newsfirstkannada.com

ಈ ಬಾರಿ IPLನಲ್ಲಿ ವಿರಾಟ್​ ಆಡ್ತಾರಾ.. RCB ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ!

Share :

Published March 1, 2024 at 3:38pm

Update March 1, 2024 at 3:31pm

  ಬೇಸರದಲ್ಲಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಿಕ್ಕಿದ ​ಸಿಹಿ ಸುದ್ದಿ

  ತವರಿಗೆ ಮರಳದ ವಿರಾಟ್ ಕೊಹ್ಲಿ, ಕಮ್​ಬ್ಯಾಕ್ ಚರ್ಚೆ ಬಗ್ಗೆ ಚರ್ಚೆ

  ಕಿಂಗ್​ ಕೊಹ್ಲಿಯ ಕೋಟ್ಯಾಂತರ ಅಭಿಮಾನಿಗಳಿಗೆ ಗುಡ್​ನ್ಯೂಸ್.!

ಅಸಂಖ್ಯಾ ಕ್ರಿಕೆಟ್​ ಪ್ರೇಮಿಗಳಲ್ಲಿ ಕಾಡ್ತಿರೋ ಮಿಲಿಯನ್ ಡಾಲರ್​​ ಪ್ರಶ್ನೆ ಒಂದೇ. ಅದು ಕಿಂಗ್ ಕೊಹ್ಲಿ, ಮಿಲಿಯನ್ ಡಾಲರ್ ಟೂರ್ನಿ ಆಡ್ತಾರಾ ಇಲ್ವಾ ಅನ್ನೋದು. ಆದ್ರೀಗ ಈ ಮಿಲಿಯನ್ ಡಾಲರ್ ಪಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಮಿಲಿಯನ್ ಡಾಲರ್​​​​​​​​​​​​​​​ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. ಟ್ರೋಫಿ ಗೆಲ್ಲೋ ಲೆಕ್ಕಾಚಾರದಲ್ಲಿರೋ 10 ತಂಡಗಳೂ, ತೆರೆ ಹಿಂದೆ ಮಾಸ್ಟರ್ ಪ್ಲಾನ್​​ನಲ್ಲಿ ಬ್ಯುಸಿಯಾಗಿವೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಾಯಲ್​ ಫಾನ್ಸ್​ಗೆ ಇರೋ ಪ್ರಶ್ನೆ ಮಾತ್ರ ಒಂದೇ. ಅದೇ ಐಪಿಎಲ್ ಸೀಸನ್-17ರಲ್ಲಿ ವಿರಾಟ್​ ಆಡ್ತಾರಾ, ಇಲ್ವಾ ಅನ್ನೋದು.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ವಿರಾಟ್, ಸರಣಿ ಆರಂಭಕ್ಕೂ ಮುನ್ನವೇ ಮೊದಲ 2 ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದರು. ಮೊದಲ 2 ಟೆಸ್ಟ್​ಗಳಿಗೆ ವಿರಾಟ್ ಅಲಭ್ಯರಾಗಿದ್ರು. ಮೂರನೇ ಟೆಸ್ಟ್​ನಿಂದ ಲಭ್ಯರಾಗ್ತಾರೆ ಎಂಬ ಭರವಸೆ ಕ್ರಿಕೆಟ್ ಅಭಿಮಾನಿಗಳಲ್ಲಿತ್ತು. ಆದ್ರೆ, ಯಾವಾಗ ವಿರಾಟ್​​ ಕೊಹ್ಲಿ, ಟೆಸ್ಟ್ ಸಿರೀಸ್​ನಿಂದ ಹೊರಗೆ ಉಳಿದ್ರೋ, ಸ್ವತಃ ಬಿಸಿಸಿಐ ಆ್ಯಂಡ್ ಟೀಮ್ ಮ್ಯಾನೇಜ್​ಮೆಂಟ್ ಗೊಂದಲಕ್ಕೀಡಾಗಿತ್ತು.

ಬಿಸಿಸಿಐ ಅಧಿಕಾರಿಗಳು, ವಿರಾಟ್​ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿತ್ತು. ಟೀಮ್ ಮ್ಯಾನೇಜ್​ಮೆಂಟ್, ಯಾವಾಗ ಬರ್ತಾರೋ ಅನ್ನೋ ಮಾಹಿತಿ ಇಲ್ಲ ಅಂದ್ರೋ, ಈ ಬೆನ್ನಲ್ಲೇ ಹುಟ್ಟಿಕೊಂಡ ಪ್ರಶ್ನೆಯೇ ವಿರಾಟ್, ಐಪಿಎಲ್​ನಲ್ಲಿ ಆಡ್ತಾರಾ ಇಲ್ವಾ ಅನ್ನೋದು. ಇದಕ್ಕೆಲ್ಲ ಕಾರಣ ಮಗ ಆಕಾಯ್ ಜನನ.

ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿಯದ್ದೇ ಚರ್ಚೆ

ಯಾವಾಗ ಲಂಡನ್​ನಲ್ಲಿ ವಿರುಷ್ಕಾ ದಂಪತಿ, ಅಕಾಯ್​ಗೆ ಸ್ವಾಗತಿಸಿದರೋ ಆಗ ಫ್ಯಾನ್ಸ್​ ಸಂಭ್ರಮದಲ್ಲೇ ತೇಲಾಡಿದ್ರು. ಆದ್ರೆ, ಮಗನ ಜನನವಾಗಿ 20 ದಿನಗಳು ಕಳೆದರೂ, ಯಾವಾಗ ವಿರಾಟ್​ ತವರಿಗೆ ಮರಳಿಲ್ಲವೋ ಆಗ ಹುಟ್ಟಿಕೊಂಡಿದ್ದೇ ಕೊಹ್ಲಿ​ ಕಮ್​ಬ್ಯಾಕ್ ಚರ್ಚೆ?.

ಕೆಲವರು ವಿರಾಟ್​ ಕೊಹ್ಲಿ, ಐಪಿಎಲ್ ಆಡ್ತಾರೆ ಅಂದ್ರೆ, ಕೆಲವರು ಆಡೋದೇ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ರು. ಕೊಹ್ಲಿಗೆ ಫ್ಯಾಮಿಲಿಯೇ ಮುಖ್ಯ, ಹೀಗಾಗಿ ಆಡೋದು ಅನುಮಾನ ಎಂದಿದ್ರು. ಆರ್​ಸಿಬಿ ಜೆರ್ಸಿಯಲ್ಲಿ ಕೊಹ್ಲಿಯನ್ನ ನೋಡಕ್ಕೆ ಆಗಲ್ಲ ಎಂದು ಫ್ಯಾನ್ಸ್ ಬೇಸರದಲ್ಲಿದ್ರು. ಆದ್ರೆ, ಈ ಎಲ್ಲ ಬೆಳವಣೆಗೆಗಳ ನಡುವೆ ಕೋಟ್ಯಾಂತರ ಅಭಿಮಾನಿಗಳಿಗೆ ಗುಡ್​ನ್ಯೂಸ್ ಸಿಕ್ಕಿದೆ.

ಫ್ಯಾನ್ಸ್​ಗೆ ಬದ್ಧವೈರಿ ಎದುರೇ ಕಣಕ್ಕಿಳಿಯುವ ನಿರೀಕ್ಷೆ!

ಕಳೆದೊಂದು ತಿಂಗಳಿಂದ ಲಂಡನ್​ನಲ್ಲೇ ವಾಸ್ತವ್ಯ ಹೂಡಿರುವ ವಿರಾಟ್, ಇದೇ ತಿಂಗಳು ಭಾರತಕ್ಕೆ ಆಗಮಿಸುತ್ತಾರೆ ಎನ್ನಲಾಗಿದೆ. ಆದ್ರೆ, ಕಿಂಗ್ ಕೊಹ್ಲಿ ಆಗಮನದ ದಿನಾಂಕ ಮಾತ್ರ ಅಧಿಕೃತವಾಗಿಲ್ಲ. ಹೀಗಾಗಿ ವಿರಾಟ್​, ಐಪಿಎಲ್​ನಲ್ಲಿ ಆಡ್ತಾರೆ ಅನ್ನೋದು ಫ್ಯಾನ್ಸ್​ ನಿರೀಕ್ಷೆ ಹೆಚ್ಛಾಗಿದೆ. ಮಾರ್ಚ್​ 22ರಂದು ಚೆನ್ನೈ ಎದುರಿನ ಉದ್ಘಾಟನಾ ಪಂದ್ಯದಲ್ಲೇ ವಿರಾಟ್​, ಕಣಕ್ಕಿಳಿಯಲಿ ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಮಹೋನ್ನತ ಕನಸಾಗಿದೆ.

ತವರಿನ ಎರಡು ಪಂದ್ಯ ಮಿಸ್.. ಫಲಿತಾಂಶಕ್ಕೂ ಎಫೆಕ್ಟ್

ಅಕಸ್ಮಾತ್ ವಿರಾಟ್​ ಕೊಹ್ಲಿ, ಇದೇ ತಿಂಗಳ ಅಂತ್ಯದಲ್ಲಿ ಬರುವುದಾದ್ರೆ. ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ತವರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್ ಎದುರಿನ ಪಂದ್ಯಕ್ಕೂ ಅಲಭ್ಯರಾಗೋ ಸಾಧ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಭಾರೀ ಪರಿಣಾಮವೇ ಬೀಳಲಿದೆ.

ಆರಂಭಿಕ ಪಂದ್ಯಗಳ ಫಲಿತಾಂಶಗಳ ಮೇಲೆಯು ಹೊಡೆತ ಬೀಳುವ ಸಾಧ್ಯತೆ ಇದೆ. ಇದು ಸಹಜವಾಗೇ ಆರ್​ಸಿಬಿ ತಂಡದ ಮೇಲೆ ಮತ್ತಷ್ಟು ಒತ್ತಡ ಬೀಳುವಂತೆ ಮಾಡೋದು ಗ್ಯಾರಂಟಿ. ಹೀಗಾಗಿ ಟೂರ್ನಿಯ ಪ್ರತಿ ಪಂದ್ಯಕ್ಕೂ ವಿರಾಟ್, ಇರಲಿ ಅನ್ನೋದೇ ಕೋಟ್ಯಾಂತರ ಫ್ಯಾನ್ಸ್​ ಪ್ರಾರ್ಥನೆ. ಆದ್ರೆ, ಈ ಪ್ರಾರ್ಥನೆ ಫಲಿಸುತ್ತಾ, ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಈ ಬಾರಿ IPLನಲ್ಲಿ ವಿರಾಟ್​ ಆಡ್ತಾರಾ.. RCB ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ!

https://newsfirstlive.com/wp-content/uploads/2024/03/VIRAT_KOHLI_1.jpg

Load More