್ಯುಸಿನೆಸ್ ಟ್ರಿಪ್​ಗೆ ಸಂಬಳ ನೀಡಲಾಗುತ್ತದೆ. ಅವರಿಗೆ ನಿಯಮಿತವಾಗಿ ನೀಡುತ್ತಿರುವ ಸಂಬಳವನ್ನೇ ನೀಡಲಾಗುವುದು ಹೊರತು ಯಾವುದೇ ಓವರ್ ಟೈಮ್​ಗಳನ್ನು ನಾಸಾ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾಸಾ ಈಗಾಗಲೇ ಉಭಯ ಗಗನಯಾತ್ರಿಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿದೆ. ಸಾರಿಗೆ, ವಸತಿ ಹಾಗೂ ಊಟವನ್ನು ಎಲ್ಲಾ ನೀಡಿದೆ ಎಂದು ಕೊಲೆಮನ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮಾರ್ಚ್​ 15 ರಂದು ಸ್ಪೇಸ್ ಎಕ್ಸ್ ಮತ್ತು ನಾಸಾ ಸುನೀತಾ ವಿಲಿಯಮ್ಸ್ ಹಾಗೂ ಬಚ್​ ವಿಲ್ಮೋರ್ ಅವರನ್ನು ವಾಪಸ್ ಕರೆದುಕೊಂಡು ಬರಲು ಮಿಷನ್ ಲಾಂಚ್ ಮಾಡಲಾಗಿದೆ. ಶುಕ್ರವಾರ 7.30ಕ್ಕೆ ಲ ಫಾಲ್ಕೊನ್​ 9 ಆಕೆಟ್​ ಡ್ರಾಗನ್​ ಸ್ಪೇಸ್​ಕ್ರಾಫ್ಟ್​ ಬಾಹ್ಯಾಕಾಶನೌಕೆಯನ್ನು ಹೊತ್ತೊಯ್ದಿದೆ ಎಂದು ಹೇಳಲಾಗಿದೆ.
ಕೊಲೆಮನ್ ಹೇಳುವ ಪ್ರಕಾರ ಸುನೀತಾ ವಿಲಿಯಮ್ಸ್​ ಹಾಗೂ ವಿಲ್ಮೋರ್​ಗೆ ದಿನದ ಭತ್ಯೆಯಾಗಿ ಪ್ರತಿ ದಿನ ಸುಮಾರು 4 ಡಾಲರ್ ನೀಡಲಾಗುವುದು ಅಂದ್ರೆ ಭಾರತೀಯ ರೂಪಾಯಿಯಲ್ಲಿ 347 ರೂಪಾಯಿ ಅಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us