newsfirstkannada.com

‘ದೇವರ ಮೇಲೆ ಆಣೆ.. ಆಗಸ್ಟ್​ 15ರ ಒಳಗೆ ₹2 ಲಕ್ಷದವರೆಗೆ ರೈತರ ಸಾಲ ಮನ್ನಾ’ -ಮುಖ್ಯಮಂತ್ರಿ

Share :

Published April 22, 2024 at 2:52pm

  ಲೋಕಸಭಾ ಚುನಾವಣೆ ಕ್ಯಾಂಪೇನ್ ವೇಳೆ ಸಿಎಂ ಘೋಷಣೆ

  ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಆಗುವುದು ಗ್ಯಾರಂಟಿನಾ?

  ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವಾಗ ಅನೌನ್ಸ್​

ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕ್ಯಾಂಪೇನ್ ಭರ್ಜರಿಯಾಗಿ ಸಾಗುತ್ತಿದೆ. ಕಾಂಗ್ರೆಸ್​, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ಘೋಷಣೆಗಳನ್ನು ಮಾಡುತ್ತಿವೆ. ಜೊತೆಗೆ ಅಭ್ಯರ್ಥಿಗಳು ಕೂಡ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಜನರಿಗೆ ಒಳ್ಳೆ, ಒಳ್ಳೆಯ ಭರವಸೆಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಲೋಕಸಭಾ ಚುನಾವಣೆ ಕ್ಯಾಂಪೇನ್​ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಆಗಸ್ಟ್​ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಕಾಂಗ್ರೆಸ್​ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಅದರಂತೆ ಯಾದಾದ್ರಿ ಭುವನಗಿರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಸಿಎಂ ರೇವಂತ್ ರೆಡ್ಡಿಯವರು ಭೋಂಗಿರಿ ನಗರದಲ್ಲಿ ರೋಡ್ ಶೋ ಮಾಡುತ್ತಿದ್ದರು. ಈ ವೇಳೆ ಸೇರಿದ್ದ ಜನರಿಗೆ ದೊಡ್ಡ ಭರವಸೆಯೊಂದನ್ನು ಸಿಎಂ ರೇವಂತ್ ರೆಡ್ಡಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ

ಇದನ್ನೂ ಓದಿ: 98 ಸಲ ಎಲೆಕ್ಷನ್​​ಗೆ ಸ್ಪರ್ಧಿಸಿದ್ರೂ ಒಂದೂ ಬಾರಿ ಗೆಲ್ಲದ ಅಂಬೇಡ್ಕರ್​.. 99ನೇ ಬಾರಿಗೆ ಬಿಗ್ ಶಾಕ್ ಕೊಟ್ಟ ಅಧಿಕಾರಿಗಳು

ಈಗ ನಮ್ಮ ರೈತರಿಗೆ ಒಂದು ಮಾತು ಕೊಡುತ್ತಿದ್ದೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಮೇಲೆ ಆಣೆ ಮಾಡಿ, ಈ ಮಾತು ಹೇಳುತ್ತಿದ್ದೇನೆ. ಆಗಸ್ಟ್​ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಸೂರ್ಯ ಉದಯಿಸಿವುದು ಬಿಟ್ರೇ, ಪ್ರಪಂಚ ತಲೆ ಕೆಳಗಾದರು, ಏನೇ ಆದ್ರೂ, ಯಾರು ಇದ್ದರೂ, ಯಾರೇ ಹೋದರೂ ಆಗಸ್ಟ್​ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ. ಇದರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಸಾಕ್ಷಿಯಾಗಿ ತೆಲಂಗಾಣದ ರೈತರಿಗೆ ಮಾತು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದೇವರ ಮೇಲೆ ಆಣೆ.. ಆಗಸ್ಟ್​ 15ರ ಒಳಗೆ ₹2 ಲಕ್ಷದವರೆಗೆ ರೈತರ ಸಾಲ ಮನ್ನಾ’ -ಮುಖ್ಯಮಂತ್ರಿ

https://newsfirstlive.com/wp-content/uploads/2024/04/CM_REVANT_REDDY.jpg

Load More