RCB ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​.. 2026ಕ್ಕೆ ಬೆಂಗಳೂರು ತೊರೆದು ಹೊಸ ಹೋಮ್​ ಗ್ರೌಂಡ್​​ಗೆ ಶಿಫ್ಟ್..?

author-image
Ganesh
Updated On
RCB ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​.. 2026ಕ್ಕೆ ಬೆಂಗಳೂರು ತೊರೆದು ಹೊಸ ಹೋಮ್​ ಗ್ರೌಂಡ್​​ಗೆ ಶಿಫ್ಟ್..?
Advertisment
  • ಕಾಲ್ತುಳಿತ ಪ್ರಕರಣದಿಂದ ಹದಗೆಟ್ಟ ಸರ್ಕಾರ, RCB ಸಂಬಂಧ
  • ಚಿನ್ನಸ್ವಾಮಿಯ ಸಂಬಂಧ ಕಳೆದುಕೊಳ್ಳುತ್ತಾ ಆರ್​ಸಿಬಿ?
  • ಕಾಲ್ತುಳಿತ ಪ್ರಕರಣದ ವರದಿಯಲ್ಲಿ ಆರ್​ಸಿಬಿ ಟಾರ್ಗೆಟ್​

2026ಕ್ಕೆ ಆರ್​ಸಿಬಿ ಬೆಂಗಳೂರು ತೊರೆಯುತ್ತಾ? ಬೆಂಗಳೂರಿನ ಚಿನ್ನಸ್ವಾಮಿನ್ನೇ ಹೋಮ್ ಗ್ರೌಂಡ್ ಮಾಡಿಕೊಳ್ಳುತ್ತಾ? ಇಲ್ಲ, ಹೊಸ ಹೋಮ್ ಗ್ರೌಂಡ್ ನೋಡಿಕೊಳ್ಳುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಾದ ಕಾಲ್ತುಳಿತ ಪ್ರಕರಣ!

ಬರೋಬ್ಬರಿ 18 ವರ್ಷಗಳ ತಪಸ್ಸು.. ಸೀಸನ್​​-18ರಲ್ಲಿ ನನಸಾಗಿತ್ತು. ಗೆದ್ದ ಖುಷಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ವಿಜಯೋತ್ಸವದ ವೇಳೆ ಕೆಲ ಅಭಿಮಾನಿಗಳು ತೋರಿದ ಅತಿರೇಕದ ವರ್ತನೆ, ಗೆಲುವಿನ ಸಂಭ್ರಮ 18 ಗಂಟೆಗಳ ಕಾಲವೂ ಉಳಿಯದಂತಾಯ್ತು. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಿನ ಕಾಲ್ತುಳಿತದಲ್ಲಿ 11 ಅಭಿಮಾನಿಗಳ ಸಾವು, ಸೂತಕದ ಮನೆಯನ್ನಾಗಿಸಿತ್ತು. ಇದಕ್ಕೆಲ್ಲ ಮೂಲ ಕಾರಣ ಆರ್​ಸಿಬಿ, ಕೆಎಸ್​ಸಿಎ ಹಾಗೂ ಕಾರ್ಯಕ್ರಮದ ಆಯೋಜಕರಾದ ಡಿಎನ್​​ಎ ಎಂದೇ ವರದಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ನಮಗೆ ದೇಶ ಮುಖ್ಯ, ಪಾಕ್ ವಿರುದ್ಧ ಆಡಲ್ಲ ಎಂದ ಲೆಜೆಂಡ್ಸ್​.. ಪಂದ್ಯ ರದ್ದು ಮಾಡಿ ಕ್ಷಮೆ ಕೇಳಿದ WCL!

publive-image

ರಾಜ್ಯ ಸರ್ಕಾರ ಹೈಕೋರ್ಟ್​ಗೆ ಸಲ್ಲಿಸಲಾದ 331 ಪುಟಗಳ ತನಿಖಾ ವರದಿಯಲ್ಲಿ ಸಂಪೂರ್ಣ ಆರ್​​ಸಿಬಿಯನ್ನೇ ಟಾರ್ಗೆಟ್ ಮಾಡಲಾಗಿದೆ. ಬಸ್​​ ಪರೇಡ್, ಉಚಿತ ಪಾಸ್​​​ಗಳ ಪೋಸ್ಟ್​ಗಳು ಗೊಂದಲ ಸೃಷ್ಟಿಸಿತ್ತು. ಮಿಸ್ ಮ್ಯಾನೇಜ್​ಮೆಂಟ್​, ಪರ್ಮಿಷನ್ ವಿಚಾರದಲ್ಲಾದ ಯಡವಟ್ಟುಗಳು ಸ್ಟೇಡಿಯಂ ಸುತ್ತ ಜನಸಾಗರ ಹರಿದು ಬರವಂತೆ ಮಾಡಿತ್ತು. ಇದೇ ಕಾಲ್ಕುಳಿತಕ್ಕೆ ಕಾರಣ ಎಂದು ವರದಿ ಸಲ್ಲಿಸಿದೆ. ಇದೇ ವರದಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್​ಸಿಬಿಯ ಭವಿಷ್ಯವೇನು ಎಂಬ ಪ್ರಶ್ನೆ ಹುಟ್ಟಿಹಾಕಿದೆ.

ಫ್ರಾಂಚೈಸಿಯಾಗಿ ಬೆಂಗಳೂರಲ್ಲೇ ಉಳಿಯುತ್ತಾ ಆರ್​ಸಿಬಿ?

ಇಂಥದ್ದೊಂದು ಪ್ರಶ್ನೆ ಸಹಜವಾಗೇ ಉದ್ಭವವಾಗುತ್ತೆ. ಇದಕ್ಕೆ ಕಾರಣ ಆರ್​ಸಿಬಿ ಫ್ರಾಂಚೈಸಿ ಮೇಲಿನ ರಾಜಕೀಯದ ಮೇಲಾಟ. ಸದ್ಯ ಕಾಲ್ತುಳಿತದ ತನಿಖಾ ವರದಿಯಲ್ಲಿ ಸಂಪೂರ್ಣ ಆರ್​ಸಿಬಿಯ ಮಿಸ್ ಮ್ಯಾನೇಜ್​​ಮೆಂಟ್​ ಬಗ್ಗೆಯೇ ಉಲ್ಲೇಖಿಸಲಾಗಿದೆ. ಇದಕ್ಕೆಲ್ಲಾ ನೇರ ಕಾರಣ ಆರ್​ಸಿಬಿ ಎಂಬಂತೆಯೇ ಬಿಂಬಿಸಲಾಗಿದೆ. ಆರ್​ಸಿಬಿಯನ್ನೇ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಘಟನೆಯ ಆರಂಭದಿಂದಲೇ ಬ್ಲೇಮ್ ಗೇಮ್ ಶುರುವಾಗಿತ್ತು. ಈ ಬ್ಲೇಮ್​​ ಗೇಮ್​ನಲ್ಲಿ ರಾಜ್ಯ ಸರ್ಕಾರವೇ ಗೆದ್ದಿದೆ. ರಾಜ್ಯ ಸರ್ಕಾರ ವರ್ಸಸ್ ಆರ್​ಸಿಬಿ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆರ್​ಸಿಬಿ, ಫ್ರಾಂಚೈಸಿಯಾಗಿ ಬೆಂಗಳೂರಿನಲ್ಲೇ ಉಳಿಯುತ್ತಾ? ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯುವ ಪ್ಲಾನ್​.. ಕನ್ನಡಿಗನ ಮೇಲೆ ಕಣ್ಣಿಟ್ಟ ಕೆಕೆಆರ್​..!

publive-image

ಚಿನ್ನಸ್ವಾಮಿಯ ಹೊರಗೆ ಆಡುವ ನಿರ್ಣಯ ಕೈಗೊಳ್ಳುತ್ತಾ..?

ಚಿನ್ನಸ್ವಾಮಿಯಲ್ಲೇ ಆರ್​ಸಿಬಿ ಆಡಬೇಕಾದ್ರೆ ರಾಜ್ಯ ಸರ್ಕಾರದ ಬೆಂಬಲ ಬೇಕು. ಸೆಕ್ಯುರಿಟಿಗಾಗಿ ಪೋಲಿಸರ ಸಹಾಯಬೇಕು. ಸ್ಥಳೀಯ ಕಾರ್ಪೋರೇಟ್​​ ಸಂಸ್ಥೆಯ ಅನುಗ್ರಹ ಬೇಕು. ಇದ್ಯಾವ ಬೆಂಬಲ ಇಲ್ದೇ ಆರ್​ಸಿಬಿ ಫ್ರಾಂಚೈಸಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆಡುವುದು ಅಸಾಧ್ಯದ ಕೆಲಸ. ಇದೀಗ ಈ ಸಂಬಂಧಗಳೆಲ್ಲ ಕೆಟ್ಟಿವೆ. ಹೀಗಾಗಿ ಬೆಂಗಳೂರಿನ ಹೊರಗೆ ಆಡುವ ನಿರ್ಧಾರ ಆರ್​ಸಿಬಿ ಮಾಡಿದ್ರೂ ಅಚ್ಚರಿ ಇಲ್ಲ.

ಈಗಾಗಲೇ ರಾಜ್ಯ ಸರ್ಕಾರ ಕಂಪ್ಲೀಟ್​, ಆರ್​ಸಿಬಿ ವಿರುದ್ಧ ಇದೆ. ಇಂಥಹ ವೇಳೆ ರಾಜ್ಯ ಸರ್ಕಾರದ ಸಹಕಾರ ಇಲ್ದೇ, ಚಿನ್ನಸ್ವಾಮಿಯಲ್ಲಿ ಪಂದ್ಯ ಕಷ್ಟ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್​, ಪಂಜಾಬ್ ತಂಡಗಳು ಇತರೆ ಸ್ಟೇಡಿಯಂನಲ್ಲಿ ಕೆಲ ಪಂದ್ಯಗಳನ್ನ ಆಯೋಜಿಸುವಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇವರೆಲ್ಲರ ಉಸಾಬರಿ ಯಾಕಪ್ಪ ಎಂದು 2026ಕ್ಕೆ ನ್ಯೂ ಹೋಮ್ ಟೀಮ್​ ನೋಡಿಕೊಳ್ಳುತ್ತಾ ಎಂಬ ಪ್ರಶ್ನೆಯೂ ಇದೆ. ಬೆಂಗಳೂರು ಎಂಬ ಬ್ರ್ಯಾಂಡ್ ಬಿಟ್ರೆ, ಆರ್​ಸಿಬಿ ಫ್ಯಾನ್ಸ್​ ಬೆಂಬಲವೂ ಕಳೆದುಕೊಳ್ಳುತ್ತೆ. ಹೀಗಾಗಿ ಹೋಮ್ ಗ್ರೌಂಡ್ ಬದಲಿಸುವ ನಿರ್ಣಯ ಮಾಡುತ್ತಾ ಕಾದುನೋಡಬೇಕಿದೆ.

ಇದನ್ನೂ ಓದಿ: ಅವನಲ್ಲ, ಅವಳು! ಅವಳಲ್ಲ, ಅವನು ಭಾರೀ ಗೊಂದಲ.. 30 ವರ್ಷದಿಂದ ಅಕ್ರಮ ವಾಸ, ಬಾಂಗ್ಲಾ ಪ್ರಜೆ ಅರೆಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment