newsfirstkannada.com

ಆತಂಕಕ್ಕೆ ತಳ್ಳಿದ ಪಂಜಾಬ್​ ಪುತ್ತರ್​ ಫ್ಲಾಪ್ ಶೋ! ಇಂಗ್ಲೆಂಡ್​ ವಿರುದ್ಧ ಶೂರತ್ವ ಪ್ರದರ್ಶಿಸ್ತಾರಾ ಶುಭ್​​​ಮನ್​​​​ ಗಿಲ್?

Share :

Published January 23, 2024 at 12:42pm

  ರೆಡ್​​ಬಾಲ್​​ನಲ್ಲಿ ಗಿಲ್ ಅಸಲಿ ಖದರ್​ ಮಾಯ

  ಕಳಚುತ್ತಾ ಪೂಜಾರ ಉತ್ತರಾಧಿಕಾರಿ ಪಟ್ಟ..?

  ಶುಭ್​​​ಮನ್ ಗಿಲ್ ವೈಫಲ್ಯಕ್ಕೆ ಟೀಕೆಗಳ ಸುರಿಮಳೆ

ತವರಿನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಜಯದ ನಾಗಲೋಟ ಮುಂದುವರಿಸುವ ಕನಸು ಕಾಣ್ತಿದೆ. ಆದರೆ, ಯುವ ಬ್ಯಾಟ್ಸ್​​ಮನ್​ ಶುಭ್​ಮನ್​​​ ಗಿಲ್​​ ಬ್ಯಾಡ್​ಫಾರ್ಮ್ ಆತಂಕ ಹೆಚ್ಚಿಸಿದೆ. ಇಂಗ್ಲೆಂಡ್​ ಸಿರೀಸ್​​​​​​​​​​ ಪಂಜಾಬ್​ ಪುತ್ತರ್​​ಗೆ ಅಗ್ನಿಪರೀಕ್ಷೆಯ ಕಣವಾಗಿದ್ದು, ಫೇಲ್ಯೂರ್​ ಮೆಟ್ಟಿ ನಿಲ್ಲಲೇಬೇಕಿದೆ.

ಅಂತರಾಷ್ಟ್ರೀಯ ಕ್ರಿಕೆಟ್​ ಟು ಫ್ರಾಂಚೈಸಿ ಕ್ರಿಕೆಟ್​​. ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಶುಭ್​​​ಮನ್​​​​ ಗಿಲ್​​​​​ ಕಳೆದ ವರ್ಷ ನೆಕ್ಸ್ಟ್​​ ಲೆವೆಲ್​ ಪರ್ಫಾಮೆನ್ಸ್​​​​ ನೀಡಿದ್ರು. ಏಕದಿನದಲ್ಲಿ 1584 ರನ್ ಚಚ್ಚಿ 200 ರನ್​​ಗಳಿಂದ ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದ್ರು. ಜೊತೆಗೆ 2023ರ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ಟನ್ ವಿನ್ನರ್ ಆಗಿದ್ರು. ವೈಟ್​​​ಬಾಲ್​​​ನಲ್ಲಿ ಫೆಂಟಾಸ್ಟಿಕ್​​​​​ ಆಟವಾಡ್ತಿರೋ ಗಿಲ್​​​​, ರೆಡ್​ಬಾಲ್ ಕ್ರಿಕೆಟ್​ನಲ್ಲಿ ಇದಕ್ಕೆ ತದ್ವಿರುದ್ಧ ಪ್ರದರ್ಶನ ನೀಡ್ತಿದ್ದಾರೆ.

ಇಂಗ್ಲೆಂಡ್​ ವಿರುದ್ಧ ರನ್ ಶೂರತ್ವ ಪ್ರದರ್ಶಿಸ್ತಾರಾ..?

ಒನ್ಡೆ-ಟಿ20 ಕ್ರಿಕೆಟ್​ನಲ್ಲಿ ರನ್ ಹೊಳೆ ಹರಿಸ್ತಿರೋ ಗಿಲ್​ ಟೆಸ್ಟ್​​ ಕ್ರಿಕೆಟ್​​ನಲ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. ಸಿಕ್ಸರ್​​​-ಬೌಂಡ್ರಿ ಸಿಡಿಸಿ ಎದುರಾಳಿ ಮೇಲೆ ದಂಡೆತ್ತಿ ಹೋಗಬೇಕಿದ್ದ ಗಿಲ್​​ ತಲೆತಗ್ಗಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕ್ತಿದ್ದಾರೆ. ಯಂಗ್​​​ಟೈಗರ್​​ ಫ್ಲಾಪ್ ಶೋ ಸದ್ಯ ಟೀಮ್ ಇಂಡಿಯಾವನ್ನ ಆತಂಕಕ್ಕೆ ತಳ್ಳಿದೆ.

ಶುಭ್​​ಮನ್​ ಗಿಲ್​

ಕಳೆದ 10 ಇನ್ನಿಂಗ್ಸ್​ಗಳಲ್ಲಿ ಗಿಲ್​​ 
ರನ್​ – 258
ಸರಾಸರಿ – 28.66
100/50 – 01/00

ಶುಭ್​​ಮನ್ ಗಿಲ್​ ಕಳೆದ 10 ಟೆಸ್ಟ್​ ಇನ್ನಿಂಗ್ಸ್​​ಗಳಲ್ಲಿ ಅಟ್ಟರ್​ ಫ್ಲಾಪ್ ಶೋ ನೀಡಿದ್ದು, 25.66ರ ಎವರೇಜ್​ನಲ್ಲಿ ಬರೀ 258 ರನ್ ಬಾರಿಸಿದ್ದಾರೆ. ಒಂದು ಶತಕವನ್ನಷ್ಟೆ ಹೊಡೆದಿದ್ದಾರೆ.

ಆಫ್ರಿಕಾ-ವಿಂಡೀಸ್ ವಿರುದ್ಧ ಫ್ಲಾಪ್ ಶೋ

ಭರವಸೆ ಮೂಡಿಸಿದ್ದ ಶುಭ್​​ಮನ್​ ಗಿಲ್​​​ ಕಳೆದ ವೆಸ್ಟ್​ಇಂಡೀಪ್​ ಪ್ರವಾಸದಲ್ಲಿ ಮುಗ್ಗರಿಸಿದ್ರು. 3 ಇನ್ನಿಂಗ್ಸ್​ಗಳಿಂದ 45 ರನ್​ ಕಲೆಹಾಕಿದ್ರೆ, ಆಫ್ರಿಕಾ ಪ್ರವಾಸದಲ್ಲಿ 4 ಇನ್ನಿಂಗ್ಸ್​ಗಳಿಂದ ಜಸ್ಟ್​ 74 ರನ್ ಸಿಡಿಸಿ ಟೀಮ್ ಮ್ಯಾನೇಜ್​​ಮೆಂಟ್ ಕೆಂಗಣ್ಣಿಗೆ ಗುರಿಯಾದ್ರು.

ಕೊಟ್ಟ ಕುದುರೆ ಏರಲಾರದ ಪಂಜಾಬ್​ ಪುತ್ತರ್​​.!

ಚೇತೇಶ್ವರ್​ ಪೂಜಾರ ನಿರ್ಗಮನದ ಬಳಿಕ ಅವರ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋ ದೊಡ್ಡ ಪ್ರಶ್ನೆ ಎದ್ದಿತ್ತು. ಆಗ ಗಿಲ್ ಮೇಲೆ ನಂಬಿಕೆ ಇಟ್ಟು ಮ್ಯಾನೇಜ್​ಮೆಂಟ್​ 3ನೇ ಸ್ಥಾನದಲ್ಲಿ ಆಡುವ ಚಾನ್ಸ್​ ನೀಡ್ತು. ಕಳಪೆ ಆಟವಾಡಿ ಕೊಟ್ಟ ಕುದುರೆ ಏರಲಾರದವ ಶೂರನು, ಅಲ್ಲ ಧೀರನು ಅಲ್ಲ ಅನ್ನೋ ಪರಿಸ್ಥಿತಿ ತಂದುಕೊಂಡಿದ್ದಾರೆ.

3ನೇ ಕ್ರಮಾಂಕದಲ್ಲಿ ಗಿಲ್​​ 
ಪಂದ್ಯ – 05
ರನ್​ – 166
ಸರಾಸರಿ​ – 23.71
100-50 – 00/00

ಗಿಲ್​ 5 ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಾರೆ. ಆ ಪೈಕಿ 23.71 ರ ಎವರೇಜ್​ನಲ್ಲಿ 166 ರನ್​​ ಗಳಿಸಿದ್ದು, ಸೆಂಚುರಿ ಹಾಗೂ ಹಾಫ್​​ಸೆಂಚುರಿ ರಹಿತ ಆಟವಾಡಿದ್ದಾರೆ.

ಶುಭ್​​ಮನ್​ ಗಿಲ್​

ಇಂಗ್ಲೆಂಡ್​ ವಿರುದ್ಧ ಫಾರ್ಮ್​ ಕಂಡುಕೊಳ್ತಾರಾ ‘ಪ್ರಿನ್ಸ್​​’..?

ಸದ್ಯ ಗಿಲ್​ರ ಬ್ಯಾಡ್​ಫಾರ್ಮ್​ ಕ್ಯಾಪ್ಟನ್​​ ರೋಹಿತ್​ ಶರ್ಮಾ ಹಾಗೂ ಹೆಡ್​ಕೋಚ್​​​ ರಾಹುಲ್​​​ ದ್ರಾವಿಡ್​ರ ಕಣ್ಣು ಕೆಂಪಾಗಿಸಿದೆ. ಗುರುವಾರದಿಂದ ಭಾರತ-ಇಂಗ್ಲೆಂಡ್ ನಡ್ವೆ ಟೆಸ್ಟ್​​​​ ಸರಣಿ ಆರಂಭಗೊಳ್ಳಲಿದೆ. ರನ್ ಬರ ಎದುರಿಸ್ತಿರೋ ಗಿಲ್​ಗೆ ಇದು ಅಗ್ನಿಪರೀಕ್ಷೆಯ ಕಣ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಬ್ಯಾಕ್ ವಿತ್ ಬ್ಯಾಂಗ್ ಮಾಡಬೇಕಿದೆ. ಇಲ್ಲವಾದಲ್ಲಿ ಬೆಂಚ್​ ಕಾಯುವ ದಿನಗಳು ದೂರವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆತಂಕಕ್ಕೆ ತಳ್ಳಿದ ಪಂಜಾಬ್​ ಪುತ್ತರ್​ ಫ್ಲಾಪ್ ಶೋ! ಇಂಗ್ಲೆಂಡ್​ ವಿರುದ್ಧ ಶೂರತ್ವ ಪ್ರದರ್ಶಿಸ್ತಾರಾ ಶುಭ್​​​ಮನ್​​​​ ಗಿಲ್?

https://newsfirstlive.com/wp-content/uploads/2023/06/Shubhman-Gill.jpg

Load More