newsfirstkannada.com

ಲೋಕಸಭಾ ಚುನಾವಣೆಗೆ ಸಾನಿಯಾ ಮಿರ್ಜಾ ಸ್ಪರ್ಧಿಸ್ತಾರಾ? ಯಾವ ಪಕ್ಷ? ಎದುರಾಳಿ ಯಾರು?

Share :

Published March 27, 2024 at 8:40pm

  ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಆಫರ್!

  AIMIM ಪಕ್ಷದ ಅಸಾದುದ್ದೀನ್ ಓವೈಸಿ ದಾಖಲೆ ಬ್ರೇಕ್ ಮಾಡಲು ಪ್ಲಾನ್

  ಸಾನಿಯಾ ಮಿರ್ಜಾಗೆ ಟಿಕೆಟ್ ಕೊಡಿಸಲು ಮೊಹಮ್ಮದ್ ಅಜರುದ್ದೀನ್ ಬ್ಯಾಟಿಂಗ್

ಹೈದರಾಬಾದ್‌: ಲೋಕಸಭಾ ಚುನಾವಣೆಯಲ್ಲಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಅನ್ನೋ ವರದಿಯಾಗಿದೆ. ತೆಲಂಗಾಣದ ಬಹಳ ಪ್ರಮುಖ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಆಫರ್‌ ನೀಡಲಾಗಿದೆ. ಸಾನಿಯಾ ಮಿರ್ಜಾ ಅವರು ನಿರ್ಧಾರ ಅಧಿಕೃತವಾಗಿ ಘೋಷಣೆಯಾಗುವ ಸುಳಿವು ಸಹ ಸಿಕ್ಕಿದೆ.

ಸಾನಿಯಾ ಮಿರ್ಜಾ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಆಫರ್ ನೀಡಿದ್ಯಂತೆ. ಒಂದು ವೇಳೆ ಕಾಂಗ್ರೆಸ್ ನಿರ್ಧಾರವನ್ನ ಒಪ್ಪಿಕೊಂಡ್ರೆ ಸಾನಿಯಾ ಮಿರ್ಜಾ ಅವರು ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಶುರುವಾಗಿದೆ.

ಹೈದರಾಬಾದ್‌ ಲೋಕಸಭಾ ಕ್ಷೇತ್ರ AIMIM ಪಕ್ಷದ ಅಸಾದುದ್ದೀನ್ ಓವೈಸಿ ಅವರ ಭದ್ರಕೋಟೆ. 2004ರಿಂದ ಸಂಸದ ಅಸಾದುದ್ದೀನ್ ಓವೈಸಿ ಅವರು ಹೈದರಾಬಾದ್‌ನಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ. ಅಸಾದುದ್ದೀನ್ ಓವೈಸಿ ಅವರಿಗೂ ಮುಂಚೆ ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ಅವರು 6 ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಅಸಾದುದ್ದೀನ್ ಓವೈಸಿ ವಿರುದ್ಧ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸೋ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ.

ಇದನ್ನೂ ಓದಿ: ಮುಸ್ಲಿಂ ಭದ್ರಕೋಟೆಯಲ್ಲಿ 4 ಬಾರಿ ಗೆದ್ದ ಓವೈಸಿ ವಿರುದ್ಧ ಬಿಜೆಪಿ ಹಿಂದುತ್ವ ಪ್ರಯೋಗ; ಯಾರು ಈ ಮಾಧವಿ?

ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಹೈದರಾಬಾದ್‌ನಿಂದ ಸಾನಿಯಾ ಅವರನ್ನು ಅಭ್ಯರ್ಥಿಯನ್ನಾಗಿಸುವ ಪ್ರಸ್ತಾಪ ಮಾಡಿದ್ದಾರೆ. ಸಾನಿಯಾ ಮಿರ್ಜಾ ಅವರಿಗೆ ಹೈದರಾಬಾದ್‌ ರಾಜಕೀಯ ಇತಿಹಾಸದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಸಾಮರ್ಥ್ಯವಿದೆ. ಹೀಗಾಗಿ ಸಾನಿಯಾ ಮಿರ್ಜಾ ಅವರನ್ನೇ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ. ಸಾನಿಯಾ ಮಿರ್ಜಾ ಅವರ ಎಂಟ್ರಿಯಿಂದ ಹೈದರಾಬಾದ್ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.

ಸಾನಿಯಾ ಮಿರ್ಜಾ ಅವರು ಈ ಹಿಂದಿನ ಸರ್ಕಾರದಲ್ಲಿ ಹೈದರಾಬಾದ್‌ ನಗರಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಅವರಿಗಿರುವ ಪ್ರಸಿದ್ಧಿ ಮತ್ತು ಸೆಲೆಬ್ರಿಟಿ ಆಗಿರುವುದು ಲೋಕಸಭಾ ಚುನಾವಣೆಯಲ್ಲಿ ಸಹಕಾರಿಯಾಗಲಿದೆ. ಹೀಗಾಗಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಹೈದರಾಬಾದ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ಅವರು ಸತತ 5ನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಓವೈಸಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಾನಿಯಾ ಮಿರ್ಜಾ ಅವರನ್ನೇ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಗೆ ಸಾನಿಯಾ ಮಿರ್ಜಾ ಸ್ಪರ್ಧಿಸ್ತಾರಾ? ಯಾವ ಪಕ್ಷ? ಎದುರಾಳಿ ಯಾರು?

https://newsfirstlive.com/wp-content/uploads/2024/03/Sania-Mirza-Owisi.jpg

Load More