/newsfirstlive-kannada/media/post_attachments/wp-content/uploads/2024/05/RCB_RR_WETHER_1.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ, ಫ್ಯಾನ್ಸ್​ ಮನದಲ್ಲಿ ಹೊಸ ಆಸೆ ಚಿಗುರಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಈ 3 ವಿಭಾಗಗಳಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿದ ಆರ್​​ಸಿಬಿ ಅಭಿಮಾನಿ ವಲಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಇಂದಿನ RCB vs RR ಎಲಿಮಿನೇಟರ್ ಪಂದ್ಯ ವರುಣಾರ್ಭದಿಂದ ವಾಶ್​ಔಟ್​ ಆಗುತ್ತಾ ಎಂಬ ಅನುಮಾನ ಇರೋರು ಈ ಸುದ್ದಿಯನ್ನ ಸಂಪೂರ್ಣವಾಗಿ ಓದಿ.
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಂದ್ಯ ನಡೆಯುವ ವೇಳೆ ಮಳೆ ಏನಾದ್ರೂ ಬಂದು ಅಡ್ಡಿ ಪಡಿಸುತ್ತ ಎನ್ನುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಇದೆ. ಆದರೆ ಮಳೆಯಿಂದ ಈ ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಅಡ್ಡಿಯಾಗಲ್ಲ. ಏಕೆಂದರೆ ಸ್ಟೇಡಿಯಂ ಸುತ್ತ ಮಳೆ ಬೀಳುವ ಮುನ್ಸೂಚನೆ ‘0’ ಪರ್ಸೆಂಟ್​ ಇದೆ. ಬಿಸಿಲಿನ ವಾತಾವರಣವೇ ಅಧಿಕವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ:RCBಗೆ ಶುಭ ಶಕುನ.. ಶುಭ ಶಕುನ ಬಂದೈತೆ.. ಗೆಲ್ಲೋ ಲೆಕ್ಕಚಾರ ಹೇಳುತ್ತಿದೆ ಈ ತಿಂಗಳು
/newsfirstlive-kannada/media/post_attachments/wp-content/uploads/2024/05/RCB_RR_WETHER-1.jpg)
ಇನ್ನು ಈ IPL ಸೀಸನ್​ನಲ್ಲಿ ವರುಣರಾಯ ಕೆಲ ಪಂದ್ಯಗಳಿಗೆ ಅಡ್ಡಿಪಡಿಸಿದ್ದರೂ, ಇಂದಿನ ಬೆಂಗಳೂರು ಮತ್ತು ರಾಜಸ್ಥಾನ ಪಂದ್ಯದಿಂದ ದೂರ ಇದ್ದಾನೆ. ಅಹಮದಾಬಾದ್‌ನಲ್ಲಿ ಆಕಾಶ ಸ್ವಚ್ಛಂದವಾಗಿದ್ದು ಬಳಿ ಮೋಡವಾಗಿದೆ. ಮ್ಯಾಚ್​ ವೀಕ್ಷಕರು ಯಾವುದೇ ಸಮಸ್ಯೆಯ ಗೊಂದಲ ಇಲ್ಲದೇ ಪಂದ್ಯವನ್ನು ನೋಡಿ ಆನಂದಿಸಬಹುದು. ಸದ್ಯ ಸೂರ್ಯನ ತಾಪಮಾನ 42 C ಇದ್ದು ಉರಿ ಬಿಸಿಲಿನಿಂದ ವಾತಾವರಣ ಕೂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us