/newsfirstlive-kannada/media/post_attachments/wp-content/uploads/2025/03/BJP_WOMANS_NEW.jpg)
ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಹೊಸ ಸಾರಥಿ ಶೀಘ್ರದಲ್ಲೇ ಬರಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಕ ಬಿಜೆಪಿಯ ಟಾಪ್ ಲೀಡರ್ ಯಾರಾಗ್ತಾರೆ ಎಂಬ ಪ್ರಶ್ನೆಗೆ ಮಾರ್ಚ್ 15ರೊಳಗೆ ಉತ್ತರ ಸಿಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಹಿಂದೂಗಳ ಹೊಸ ವರ್ಷಕ್ಕೆ ಕಮಲ ಪಡೆಗೆ ಹೊಸ ಸಾರಥಿ ಬರಲಿದ್ದಾರೆ ಎನ್ನಲಾಗುತ್ತಿದೆ. ಅಚ್ಚರಿ ಆಯ್ಕೆಗೆ ಹೆಸರುವಾಸಿಯಾಗಿರುವ ಕೇಸರಿ ಬ್ರಿಗೇಡ್ ಈ ಬಾರಿ ಮಹಿಳಾ ಸಾರಥಿಗೆ ಪಟ್ಟ ಕಟ್ಟುವ ಸಾಧ್ಯತೆ ಎಂಬ ಮಾಹಿತಿ ಹರಿದಾಡತೊಡಗಿದೆ.
ಬಿಜೆಪಿ ಅತ್ಯುನ್ನತ ಸ್ಥಾನದಲ್ಲಿ ಇದುವರೆಗೂ 11 ಮಂದಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 15 ಅಥವಾ 16 ರಂದು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಇದಕ್ಕೆ ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ.
ಮುಂದಿನ ದಿನಗಳ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ದಕ್ಷಿಣ ಭಾರತದ ಕಡೆ ಬಿಜೆಪಿ ಹೆಚ್ಚು ಗಮನಹರಿಸುತ್ತಿದ್ದು, ಈ ಬಾರಿ ದಕ್ಷಿಣ ಭಾರತದ ಮಹಿಳೆಗೆ ಬಿಜೆಪಿ ಪಕ್ಷದ ಅತ್ಯುನ್ನತ ಹುದ್ದೆಯನ್ನು ನೀಡುವ ಸಾಧ್ಯತೆ ಇದೆ. ಸದ್ಯ ರೇಸ್ನಲ್ಲಿ ಇಬ್ಬರು ಮಹಿಳಾ ನಾಯಕರ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಅಥವಾ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ, ಕೊಯಮತ್ತೂರು ಶಾಸಕಿ ವನತಿ ಶ್ರೀನಿವಾಸನ್ ಅವರು ರೇಸ್‌ನಲ್ಲಿದ್ದಾರೆ
ದಗ್ಗುಬಾಟಿ ಪುರಂದೇಶ್ವರಿ
- ದಗ್ಗುಬಾಟಿ ಪುರಂದೇಶ್ವರಿ, ಸದ್ಯ ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಆಗಿದ್ದಾರೆ
- 66 ವರ್ಷ ವಯಸ್ಸಿನ ಪುರಂದೇಶ್ವರಿ 2014ರಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದರು
- ಸಂಘಟನಾ ವ್ಯವಹಾರಗಳಲ್ಲಿ ಗಮನಾರ್ಹ ಅನುಭವವನ್ನು ಹೊಂದಿದ್ದಾರೆ
- 5 ಭಾಷೆ ಕರಗತ ಮಾಡಿಕೊಂಡಿದ್ದು, ದಕ್ಷಿಣದ ಸುಷ್ಮಾ ಸ್ವರಾಜ್ ಎಂದೇ ಖ್ಯಾತಿ
ಇದನ್ನೂ ಓದಿ:ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹುಡುಗಿ ಜನ್ಮದಿನಾಂಕ ಕಡ್ಡಾಯ.. ಸರ್ಕಾರದ ಆದೇಶ! ಕಾರಣವೇನು?
ವನತಿ ಶ್ರೀನಿವಾಸನ್
- ವನತಿ ಶ್ರೀನಿವಾಸನ್, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ
- ಕೊಯಮತ್ತೂರಿನ ಶಾಸಕಿಯಾಗಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯ
- ಪಕ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿ ಆಗಿ ನಡೆಸಿದ ಕೀರ್ತಿ
- ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ವಿಶ್ವಾಸವನ್ನು ಗಳಿಸಿದ್ದಾರೆ
ಇವರಿಬ್ಬರ ಜೊತೆಗೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಕೂಡ ಕೇಳಿಬರುತ್ತಿದೆ. ದಕ್ಷಿಣ ಭಾರತದಲ್ಲಿ ಪಕ್ಷ ವಿಸ್ತರಣೆಯ ಉದ್ದೇಶಕ್ಕೆ ದಕ್ಷಿಣ ಭಾರತದವರನ್ನು ಅಧ್ಯಕ್ಷರನ್ನಾಗಿ ಮಾಡಿದರು ಅಚ್ಚರಿಯಿಲ್ಲ. ಹೀಗಾಗಿ ದೆಹಲಿ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಹಿಳಾ ಅಭ್ಯರ್ಥಿಗೆ ಸಿಎಂ ಹುದ್ದೆ ನೀಡಿದೆ. ಇದೇ ತಂತ್ರವನ್ನು ಇದೀಗ ದಕ್ಷಿಣ ಭಾರತದ ಮೇಲೂ ಅಳವಡಿಸಿದ್ರೂ ಅಚ್ಚರಿ ಇಲ್ಲ. ಈ ಎಲ್ಲ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ