/newsfirstlive-kannada/media/post_attachments/wp-content/uploads/2025/01/SEEMA-HAIDER.jpg)
ಸೀಮಾ ಹೈದರ್, ಈ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ನಾಲ್ಕು ಮಕ್ಕಳನ್ನು ಕರೆದುಕೊಂಡು ತನ್ನ ಪ್ರಿಯತಮನ್ನು ಸೇರಲು ಬಂದು ದೊಡ್ಡ ಸುದ್ದಿಯಾಗಿದ್ದ ಮಹಿಳೆ. ನೇಪಾಳದ ಮೂಲಕ ಭಾರತಕ್ಕೆ ಪಬ್ಜಿಯಲ್ಲಿ ಪರಿಚಯವಾದ ಸಚಿನ್ ಎಂಬ ವ್ಯಕ್ತಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದು ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗಿದ್ದಳು. ಸದ್ಯ ಸೀಮಾ ಹೈದರ್ ತನ್ನ ಐದನೇ ಮಗುವಿಗೆ ಸದ್ಯದಲ್ಲಿಯೇ ಜನ್ಮ ನೀಡಲಿದ್ದಾಳೆ. ತನ್ನ ಐದನೇ ಹಾಗೂ ಸಚಿನ್​ನ​ ಮೊದಲನೇ ಮಗುವಿನ ಸದ್ಯದಲ್ಲಿಯೇ ಜನ್ಮ ನೀಡಲಿರುವ ಸೀಮಾ ಈಗ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾಳೆ.
ಕಾರಣ ಆ ಮಗುವಿಗೆ ಕಾನೂನು ಪ್ರಕಾರವಾಗಿ ಭಾರತೀಯ ಪೌರತ್ವ ಸಿಗುತ್ತಾ ಅನ್ನೋ ಚರ್ಚೆ ಭಾರೀ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸೀಮಾ ಹೈದರ್ ಹಿಂದೂವಾಗಿ ಮತಾಂತರಗೊಂಡಿದ್ದಾರೆ. ನಾವು ನೇಪಾಳದ ಪುಷ್ಪಪತಿನಾಥ್ ದೇವಾಲಯದಲ್ಲಿ ಮದುವೆಯಾಗಿದ್ದೇವೆ ಎಂದು ಹೇಳಿದ್ದು. ಸದ್ಯ ಸೀಮಾ ಹಾಗೂ ಸಚಿನ್​ ಒಟ್ಟಿಗೆ ಗ್ರೇಟರ್ ನೊಯ್ಡಾದಲ್ಲಿ ವಾಸ ಮಾಡುತ್ತಿದ್ದಾರೆ. ಸಚಿನ್ ಸೀಮಾ ಹಾಗೂ ಆಕೆಯ ಮೊದಲ ಪತಿಯೊಂದಿಗಿದ್ದಾಗ ಆದ ನಾಲ್ಕು ಮಕ್ಕಳು ಜೊತೆಗೆ ಇದ್ದಾರೆ. ಸದ್ಯ ಸೀಮಾ ಮತ್ತೆ ಗರ್ಭಿಣಿಯಾಗಿದ್ದು ಇನ್ನೂ ಹುಟ್ಟದ ಆ ಮಗು ಪೌರತ್ವದ ವಿಚಾರವಾಗಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
/newsfirstlive-kannada/media/post_attachments/wp-content/uploads/2025/01/SEEMA-HAIDER-1.jpg)
ಇದನ್ನೂ ಓದಿ:5 ವರ್ಷದ ಬಳಿಕ ಚೀನಾದಿಂದ ಮತ್ತೆ ವೈರಸ್ ಪಿಶಾಚಿ ಭಯ; ಏನಿದರ ಅಸಲಿಯತ್ತು?
ಪೌರತ್ವದ ವಿಷಯ ಕಾನೂನು ವ್ಯಾಪ್ತಿಯಲ್ಲಿ ಬರುತ್ತದೆ. ಅದರಲ್ಲೂ ಸೀಮಾ ಭಾರತಕ್ಕೆ ಪ್ರವೇಶ ಪಡೆದಿರುವ ರೀತಿಯ ಮೇಲೆ ಪೌರತ್ವ ನೀಡುವ ಮಾನದಂಡಗಳ ಒಳಗೆ ಬರುತ್ತದೆ. ಸೀಮಾ ಹೆಚ್ಚು ಕಡಿಮೆ ಭಾರತಕ್ಕೆ ಕಾನೂನುಬಾಹಿರವಾಗಿ ಪ್ರವೇಶ ಪಡೆದಿದ್ದಾಳೆ ನೇಪಾಳದಲ್ಲಿ ಆಕೆಯನ್ನು ಅರೆಸ್ಟ್ ಮಾಡಿದ್ದರು ಕೂಡ ಕೊನೆಗೆ ಬೇಲ್ ಮೇಲೆ ಆಚೆ ಬಂದು ಭಾರತಕ್ಕೆ ಪ್ರವೇಶ ಪಡೆದಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಮುಖವಾಗಿ ಆಕೆಯ ಮಗು ಭವಿಷ್ಯದಲ್ಲಿ ಪೌರತ್ವ ಪಡೆಯುತ್ತದೆಯಾ ಅನ್ನೋ ಅನುಮಾನಗಳು ಇವೆ.
ಇದನ್ನೂ ಓದಿ:2025ರಲ್ಲಿ ಟೇಕ್ ಆಫ್ ಆಗಿ 2024ರಲ್ಲಿ ಲ್ಯಾಂಡ್ ಆದ ವಿಮಾನ.. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ!
/newsfirstlive-kannada/media/post_attachments/wp-content/uploads/2025/01/SEEMA-HAIDER-2.jpg)
ಪೌರತ್ವ ಕಾಯ್ದೆ 1955ರ ಪ್ರಕಾರ ಕನಿಷ್ಠ ಒಬ್ಬ ಪೋಷಕ ಮಗು ಹುಟ್ಟಿದಾಗ ಭಾರತೀಯ ಪೌರತ್ವ ಪಡೆದವರು ಆಗಿರಬೇಕು. ಮಗುವಿನ ಪೋಷಕರ ಮದುವೆ ಕಡ್ಡಾಯವಾಗಿ ಅಧಿಕೃತವಾಗಿರಬೇಕು. ಪೋಷಕರು ಭಾರತಕ್ಕೆ ಸರಿಯಾದ ವೀಸಾ ಪಡೆಯುವುದರ ಮೂಲಕ ಪ್ರವೇಶ ಪಡೆದಿರಬೇಕು ಎಂಬ ನಿಯಮಗಳಿವೆ. ಇದರಲ್ಲಿ ಒಂದು ನಿಯಮ ಆ ಮಗುವಿಗೆ ಪೌರತ್ವ ಪಡೆಯಲು ಅರ್ಹತೆಯನ್ನು ನೀಡುತ್ತಿದ್ದರೆ ಇನ್ನು ಉಳಿದ ಎರಡು ನಿಯಮಗಳು ಸೀಮಾ ಮಗುವಿಗೆ ಪೌರತ್ವ ಸಿಗುವುದು ಡೌಟು ಎಂದು ಬಿಂಬಿಸುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us