/newsfirstlive-kannada/media/post_attachments/wp-content/uploads/2024/12/DARSHAN-SUPREME-COURT.jpg)
ಗೆ ಹೋಗಲು ಪ್ರಾಸಿಕ್ಯೂಷನ್ ಸಜ್ಜಾಗಿದೆ. ಸದ್ಯ ಹೈಕೋರ್ಟ್​ ಬೇಲ್ ನೀಡಿರುವುದರಿಂದ ಕೊನೆಯ ದಾರಿ ಪ್ರಾಸಿಕ್ಯೂಷನ್​ಗೆ ಉಳಿದಿರುವುದು ಸುಪ್ರೀಂಕೋರ್ಟ್​ ಒಂದೇ. ಇದಕ್ಕಾಗಿ ಸರ್ಕಾರ ಅನುಮತಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಅನುಮತಿ ನೀಡಿದ್ದೇ ಮತ್ತೆ ದರ್ಶನ್​ಗೆ ತೊಳಲಾಟ ತಪ್ಪಿದ್ದಲ್ಲ.
ಒಂದು ವೇಳೆ ಸುಪ್ರೀಂಕೋರ್ಟ್​​ನಲ್ಲಿ ಹೈಕೋರ್ಟ್​ ಜಾಮೀನನ್ನು ಪ್ರಶ್ನಿಸಿದ್ದೇ ಆದಲ್ಲಿ ಮತ್ತೆ ದರ್ಶನ್​ಗೆ ಢವಢವ ಶುರುವಾಗೋದು ಫಿಕ್ಸ್. ಯಾಕಂದ್ರೆ ಅನೇಕ ಕೇಸ್​ಗಳಲ್ಲಿ ಹೈಕೋರ್ಟ್​ ಕೊಟ್ಟ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದ್ದು ಇದೆ. ಹೀಗಾಗಿ ಒಂದು ವೇಳೆ ಸುಪ್ರೀಂಕೋರ್ಟ್​ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದೇ ಆದಲ್ಲಿ ದರ್ಶನ್​ಗೆ ಮತ್ತೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಸುಪ್ರೀಂಕೋರ್ಟ್​ ಹೈಕೋರ್ಟ್​ನ ಆದೇಶವನ್ನು ಎತ್ತಿಹಿಡಿದ ಪಕ್ಷದಲ್ಲಿ ದರ್ಶನ್ ಸೇಫ್.
ಸದ್ಯ ಸುಪ್ರೀಂಕೋರ್ಟ್​ಗೆ ಮೇಲ್ಮನವಿಯನ್ನು ಪ್ರಾಸಿಕ್ಯೂಷನ್ ಸಲ್ಲಿಸುತ್ತಾ, ಅದಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತಾ ಅನ್ನುವದೇ ಒಂದು ಅನುಮಾನ. ಯಾಕಂದ್ರೆ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹೋಗಲು ಪ್ರಾಸಿಕ್ಯೂಷನ್ ಆರಂಭದಲ್ಲಿ ದೊಡ್ಡ ಉತ್ಸಾಹ ತೋರಿಸಿತ್ತು. ಆದ್ರೆ ತಿಂಗಳಾದರೂ ಕೂಡ ಅದು ಸಾಧ್ಯವಾಗಲಿಲ್ಲ. ಈಗ ಪೂರ್ಣಾವಧಿ ಜಾಮೀನನ್ನು ಪ್ರಶ್ನೆ ಮಾಡಲು ಸುಪ್ರೀಂಕೋರ್ಟ್​ನ ಮೊರೆ ಹೋಗುತ್ತಾ ಅದಕ್ಕೆ ಸರ್ಕಾರ ಅನುಮತಿ ನೀಡುತ್ತಾ ಅನ್ನೋ ಅನುಮಾನ ಕಾಡಲು ಮಧ್ಯಂತರ ಜಾಮೀನು ವಿಚಾರದಲ್ಲಿ ಸರ್ಕಾರ ಅನುಮತಿ ನೀಡುವಲ್ಲಿ ಅನುಸರಿಸಿದ ವಿಳಂಬ ನೀತಿಯನ್ನು ನೋಡಿದಾಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us