WPL 2025 ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್..​ ಎಷ್ಟು ಕೋಟಿ ರೂಪಾಯಿ ಬಹುಮಾನ ಸಿಗುತ್ತೆ?

author-image
Bheemappa
Updated On
WPL 2025 ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್..​ ಎಷ್ಟು ಕೋಟಿ ರೂಪಾಯಿ ಬಹುಮಾನ ಸಿಗುತ್ತೆ?
Advertisment
  • ಕಳೆದ ಬಾರಿ ಆರ್​ಸಿಬಿ ಎಷ್ಟು ಕೋಟಿ ಬಹುಮಾನ ಪಡೆದಿತ್ತು?
  • ಸತತ ಮೂರನೇ ಬಾರಿಗೆ ಫೈನಲ್​ನಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್
  • ಮುಂಬೈ ಇಂಡಿಯನ್ಸ್​, ಡೆಲ್ಲಿ ಕ್ಯಾಪಿಟಲ್ಸ್​ಗೆ ಎಷ್ಟು ಹಣ ಸಿಗುತ್ತದೆ?

ಮಹಿಳಾ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಯುವತಿಯರು 2ನೇ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ಬರೆದಿದ್ದಾರೆ. ಸತತ 3ನೇ ಫೈನಲ್​ನಲ್ಲಿ ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ಗೆ ದೊಡ್ಡ ಮುಖಭಂಗ ಅನುಭವಿಸಿದೆ. ಫೈನಲ್​ನಲ್ಲಿ ಮತ್ತೆ ಸೋತಿದ್ದಕ್ಕೆ ಡೆಲ್ಲಿ ಆಟಗಾರ್ತಿಯರು ಕಣ್ಣೀರು ಹಾಕಿದ್ದಾರೆ. ಈ ಎಲ್ಲದರ ಮಧ್ಯೆ ಗೆದ್ದ ತಂಡಕ್ಕೆ ಬಿಸಿಸಿಐ ಎಷ್ಟು ಹಣ ಘೋಷಣೆ ಮಾಡುತ್ತದೆ?.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪ್ಟನ್ ಮೆಗ್​ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಮುಂಬೈ ಇಂಡಿಯನ್ಸ್ ಓಪನರ್ ವಿಫಲ ಬ್ಯಾಟಿಂಗ್ ಮಾಡಿದರು. ಆದರೆ ನಾಯಕಿ ಹರ್ಮನ್​ ಪ್ರೀತ್ ಕೌರ್ 66 ಹಾಗೂ ನ್ಯಾಟ್ ಸಿವರ್-ಬ್ರಂಟ್ 30 ರನ್​ಗಳ ನೆರವಿನಿಂದ ಮುಂಬೈ 20 ಓವರ್​ಗಳಲ್ಲಿ 7 ವಿಕೆಟ್​ಗೆ ಕೇವಲ 149 ರನ್​ ಮಾತ್ರ ಗಳಿಸಿತ್ತು.

ಈ ಸುಲಭ ಟಾರ್ಗೆಟ್​ ಬೆನ್ನು ಬಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ನಲ್ಲಿ ಭಾರೀ ಹಿನ್ನಡೆ ಅನುಭವಿಸಿ, ಗುರಿ ಮುಟ್ಟಲಾಗಲಿಲ್ಲ. 9 ವಿಕೆಟ್​ಗೆ​ 141 ರನ್​ ಮಾತ್ರ ಗಳಿಸಿ, ಕೇವಲ 8 ರನ್​ನಿಂದ ಟ್ರೋಫಿ ಕೈ ಚೆಲ್ಲಿತು. ಸತತ 3ನೇ ಬಾರಿಗೆ ಫೈನಲ್​ಗೆ ಬಂದಿದ್ದ ಡೆಲ್ಲಿ ಯುವತಿಯರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಇದರಿಂದ ಎಲ್ಲ ಆಟಗಾರ್ತಿಯರು ಬೇಸರದಲ್ಲೇ ಮೈದಾನದಿಂದ ಹೊರ ನಡೆದರು.

ಇದನ್ನೂ ಓದಿ:ನಿವೃತ್ತಿ ಕುರಿತು ಕಿಂಗ್ ಕೊಹ್ಲಿ ಸ್ಪಷ್ಟನೆ.. ರಿಟೈರ್​ಮೆಂಟ್ ಕೇಳುವವರಿಗೆ ಏನಂದ್ರು ವಿರಾಟ್?

publive-image

ಫೈನಲ್​ನಲ್ಲಿ ರೋಚಕ ಗೆಲುವು ಪಡೆದ ಮುಂಬೈ ಇಂಡಿಯನ್ಸ್ ಆಟಗಾರ್ತಿಯರು ಮೈದಾನದಲ್ಲಿ ಸಂಭ್ರಮಿಸಿದರು. ಕಪ್​ ಗೆದ್ದಿದ್ದಕ್ಕೆ ಆಟಗಾರ್ತಿಯರ ಜೊತೆ ನಿತಾ ಅಂಬಾನಿ ಸೇರಿದಂತೆ ಸಿಬ್ಬಂದಿ ವರ್ಗ ಎಲ್ಲರೂ ಎಂಜಾಯ್ ಮಾಡಿ ಖುಷಿ ಪಟ್ಟರು. ಈ ಸಲದ ಡಬ್ಲುಪಿಎಲ್​ ಟ್ರೋಫಿ ಗೆಲ್ಲುವ ತಂಡಕ್ಕೆ ಎಷ್ಟು ಮೊತ್ತ ನೀಡುತ್ತಾರೆ ಎಂದು ಬಿಸಿಸಿಐ ಅಧಿಕತವಾಗಿ ಪ್ರಕಟಿಸಿಲ್ಲ. ಆದ್ರೆ ಕಳೆದ ಬಾರಿ ನೀಡಿದಷ್ಟೇ ಮೊತ್ತವನ್ನ ಈ ಬಾರಿಯೂ ನೀಡುತ್ತಾರೆ ಎನ್ನಲಾಗಿದೆ. ಹೀಗಾಗಿ ಗೆದ್ದ ಟೀಮ್ ಪಡೆದ ಹಣ ಎಷ್ಟು ಎಂದು ನೋಡುವುದಾದರೆ,

  • ಮುಂಬೈ ಇಂಡಿಯನ್ಸ್​ ಟ್ರೋಫಿ ವಿನ್ನರ್- 6 ಕೋಟಿ ರೂಪಾಯಿಗಳು
  • ಡೆಲ್ಲಿ ಕ್ಯಾಪಿಟಲ್ಸ್​ ರನ್ನರ್ ಅಪ್​- 3 ಕೋಟಿ ರೂಪಾಯಿಗಳು

ಕಳೆದ ಬಾರಿ ಇದೇ ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿಡಿದಿತ್ತು. ಈ ಸಂದರ್ಭದಲ್ಲಿ 6 ಕೋಟಿ ರೂಪಾಯಿಗಳ ಬಹುಮಾನ ಮೊತ್ತವನ್ನು ಆರ್​ಸಿಬಿ ಗರ್ಲ್ಸ್​ ಪಡೆದಿದ್ದರು. ಈ ಸಲನೂ ಇಷ್ಟೇ ಮೊತ್ತವನ್ನು ಮುಂಬೈಗೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment