ಬೆಂಗಳೂರಲ್ಲಿ ವಿಂಗ್ ಕಮಾಂಡರ್​ ಮೇಲೆ ಹಲ್ಲೆ; ಮುಖ ಮೂತಿ ನೋಡದೆ ಗುದ್ದಿದ ಬೈಕ್ ಸವಾರ

author-image
Veena Gangani
Updated On
ಬೆಂಗಳೂರಲ್ಲಿ ವಿಂಗ್ ಕಮಾಂಡರ್​ ಮೇಲೆ ಹಲ್ಲೆ; ಮುಖ ಮೂತಿ ನೋಡದೆ ಗುದ್ದಿದ ಬೈಕ್ ಸವಾರ
Advertisment
  • ಕಾರ್ ಕೀ ಕಿತ್ತು ಕೊಂಡು ವಿಂಗ್ ಕಮಾಂಡರ್ ಮೇಲೆ ಹಲ್ಲೆ
  • ಪತ್ನಿಯನ್ನು ಏರ್ಪೋರ್ಟ್​ಗೆ ಬಿಡುತ್ತಿದ್ದ ವಿಂಗ್ ಕಮಾಂಡರ್
  • ವಿಂಗ್ ಕಮಾಂಡರ್​ ರಕ್ತ ಸುರಿದರೂ ಕ್ಯಾರೇ ಅನ್ನದ​ ಸವಾರ

ಬೆಂಗಳೂರು: ವಿಂಗ್ ಕಮಾಂಡರ್ ಮೇಲೆ ಬೈಕ್​ ಸವಾರನೊಬ್ಬ ಹಲ್ಲೆ ಘಟನೆ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

ಹೌದು, CV ರಾಮನ್ ನಗರದಲ್ಲಿ ವಾಸವಾಗಿದ್ದ ದಂಪತಿ ಇಂದು ಏರ್ಪೋರ್ಟ್ ಹೋಗುತ್ತಿದ್ದರು. ಆಗ ದಿಢೀರ್ ಅಂತ ಹಿಂದೆಯಿಂದ ಬಂದ ಬೈಕ್ ಸವಾರ ವಿಂಗ್ ಕಮಾಂಡರ್ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾನಂತೆ. ಕಾರ್ ಮುಂದೆ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದಾನೆ.
ಅಷ್ಟೇ ಅಲ್ಲದೇ ಕಾರ್ ಮೇಲೆ DRDO ಸ್ಟಿಕ್ಕರ್ ನೋಡಿ ಕೋಪಕೊಂಡ ಬೈಕ್ ಸವಾರ ಕೀ ಕಿತ್ತುಕೊಂಡು ವಿಂಗ್ ಕಮಾಂಡರ್ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದಾನಂತೆ.

ಇದಾದ ಬಳಿಕ ಒಂದಷ್ಟು ಜನ ಬಂದು ಮತ್ತೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ರಕ್ತ ಸುರಿಯುವಂತೆ ವಿಂಗ್ ಕಮಾಂಡರ್​ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಸ್ಥಿತಿಯಲ್ಲಿ ವಿಂಗ್ ಕಮಾಂಡರ್​ ರಕ್ತ ಸುರಿಯುತ್ತಿದ್ದರೂ ಅದರಲ್ಲೇ ವಿಡಿಯೋ ಮಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment