ಅನುದಾನ ಕದನಕ್ಕೆ ಮುನ್ನುಡಿ ಬರೆದಿರುವ ಕಾಂಗ್ರೆಸ್
ಪ್ರತಿಭಟನೆಗೆ ಸಾಥ್ ಕೊಡುವಂತೆ ಸಿಎಂ ಆಮಂತ್ರಣ
ಬಿಜೆಪಿ 25 ಸಂಸದರು, ಮಾಜಿ ಪ್ರಧಾನಿ ಗೌಡರಿಗೆ ಪತ್ರ
ಬೆಂಗಳೂರು: ಅನುದಾನ ತಾರತಮ್ಯ ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸ್ತಿದೆ. ಇದೇ ವೇಳೆ, ಸಿಎಂ ಸಿದ್ದರಾಮಯ್ಯ, ಕರ್ನಾಟಕ ಅಸ್ಮಿತೆಯ ದಾಳ ಉರುಳಿಸಿದ್ದಾರೆ. ರಾಜ್ಯಕ್ಕೆ ಆಗ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಅಂತ ಪಕ್ಷಾತೀತವಾಗಿ ಎಲ್ಲ ಸಂಸದರಿಗೂ ಪತ್ರ ಬರೆದಿದ್ದಾರೆ. ಈ ಮೂಲಕ ಅನ್ಯ ಪಕ್ಷದ ನಾಯಕರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಅನುದಾನ ಕದನಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್ ಕರ್ನಾಟಕ ಪರ ಧ್ವನಿ ಎತ್ತಿದೆ. ಇಂದು ಡೆಲ್ಲಿ ಅಂಗಳದಲ್ಲಿ ಪ್ರತಿಭಟನೆಗೆ ಕಿಚ್ಚು ಹಾಯಿಸಲಿದೆ. ಈ ಧ್ವನಿ ಕರ್ನಾಟಕಕ್ಕಾಗಿ, ಈ ಧ್ವನಿ ಅನುದಾನದ ಅನ್ಯಾಯದ ವಿರುದ್ಧ, ಈ ಪ್ರತಿಭಟನೆ ತಾರತಮ್ಯದ ಕಾರಣಕ್ಕೆ ಅಂತ ಕಾಂಗ್ರೆಸ್ ಸಾರಿದೆ. ತನ್ನ ಪ್ರತಿಭಟನೆ ಪಕ್ಷವನ್ನ ಮೀರಿ ರಾಜ್ಯದ ಹಿತ ಕಾಯಲು ಅಂತ ಹೇಳಿಕೆ ನೀಡಿದೆ. ಡೆಲ್ಲಿಯಲ್ಲಿ ಮೊಳಗುವ ಸಂಘರ್ಷಕ್ಕೆ ಸಾಥ್ ನೀಡುವಂತೆ ಪಕ್ಷಾತೀತವಾಗಿ ಎಲ್ಲ ನಾಯಕರಿಗೂ ಆಮಂತ್ರಣ ನೀಡಿದೆ. ಈ ಮೂಲಕ ಮಲತಾಯಿ ಧೋರಣೆ ತಾಳ್ತಿರುವ ಡೆಲ್ಲಿ ದೊರೆಗಳ ವಿರುದ್ಧ ಠೇಂಕಾರ ಮೊಳಗಿದೆ.
ಹೋರಾಟವನ್ನ ಬೆಂಬಲಿಸುವಂತೆ ಸಂಸದರಿಗೆ ಸಿಎಂ ಪತ್ರ
ಅನುದಾನ ತಾರತಮ್ಯ ಆರೋಪಿಸಿ ಕಾಂಗ್ರೆಸ್ ನಡೆಸ್ತಿರುವ ಪ್ರತಿಭಟನೆಗೆ ಬೆಂಬಲಿಸುವಂತೆ ಸಿಎಂ ಸಿದ್ದರಾಮಯ್ಯ ಸಂಸದರನ್ನೂ ಆಹ್ವಾನಿಸಿದ್ದಾರೆ. ಕರ್ನಾಟಕದ ನ್ಯಾಯದ ಪಾಲಿಗಾಗಿ ಪಕ್ಷಾತೀತವಾಗಿ ಎಲ್ಲ ಸಂಸದರಿಗೂ ಹೋರಾಟಕ್ಕೆ ಸಿಎಂ ಆಹ್ವಾನಿಸಿದ್ದಾರೆ. ಬಿಜೆಪಿಯ 25 ಸಂಸದರು, ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯವನ್ನೇ ಪ್ರತಿನಿಧಿಸುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಸಂಸದೆ ಸುಮಲತಾಗೂ ಸಿಎಂ ಪತ್ರ ಬರೆದಿದ್ದಾರೆ.
‘ಕನ್ನಡಿಗರ ಸ್ವಾಭಿಮಾನಿ ಹೋರಾಟಕ್ಕೆ ಬೆಂಬಲಿಸಿ’
ಒಂದು ವಿಶೇಷ ಸಂದರ್ಭದಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ತಿಳಿದ ವಿಷಯ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಫೆಬ್ರವರಿ 07 ರಂದು ಒಂದು ದಿನದ ಧರಣಿ ಸತ್ಯಾಗ್ರಹಕ್ಕೆ ತೀರ್ಮಾನಿಸಿದ್ದೇವೆ. ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿಂದ, ಈ ಧರಣಿಯಲ್ಲಿ ಪಾಲ್ಗೊಂಡು ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ ಎಂದು ಸಿದ್ದರಾಮಯ್ಯ ಕೇಳಿಕೊಂಡಿದ್ದಾರೆ.
ಆದ್ರೆ, ಇತ್ತ ಬಿಜೆಪಿ ಮಾತ್ರ ಈ ಹೋರಾಟವನ್ನ ರಾಜಕೀಯ ಕಣ್ಣಿನಿಂದ ನೋಡ್ತಿದೆ. ಸಂಸದ ರಾಘವೇಂದ್ರ ಮತ್ತು ಮುನಿಸ್ವಾಮಿ ಹೋರಾಟಕ್ಕೆ ರಾಜಕೀಯ ಬಣ್ಣ ಕಟ್ಟಿದ್ರೆ, ಕಲಬುರಗಿ ಸಂಸದ ಜಾಧವ್, ಅಂಕಿ ಅಂಶಗಳನ್ನ ನೋಡಿದ್ರೆ ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ ಆಗ್ತಿದೆ ಅಂತ ಅಚ್ಚರಿ ಹೇಳಿಕೆ ನೀಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಿಎಂ ಮನವಿ ಮಾಡಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಕೇಂದ್ರ ಸಚಿವರು, ಸಂಸತ್ ಸದಸ್ಯರಿಗೆ ಖುದ್ದು ಪತ್ರ ಬರೆದಿದ್ದಾರೆ. ಕನ್ನಡಿಗರ ಹಕ್ಕು ಮತ್ತು ಸ್ವಾಭಿಮಾನಕ್ಕೆ ಕೇಂದ್ರದಿಂದ ನಿರಂತರವಾಗಿ ಅನ್ಯಾಯ ಆಗ್ತಿದೆ ಅಂತ ದೂರಿದ್ದಾರೆ. ಈ ಮೂಲಕ ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಯ ದಾಳ ಉರುಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ