ನಾಳೆ RCB ಅನ್​ಬಾಕ್ಸ್​ ಇವೆಂಟ್​; ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿವೆ.. ಕಿಂಗ್ ಕೊಹ್ಲಿ ಬೆಂಗಳೂರಿಗೆ ಬಂದ್ರಾ?

author-image
Bheemappa
Updated On
ನಾಳೆ RCB ಅನ್​ಬಾಕ್ಸ್​ ಇವೆಂಟ್​; ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿವೆ.. ಕಿಂಗ್ ಕೊಹ್ಲಿ ಬೆಂಗಳೂರಿಗೆ ಬಂದ್ರಾ?
Advertisment
  • ಅನ್​ಬಾಕ್ಸ್​ ಇವೆಂಟ್​ನಲ್ಲಿ ಕನ್ನಡದ ಯುವ ಗಾಯಕ ಕೂಡ ಭಾಗಿ
  • ಕಾರ್ಯಕ್ರಮದ ವಿಶೇಷತೆಗಳೇನು, ವಿರಾಟ್ ಬರುತ್ತಾರಾ, ಇಲ್ವಾ?
  • ಹೊಸ ಕ್ಯಾಪ್ಟನ್​ನೊಂದಿಗೆ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಆರ್​ಸಿಬಿ

2025ರ ಐಪಿಎಲ್​ಗೆ ಬಲಿಷ್ಠ ಟೀಮ್ ಕಟ್ಟಿಕೊಂಡು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್ ಅಖಾಡಕ್ಕೆ ಧುಮುಕುತ್ತಿದೆ. ತಂಡದಲ್ಲಿ ನಾಯಕ ಸೇರಿದಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. 18ನೇ ವರ್ಷದ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ಮೈದಾನಕ್ಕೆ ಇಳಿಯುತ್ತಿದೆ. ಈ ಎಲ್ಲದರ ನಡುವೆ ಆರ್​ಸಿಬಿ ಅನ್​ಬಾಕ್ಸ್​ ಇವೆಂಟ್ ಸಿದ್ಧತೆ ಜೋರಾಗಿದ್ದು ವಿರಾಟ್ ಕೊಹ್ಲಿ ಸಿಲಿಕಾನ್​ ಸಿಟಿಗೆ ಈಗಾಗಲೇ ಬಂದಿದ್ದಾರೆ.

ಆರ್​ಸಿಬಿ ಅನ್​ಬಾಕ್ಸ್​ ಇವೆಂಟ್ ಎಂದರೆ ಇಡೀ ಐಪಿಎಲ್​ನಲ್ಲೇ ಒಂದು ವಿಶೇಷವಾದ ಕಾರ್ಯಕ್ರಮ. ಯಾವ ತಂಡಕ್ಕೂ ಇರದ ಅಭಿಮಾನಿಗಳು ಬೆಂಗಳೂರು ಟೀಮ್​ಗೆ ಇದ್ದು ಅನ್​ಬಾಕ್ಸ್​ ಇವೆಂಟ್​ನಲ್ಲಿ ವಿಶೇಷ ಘೋಷಣೆ, ಜೆರ್ಸಿ ಬಿಡುಗಡೆ ಜೊತೆಗೆ ಈ ಸಲ ಹೊಸ ಕ್ಯಾಪ್ಟನ್​ ಅನ್ನು ಪರಿಚಯ ಇರಲಿದ್ದು ಅಭಿಮಾನಿಗಳನ್ನು ರಂಜಿಸಲಾಗುತ್ತದೆ. ಆರ್​ಸಿಬಿ ಅನ್​​ಬಾಕ್ಸ್ ಇವೆಂಟ್​ ಮಾರ್ಚ್​ 17 ರಂದು ಅಂದರೆ ನಾಳೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದರ ಜೊತೆಗೆ ರಾಯಲ್ ಚಾಲೆಂಜರ್ಸ್​ ಸ್ಟಾರ್ ಕ್ರಿಕೆಟರ್​ ವಿರಾಟ್​ ಕೊಹ್ಲಿ ಬೆಂಗಳೂರಿಗೆ ಬಂದಿದ್ದಾರೆ. ನ್ಯೂ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಕಾರ್ಯಕ್ರಮ ಒಂದಕ್ಕೆ ಹಾಜರಾಗಿ ಸಂದರ್ಶನ ಕೂಡ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಿದ್ದಾರೆ ಎಂದರೆ ಅಭಿಮಾನಿಗಳ ಉತ್ಸಾಹ ಇನ್ನಷ್ಟು ಇಮ್ಮಡಿಯಾಗಲಿದೆ. ಅನ್​ಬಾಕ್ಸ್​ ಇವೆಂಟ್ ಬಳಿಕ ವಿರಾಟ್ ಸೇರಿದಂತೆ ಎಲ್ಲ ಆಟಗಾರರು ಅಧಿಕೃತವಾಗಿ ಅಭ್ಯಾಸ ಮಾಡಲಿದ್ದಾರೆ.

ಇದನ್ನೂ ಓದಿ:ಫೈನಲ್​ನಲ್ಲಿ ಹ್ಯಾಟ್ರಿಕ್ ಸೋಲು​.. ಮುಂಬೈ ಬೌಲಿಂಗ್ ಪರಾಕ್ರಮ, ಟ್ರೋಫಿ ಕೈ ಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್ ​

publive-image

ಅನ್​ಬಾಕ್ಸ್​ ಕಾರ್ಯಕ್ರಮದ ಟಿಕೆಟ್‌ಗಳೆಲ್ಲಾ ಮಾರ್ಚ್ 6 ರಿಂದ ನೀಡಲಾಗುತ್ತಿತ್ತು. ಆದರೆ ಟಿಕೆಟ್ ಕೌಂಟರ್ ಓಪನ್ ಮಾಡಿದ ಒಂದು ಗಂಟೆ ಒಳಗೆ ಎಲ್ಲ ಸೋಲ್ಡ್ ಔಟ್ ಆಗಿವೆ. ನಾಳೆ ಇವೆಂಟ್ 3:30ಕ್ಕೆ ಪ್ರಾರಂಭವಾಗಲಿದ್ದು ಡಿಜೆ ಮ್ಯಾಗ್, ಟಿಮ್ಮಿ ಟ್ರಂಪೆಟ್ ಸ್ಟಾರ್ ಆಕರ್ಷಣೆ ಆಗಲಿದ್ದಾರೆ. ಸ್ಯಾಂಡಲ್​ವುಡ್​ನ ಸ್ಟಾರ್ ಸಿಂಗರ್ ಆದ ಜನಪ್ರಿಯ ಗಾಯಕ ಸಂಜಿತ್ ಹೆಗ್ಡೆ, ಐಶ್ವರ್ಯಾ ರಂಗರಾಜನ್ ಅವರ ಸುಮಧುರ ಧ್ವನಿ ಕೂಡ ಅಭಿಮಾನಿಗಳು ಲೈವ್​ನಲ್ಲಿ ಕೇಳಬಹುದು.

ಆರ್​ಸಿಬಿಯ ಮೊದಲ ಮ್ಯಾಚ್ ಮಾರ್ಚ್​ 22 ರಂದು ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಆಡಲಿದೆ. ಆರ್​ಸಿಬಿ ಹೊಸ ತಂಡ, ಹೊಸ ಕ್ಯಾಪ್ಟನ್​ನೊಂದಿಗೆ ಮೊದಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಕಾದಾಟ ನಡೆಸಲಿದೆ. ಈ ಸಲ ಆದರೂ ಕಪ್​ ಆರ್​ಸಿಬಿಗೆ ಒಲಿದು ಬರಲಿ ಎಂದು ಅಭಿಮಾನಿಗಳ ದೊಡ್ಡ ಕನಸು ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment