/newsfirstlive-kannada/media/post_attachments/wp-content/uploads/2024/12/WINTER-SEASON-HEART-2.jpg)
ಚಳಿಗಾಲ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದೊಡ್ಡುತ್ತದೆ. ಇಂತಹ ವಾತಾವರಣದಲ್ಲಿ ನಮ್ಮ ಹೃದಯವು ಹಲವು ಆರೋಗ್ಯದ ಸಮಸ್ಯೆಗಳನ್ನ ಎದುರಿಸುತ್ತದೆ. ಚಳಿಗಾಲ ಹೃದಯ ಆರೋಗ್ಯದ ಮೇಲೆ ಭಯಂಕರ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಚಳಿಯಿಂದ ಕೂಡಿದ ವಾತಾವರಣ, ಉಸಿರಾಟದ ಸಮಸ್ಯೆ, ಜೀವನ ಕ್ರಮದಲ್ಲಿ ಆಗುವ ಬದಲಾವಣೆ ಹೀಗೆ ಹಲವು ರೀತಿಯ ಸಮಸ್ಯೆಗಳು ಹೃದಯ ಆರೋಗ್ಯಕ್ಕೆ ಮಾರಕವಾಗಿ ನಿಲ್ಲುತ್ತವೆ.
ಚಳಿ ಹೃದಯ ಸಮಸ್ಯೆಯ ಅಪಾಯಗಳನ್ನು ಹೆಚ್ಚಿಸುತ್ತದೆ
ಚಳಿಗಾಲದಲ್ಲಿ ಮನುಷ್ಯನ ದೇಹದ ರಕ್ತನಾಳಗಳು ಕುಗ್ಗುತ್ತವೆ ಹೀಗಾಗಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಹೃದಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಹೀಗಾಗಿ ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚಾಗುವ ಅಪಾಯಗಳು ಇರುತ್ತವೆ. ಹಲವು ಅಧ್ಯಯನಗಳು ಹೇಳುವ ಪ್ರಕಾರ ಚಳಿಗಾಲದ ತಿಂಗಳುಗಳಲ್ಲಿ ಹಾರ್ಟ್ ಅಟ್ಯಾಕ್ನಂತಹ ಸಮಸ್ಯೆಗಳು ಕಾಡುತ್ತವೆ. ಕಾರಣ ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ರಕ್ತಪರಿಚಲನೆ ಆಗುವುದು ಸ್ವಲ್ಪ ಕಷ್ಟಕರವಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಹೃದಯಾಘಾತದಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ.
ಇದನ್ನೂ ಓದಿ:ಡಾರ್ಕ್ ಚಾಕೊಲೇಟ್‌ಗಳು ಡಯಾಬಿಟಿಸ್ ಕಡಿಮೆ ಮಾಡುತ್ತಾ? ಅಧ್ಯಯನಗಳಿಂದ ಮಹತ್ವದ ಮಾಹಿತಿ ಬಹಿರಂಗ!
ಇನ್ನು ಚಳಿಗಾಲದಲ್ಲಿ ಬೀಸುವ ಚಳಿಗಾಳಿ ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸುವ ಆತಂಕವಂತೂ ಇದ್ದೇ ಇರುತ್ತದೆ. ಚಳಿಗಾಲದಲ್ಲಿಯೇ ಹೆಚ್ಚು ಉಸಿರಾಟದ ಸೋಂಕುಗಳು ಸೃಷ್ಟಿಯಾಗುವುದು. ಇದರಿಂದ ಜ್ವರ, ಸಾಮಾನ್ಯ ನೆಗಡಿ, ಸಾಮಾನ್ಯವಾಗಿ ಆರೋಗ್ಯ ತಪ್ಪುವುದು ನಡೆದೇ ಇರುತ್ತದೆ. ಈ ರೀತಿಯ ಅನಾರೋಗ್ಯಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಹೃದಯ ಆರೋಗ್ಯ ಸ್ಥಿತಿಯನ್ನು ಕೂಡ ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಸಮಯದಲ್ಲಿ ಸ್ವಚ್ಛವಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಆಗಾಗ ಕೈ ತೊಳಿಯುವುದು. ಫ್ಲೂಗಳಿಂದ ದೂರವಾಗಲು ಬೇಕಾಗಿರುವ ಲಸಿಕೆಯನ್ನು ತೆಗೆದುಕೊಳ್ಳಬೇಕು. ಹೀಗಾಗಿ ಮುನ್ನೆಚ್ಚರಿಕೆಯನ್ನು ಹೆಚ್ಚು ತೆಗೆದುಕೊಳ್ಳುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
ಇನ್ನು ಚಳಿಗಾಲದಲ್ಲಿ ನಮ್ಮನ್ನು ನಾವು ಬೆಚ್ಚಗೆ ಇಟ್ಟುಕೊಳ್ಳುವುದು ತುಂಬಾ ಸಹಾಯಕಾರಿ. ಹೀಗಾಗಿ ದೇಹವು ಬೆಚ್ಚಗಿನ ಅನುಭವ ಪಡೆಯಲು ನಾವು ನಿತ್ಯ ವ್ಯಾಯಾಮಗಳನ್ನು ಮಾಡಲೇಬೇಕು. ಹೃದಯನಾಳಗಳು ಆರೋಗ್ಯವಾಗಿಡಲು ನಿತ್ಯ ಇಂಡೋರ್ ಇಲ್ಲವೇ ಔಟ್ಡೋರ್ ಆಗಲಿ ವ್ಯಾಯಾಮಗಳನ್ನು ಮಾಡಬೇಕು. ಸರಿಯಾದ ಬಟ್ಟೆಯನ್ನು ಕಾಲಕ್ಕೆತಕ್ಕಂತೆ ಹಾಕಿಕೊಳ್ಳಬೇಕು. ಇದರಿಂದ ನಾವು ಹೃದಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: ವಿಷವಾದ ಗಾಳಿ, ದೆಹಲಿ ಜನರಿಗೆ ಪ್ರಾಣವಾಯು ಕಂಟಕ.. AQI ಮಟ್ಟ ಯಾವ ಪ್ರಮಾಣ ತಲುಪಿದೆ?
ಇನ್ನು ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕ್ರಮ ಚೆನ್ನಾಗಿರಬೇಕು. ಯಾವುದೇ ಕಾರಣಕ್ಕೂ ರಾಜಿಯಾಗದೇ ಸರಿಯಾದ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರುವಂತೆ ನೋಡಿಕೊಳ್ಳಬೇಕು. ಹೆಚ್ಚು ಹೆಚ್ಚು ಹಣ್ಣು ತರಕಾರಿ ಸೇವಿಸಿ ದೇಹವನ್ನು ಆದಷ್ಟು ಹೈಡ್ರೇಡ್ ಆಗಿಟ್ಟುಕೊಳ್ಳಬೇಕು. ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಸೋಡಿಯಂ ಜಾಸ್ತಿ ಇರುವ ಆಹಾರವನ್ನು ಸೇವಿಸುವುದು ತುಂಬಾ ಉಪಯೋಗ.
ಚಳಿಗಾಲ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ದಿನದಲ್ಲಿಯೂ ಕೂಡ ಸರಿಯಾಗಿ ಮೈಗೆ ತಾಗದ ಸೂರ್ಯನ ಕಿರಣಗಳು,ತಾಪಮಾನ ಇಳಿಕೆಯಾಗಿರುವುದು. ಇವೆಲ್ಲವೂ ಕೂಡ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹೀಗಾಗಿ ಧ್ಯಾನ, ವ್ಯಾಯಾಮ, ಯೋಗಾ ಇವೆಲ್ಲವನ್ನು ಕೂಡ ಮಾಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ