ಟೆಸ್ಟ್​ ಬೆನ್ನಲ್ಲೇ IPLಗೂ ಗುಡ್​ಬೈ ಹೇಳ್ತಾರಾ ಹಿಟ್​​ಮ್ಯಾನ್​ ರೋಹಿತ್ ಶರ್ಮಾ.. ಕಾರಣವೇನು?

author-image
Bheemappa
Updated On
ಟೆಸ್ಟ್​ ಬೆನ್ನಲ್ಲೇ IPLಗೂ ಗುಡ್​ಬೈ ಹೇಳ್ತಾರಾ ಹಿಟ್​​ಮ್ಯಾನ್​ ರೋಹಿತ್ ಶರ್ಮಾ.. ಕಾರಣವೇನು?
Advertisment
  • ಇಂಪ್ಯಾಕ್ಟ್​ ಪ್ಲೇಯರ್​ ಆಗಿ ರೋಹಿತ್ ಶರ್ಮಾರನ್ನ ಬಳಸುತ್ತಿರುವುದು ಏಕೆ?
  • ರೋಹಿತ್​​ರನ್ನ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದ ಮುಂಬೈ ಇಂಡಿಯನ್ಸ್
  • ಸುದೀರ್ಘ 3 ತಿಂಗಳು ಬ್ಯಾಕ್​ ಟು ಬ್ಯಾಕ್ ಮ್ಯಾಚ್ ಆಡ್ತಾರಾ ಹಿಟ್​​ಮ್ಯಾನ್?

ಐಪಿಎಲ್​ ಅಬ್ಬರದ ನಡುವೆ ರೋಹಿತ್​ ಶರ್ಮಾ ಟೆಸ್ಟ್​ ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಒನ್​​ ಡೇ ಕ್ರಿಕೆಟ್​ ಮಾತ್ರ ಆಡೋದಾಗಿ ತಿಳಿಸಿರೋ ಹಿಟ್​ಮ್ಯಾನ್​, ಇದೀಗ ಐಪಿಎಲ್​ಗೂ ವಿದಾಯ ಹೇಳೋಕೆ ರೆಡಿಯಾಗಿದ್ದಾರಂತೆ. ಹಾಗಾದ್ರೆ, ಇದೇ ರೋಹಿತ್​ ಶರ್ಮಾರ ಕೊನೆಯ ಐಪಿಎಲ್​ ಟೂರ್ನಿನಾ?.

ಸೀಸನ್​​ 18ರ ಐಪಿಎಲ್​​ ತಾತ್ಕಾಲಿಕ ಶಟ್​​ಡೌನ್​​ ಆಗಿದೆ. ಈ ಹೊತ್ತಿನಲ್ಲೇ ಟೆಸ್ಟ್​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿರುವ ರೋಹಿತ್​ ಶರ್ಮಾ, ಇಂಗ್ಲೆಂಡ್​ ಟೂರ್​​ಗೂ ಮುನ್ನ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಆದ್ರೆ, ಇದೇ ರೋಹಿತ್ ಶರ್ಮಾ ಟೆಸ್ಟ್​ಗೆ ಮಾತ್ರವಲ್ಲ. ಮತ್ತೊಂದು ಕ್ರಿಕೆಟ್​ಗೂ ಗುಡ್​ ಬೈ ಹೇಳಲು ಸನ್ನದ್ಧರಾಗಿದ್ದಾರೆ.

publive-image

ಟೆಸ್ಟ್​, ಟಿ20 ಬಳಿಕ ಐಪಿಎಲ್​ಗೂ ಗುಡ್​ ಬೈ.?

ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟಿ20 ಇಂಟರ್​ನ್ಯಾಷನಲ್​ಗೆ ಗುಡ್​ ಬೈ ಹೇಳಿದ್ದ ರೋಹಿತ್​ ಶರ್ಮಾ, ಇದೀಗ ರೆಡ್​ ಬಾಲ್​ ಫಾರ್ಮೆಟ್​ಗೂ ಗುಡ್​ ಬೈ ಹೇಳಿದ್ದಾರೆ. ಈ ಮೂಲಕ ಇಂಟರ್​​ನ್ಯಾಷನಲ್ ಕ್ರಿಕೆಟ್​ನಲ್ಲಿ ಏಕದಿನ ಫಾರ್ಮೆಟ್​ಗೆ ಮಾತ್ರ ಸೀಮಿತವಾಗೋ ನಿರ್ಧಾರ ಮಾಡಿದ್ದಾರೆ. ರೋಹಿತ್​ ಶರ್ಮಾ ನಿವೃತ್ತಿ ಬಗ್ಗೆ ಹಾಕಿರೋ ಫೋಸ್ಟ್​ ಸ್ಪಷ್ಟವಾಗಿ ಇದನ್ನ ಹೇಳ್ತಿದೆ. ಆದ್ರೆ, ಇದ್ರ ನಡುವೆ ಐಪಿಎಲ್​ ಭವಿಷ್ಯದ ಚರ್ಚೆ ಎದ್ದಿದೆ. ಈ ಸೀಸನ್​​ ಐಪಿಎಲ್​ ಅಂತ್ಯದ ಬಳಿಕ ರೋಹಿತ್​ ಐಪಿಎಲ್​ಗೆ ಗುಡ್​ ಬೈ ಹೇಳ್ತಾರೆ ಎನ್ನಲಾಗ್ತಿದೆ.

ಇದೇ ಹಿಟ್​ಮ್ಯಾನ್​ ರೋಹಿತ್​ ಕೊನೆ ಸೀಸನ್​.?

ಸೀಸನ್​ 18ರ ಐಪಿಎಲ್​ನ ಆರಂಭದಲ್ಲಿ ಫ್ಲಾಪ್​ ಶೋ ನೀಡ್ತಾ ಇದ್ದ ರೋಹಿತ್​ ಶರ್ಮಾ ಈಗ ಸೂಪರ್​ ಹಿಟ್​ ಆಗಿದ್ದಾರೆ. ಕಳೆದ ಕೆಲ ಪಂದ್ಯಗಳಿಂದ ಹಳೆ ಖದರ್​ನಲ್ಲಿ ಘರ್ಜಿಸ್ತಾ ಇದ್ದಾರೆ. ಈ ಅಬ್ಬರದ ಆಟದ ನಡುವೆಯೂ ರಿಟೈರ್​ಮೆಂಟ್​ನ ಗುಲ್​ ಎದ್ದಿದೆ. ಈ ಸೀಸನ್​ ಅಂತ್ಯದ ಬಳಿಕ ಮಿಲಿಯನ್​ ಡಾಲರ್ ಟೂರ್ನಿಗೂ ವಿದಾಯ ಹೇಳಿ ಏಕದಿನಕ್ಕೆ ಮಾತ್ರ ಸೀಮಿತವಾಗ್ತಾರೆ ಅನ್ನೋದು ಆಪ್ತ ಮೂಲಗಳ ಮಾಹಿತಿಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ.

ಬ್ಯಾಟಿಂಗ್​​ಗೆ ಅಷ್ಟೇ ಸೀಮಿತ.. ಫೀಲ್ಡಿಂಗ್​ನಿಂದ ದೂರ.!

ಈ ಸೀಸನ್​ ಐಪಿಎಲ್​ನಲ್ಲಿ ರೋಹಿತ್​ ಶರ್ಮಾ ಬ್ಯಾಟಿಂಗ್​ಗಷ್ಟೇ ಸೀಮಿತವಾಗಿದ್ದಾರೆ. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿಯಿತ್ತಿರುವ ರೋಹಿತ್​ ಬ್ಯಾಟಿಂಗ್​​ ಮುಗಿಸಿ ಫೀಲ್ಡಿಂಗ್​ ವೇಳೆ ಡಗೌಟ್​ನಲ್ಲಿ ಕುಳಿತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಫಿಟ್​ನೆಸ್​​​. ಮೈದಾನದಲ್ಲಿ ಚುರುಕಿನ ಫೀಲ್ಡಿಂಗ್​ ಮಾಡಲ್ಲ ಅನ್ನೋ ಕಾರಣಕ್ಕಾಗಿ ಮ್ಯಾನೇಜ್​ಮೆಂಟ್​ ರೋಹಿತ್​​ನ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಳಸಿಕೊಂಡಿತ್ತು. ಹೀಗಾಗಿ ಐಪಿಎಲ್ ಮರು ಆಯೋಜನೆ ಬಳಿಕ ಐಪಿಎಲ್​ನಿಂದ ದೂರ ಸರಿದರು ಅಚ್ಚರಿ ಇಲ್ಲ ಎನ್ನಲಾಗ್ತಿದೆ.

ಆಡೋ ಮನಸ್ಸಿದೆ.. ದೇಹ ಸ್ಪಂದಿಸಬೇಕಲ್ಲ.!

ರೋಹಿತ್​ ಶರ್ಮಾಗೆ ಸುದೀರ್ಘ ಕಾಲ ಐಪಿಎಲ್​ ಆಡೋ ಮನಸ್ಸಿದೆ. ಆದ್ರೆ ದೇಹ ಸ್ಪಂದಿಸಬೇಕಲ್ವಾ.? ಈಗಾಗಲೇ ರೋಹಿತ್​ ಶರ್ಮಾ ವಯಸ್ಸು 38ರ ಗಡಿ ದಾಟಿದೆ. ಮುಂದಿನ ಐಪಿಎಲ್​ ವೇಳೆ 39ರ ಗಡಿ ದಾಟಲಿದೆ. ಫಿಟ್​ನೆಸ್​ ಸಮಸ್ಯೆ ಈಗಾಗಲೇ ರೋಹಿತ್​ ಶರ್ಮಾ ಕಾಡ್ತಿದೆ. ಸುದೀರ್ಘ 3 ತಿಂಗಳ ಕಾಲ ಬ್ಯಾಕ್​ ಟು ಬ್ಯಾಕ್​ ಪಂದ್ಯಗಳನ್ನಾಡೋದು ರೋಹಿತ್​ಗೆ ಸವಾಲಾಗಲಿದೆ.

ಇನ್​​ಕನ್ಸಿಸ್ಟೆಂಟ್​ ಆಟ.. ಟೀಕೆಗಳ ಸುರಿಮಳೆ.!

ರೋಹಿತ್​ ಶರ್ಮಾ. ಐಪಿಎಲ್​​ನಲ್ಲಿ ಇನ್​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಸತತ ಫ್ಲಾಪ್​ ಶೋ ನೀಡಿದ್ದ ರೋಹಿತ್​ ಶರ್ಮಾ ಬಳಿಕ 3 ಹಾಫ್​ ಸೆಂಚುರಿ ಇನ್ನಿಂಗ್ಸ್​ ಕಟ್ಟಿದ್ರು. ಮತ್ತೆ ಗುಜರಾತ್​ ಎದುರು ಫ್ಲಾಪ್​ ಆಗಿದ್ದರು. ರೋಹಿತ್​ ಶರ್ಮಾರ ಈ ಇನ್​ಕನ್ಸಿಸ್ಟೆಂಟ್​ ಪ್ರದರ್ಶನಕ್ಕೆ ಟೀಕೆಗಳು ವ್ಯಕ್ತವಾಗಿತ್ತು. ಕನ್ಸಿಸ್ಟೆಂಟ್​ ಆಟವಾಡುವಲ್ಲಿ ಯಡವುತ್ತಿರೋ ರೋಹಿತ್​, ಐಪಿಎಲ್​ನಿಂದ ದೂರ ಉಳಿಯೋ ಸಾಧ್ಯತೆಯಿದೆ.

ಇದನ್ನೂ ಓದಿ: IPL ಫೈನಲ್​ ಮ್ಯಾಚ್ ಕೋಲ್ಕತ್ತಾದಲ್ಲಿ ನಡೆಯೋದು ಡೌಟ್​.. ಕಾರಣ ಏನು ಗೊತ್ತಾ?

publive-image

ಸ್ವಾಭಿಮಾನದ ನಿರ್ಧಾರ ತೆಗೆದುಕೊಳ್ತಾರಾ.?

ರೋಹಿತ್​ ಶರ್ಮಾ ಎಂತಾ ಸ್ವಾಭಿಮಾನಿ ಅನ್ನೋದಕ್ಕೆ ಟೆಸ್ಟ್​ ರಿಟೈರ್​ಮೆಂಟ್​ಗಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಮುಂಬರೋ ಇಂಗ್ಲೆಂಡ್​ ಟೂರ್​​ಗೂ ಮುನ್ನ ರೋಹಿತ್​ರನ್ನ ನಾಯಕತ್ವದಿಂದ ಕೆಳಗಿಳಿಸಲಾಗುತ್ತೆ ಎಂಬ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಟೆಸ್ಟ್​ ಕ್ರಿಕೆಟ್​​ಗೇ ರಿಟೈರ್​​ಮೆಂಟ್​ ಘೋಷಿಸಿದ್ದಾರೆ. ಐಪಿಎಲ್​ ವಿಚಾರದಲ್ಲೂ ಇದೇ ನಿಲುವು ತಾಳೋ ಸಾಧ್ಯತೆಯಿದೆ. ಯಾಕಂದ್ರೆ, ಆಟಗಾರನಿಂದ ತಂಡಕ್ಕೆ ಹೆಚ್ಚು ಸಹಾಯವಾಗ್ತಿಲ್ಲ ಅಂದ್ರೆ ಮುಂಬೈ ಫ್ರಾಂಚೈಸಿ ಆತನಿಗೆ ಗೇಟ್​ ಪಾಸ್​ ನೀಡೋಕೆ ಹಿಂದೆ ಮುಂದೆ ನೋಡಲ್ಲ. ನಾಯಕತ್ವದ ವಿಚಾರದಲ್ಲೂ ಹೇಳದೆ ಕೇಳದೆ ಕೆಳಗಿಳಿಸಿತ್ತು. ಇದೀಗ ಪರ್ಫಾಮೆನ್ಸ್​ ಡಲ್​ ಆಗಿರೋದ್ರಿಂದ ಆಟಗಾರನ ಸ್ಥಾನಕ್ಕೂ ಕುತ್ತು ಬಂದಿದೆ.

ಈ ಎಲ್ಲಾ ಕಾರಣಗಳಿಂದ ಟೆಸ್ಟ್​ ಹಾಗೂ ಇಂಟರ್​ನ್ಯಾಷನಲ್​​ ಟಿ20 ಬಳಿಕ ಐಪಿಎಲ್​ನಿಂದಲೂ ರೋಹಿತ್​ ದೂರ ಉಳಿಯೋ ಸಾಧ್ಯತೆ ಇದೆ. ಇದೆಲ್ಲವೂ​ ಐಪಿಎಲ್ ಮರು ಆಯೋಜನೆಗೊಂಡು, ಅಂತ್ಯವಾದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment