ಚಳಿಗಾಲ, ಹಲವು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಈ ವಿಷಯಗಳಲ್ಲಿ ನೀವು ತುಂಬಾ ಹುಷಾರಾಗಿರಿ

author-image
Gopal Kulkarni
Updated On
ಚಳಿಗಾಲ, ಹಲವು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಈ ವಿಷಯಗಳಲ್ಲಿ ನೀವು ತುಂಬಾ ಹುಷಾರಾಗಿರಿ
Advertisment
  • ಚಳಿಗಾಲದಲ್ಲಿ ಶುರುವಾಗುತ್ತವೇ ಅನೇಕ ಆರೋಗ್ಯ ಸಮಸ್ಯೆಗಳು
  • ಉಸಿರಾಟ ತೊಂದರೆ ಇರುವವರು ಹೆಚ್ಚು ಜಾಗೃತೆ ವಹಿಸಬೇಕಾಗುತ್ತೆ
  • ಹೆಚ್ಚು ಬೆಚ್ಚಗೆ ಇರುವುದು, ಹೆಚ್ಚು ಚಟುವಟಿಕೆಯಿಂದ ಇರುವುದು ಉತ್ತಮ

ಚಳಿಗಾಲ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ತಂಪಾದ ವಾತಾವರಣದಿಂದಾಗಿ ಅನೇಕ ಸೋಂಕುಗಳು ನಮ್ಮನ್ನು ಆವರಿಸುತ್ತವೆ. ಹಗಲು ಚಿಕ್ಕದಾಗಿ ರಾತ್ರಿ ದೊಡ್ಡದಾಗುವ ಸಮಯವಿದು. ಹೀಗಾಗಿ ಸೂರ್ಯನ ಕಿರಣಗಳು ಅಷ್ಟಾಗಿ ಮೈಮೇಲೆ ಬೀಳದೇ ಇರುವುದರಿಂದ ಹೀಗೆ ಹಲವು ಕಾರಣಗಳಿಂದ ನಮ್ಮ ರೋಗನಿರೋಧಕ ಶಕ್ತಿಯ ಪ್ರಮಾಣ ಕ್ಷೀಣಿಸುವ ಸಂಭವ ಇರುತ್ತದೆ ಹೀಗಾಗಿ ಚಳಿಗಾಲದಲ್ಲಿ ಹೆಚ್ಚು ಹೆಚ್ಚು ನಾವು ಜಾಗೂರಕರಾಗಿರಬೇಕು.

ಚಳಿಗಾಲದಿಂದಾಗಿ ಹಲವು ವೈರಸ್​ಗಳಿಂದ ನಮಗೆ ಶೀತ ಕೆಮ್ಮಿನಂತಹ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು ಉಸಿರಾಟದ ಸಮಸ್ಯೆಗಳಂತಹ ಸಮಸ್ಯೆಗಳು ಉದ್ಭವಾಗುತ್ತವೆ. ಈಗಾಗಲೇ ಹೇಳಿದಂತೆ ಸೂರ್ಯನ ಕಿರಣಗಳು ಚಳಿಗಾಲದಲ್ಲಿ ನಮಗೆ ಅಷ್ಟಾಗಿ ಸಿಗುವುದಿಲ್ಲ ಇದರಿಂದ ದೇಹಕ್ಕೆ ವಿಟಮಿನ್ ಡಿ ಕೊರತೆಯುಂಟಾಗುತ್ತದೆ. ಚಳಿಗಾಲ ಅನ್ನೋ ಒಂದೇ ನೆಪದಿಂದ ಜನರು ಮನೆಬಿಟ್ಟು ಹಾಸಿಗೆ ಬಿಟ್ಟು ಅಷ್ಟು ಸರಳವಾಗಿ ಆಚೆ ಬರುವುದು ಇಲ್ಲ ಹೀಗಾಗಿ ಅನೇಕ ಆರೋಗ್ಯದ ಸಮಸ್ಯೆಗಳಿಂದ ನಾವು ನರಳಬೇಕಾಗುತ್ತದೆ. ಚಳಿಗಾಲದಲ್ಲಿ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡಬಹುದು. ನಾವು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಇದನ್ನೂ ಓದಿ:ಏನಿದು ಕ್ಲಿನಿಕಲ್ ಡಿಪ್ರೆಶನ್​? ಈ ಖಿನ್ನತೆ ಆವರಿಸಿಕೊಳ್ಳುವುದು ಏಕೆ? ಈ ಬಗ್ಗೆ ತಜ್ಞ ವೈದ್ಯರು ಏನು ಹೇಳುತ್ತಾರೆ?

ಶೀತ ಮತ್ತು ಜ್ವರ: ತಂಪಾದ ವಾತಾವರಣ ಹಾಗೂ ಒಣ ಹವೆ ನಮಗೆ ಶೀತ ಹಾಗೂ ಜ್ವರದಂತಹ ಸಮಸ್ಯೆಗಳಿಗೆ ಆಹ್ವಾನ ನೀಡುತ್ತವೆ. ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಚಳಿಗಾಲದಲ್ಲಿ ನಮ್ಮನ್ನು ನಾವು ಹೆಚ್ಚು ಬೆಚ್ಚಗೆ ಇಟ್ಟುಕೊಳ್ಳುವತ್ತ ಗಮನಹರಿಸಬೇಕು. ಆಗಾಗ ಕೈತೊಳೆಯುತ್ತಿರುವಬೇಕು. ದೇಹವನ್ನು ಬೆಚ್ಚಗೆ ಇಡುವಂತ ಬಟ್ಟೆಯನ್ನು ಧರಿಸಬೇಕು. ಇವು ನಮ್ಮನ್ನು ಜ್ವರ ಹಾಗೂ ಶೀತದಂತಹ ಆರೋಗ್ಯ ಸಮಸ್ಯೆಯಿಂದ ತಡೆಯಲು ಸಹಾಯಕವಾಗುತ್ತವೆ.

ಚಳಿಗಾಲದಲ್ಲಿ ಬಿದ್ದು ಪೆಟ್ಟಾಗುವ ಸಂಭವ ಇರುತ್ತೆ: ಪ್ರಮುಖವಾಗಿ ಹಿರಿಯ ವಯಸ್ಸಿನವರು ಚಳಿಗಾಲದಲ್ಲಿ ಕೊಂಚ ಜಾಗೃತೆಯಿಂದ ಇರಬೇಕು. ಹೆಚ್ಚು ಮಂಜು ಬೀಳುವ ಸಮಯ ಇದಾಗಿರುವುದರಿಂದ ಮನೆಯ ಹೊರಾಂಗಣದಲ್ಲಿ ಟೈಲ್ಸ್​ಗಳಿದ್ದಲ್ಲಿ. ಅವುಗಳ ಮೇಲೆ ಮಂಜು ಬಿದ್ದು ಜಾರಿಕೆಯನ್ನುಂಟು ಮಾಡಿರುತ್ತದೆ. ಕಾಲು ಇಟ್ಟಾಗ ಜಾರಿ ಬಿದ್ದು ಪೆಟ್ಟು ಮಾಡಿಕೊಳ್ಳುವ ಸಂದರ್ಭ ಹೆಚ್ಚು. ಆದಷ್ಟು ಜಾಗೃತೆಯಿಂದ ಓಡಾಡುವುದು ಒಳ್ಳೆಯದು.

ಎಸ್​ಎಡಿಯಂತಹ ಸಮಸ್ಯೆಗಳು ಕಾಡಬಹುದು: SAD, ಸೀಸನಲ್ ಅಫೆಕ್ಟಿವ್ ಡಿಸಾರ್ಡರ್​ ಅಂತಲೇ ಕರೆಯುತ್ತಾರೆ. ವಿಟಮಿನ್ ಡಿ3ಗೂ ಖಿನ್ನತೆಗೂ ಒಂದು ಅವಿನಾಭಾವ ಸಂಬಂಧವಿದೆ. ಸೂರ್ಯನ ಎಳೆಯ ಕಿರಣಗಳಲ್ಲಿ ವಿಟಮಿನ್ ಡಿ 3 ಅಂಶವಿದೆ. ಸಾಕಷ್ಟು ಬಿಸಿಲು ಈ ಕಾಲದಲ್ಲಿ ಬೀಳದೇ ಇರುವುದರಿಂದ ನಮಗೆ ಖಿನ್ನತೆಯಂತ ಸೀಸನಲ್ ಖಾಯಿಲೆ ಕಾಡಬಹುದು. ಇದು ಮೆದುಳಿನಲ್ಲಿರುವ ರಾಸಾಯನಿಕ ಅಂಶವಾದ ಸೆರೊಟೊನಿನ್​ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ತೂಕ ಹೆಚ್ಚಾಗುವ ಸಂಭವನೀಯತೆ: ಮನೆಯಾಚೆಗಿನ ಚಟುವಟಿಕೆಗಳು ಚಳಿಗಾಲದಲ್ಲಿ ಕಡಿಮೆ ಆಗುತ್ತವೆ. ಸರಿಯಾದ ಪ್ರಮಾಣದ ಊಟವನ್ನು ಈ ಸಮಯದಲ್ಲಿ ನಾವು ಮಾಡುತ್ತೇವೆ. ದೇಹಕ್ಕೆ ಅಗತ್ಯವಿದ್ದ ಚಟುವಟಿಕೆಗಳನ್ನು ಮಾಡದೇ ಹೆಚ್ಚು ಹೆಚ್ಚು ಆಹಾರ ಸೇವಿಸುವುದರಿಂದ ನಮ್ಮ ತೂಕದಲ್ಲಿ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇದ್ದು. ಪೊಷಕಾಂಶ ಹಾಗೂ ಪೌಷ್ಠಿಕ ಆಹಾರದ ಕಡೆ ಹೆಚ್ಚು ಗಮನಕೊಡಿ.

ಇದನ್ನೂ ಓದಿ:ಶೇಕಡಾ 80ರಷ್ಟು ಜನರು ತಮ್ಮ ಹಲ್ಲುಗಳನ್ನು ಸರಿಯಾಗಿ ಉಜ್ಜುವುದಿಲ್ಲ.. ನಿರ್ಲಕ್ಷ್ಯದಿಂದ ಅಪಾಯ; ವೈದ್ಯರಿಂದ ಆಘಾತಕಾರಿ ಮಾಹಿತಿ!

ಅಲರ್ಜಿ ಹಾಗೂ ಅಸ್ತಮಾದಂತಹ ಸಮಸ್ಯೆ: ಒಣ ಗಾಳಿ ಹಾಗೂ ವಿಪರೀತ ಚಳಿ ಉಸಿರಟಾಕ್ಕೆ ಸಂಬಂಧಿಸಿದ ಸೋಂಕುಗಳನ್ನು ಸೃಷ್ಟಿಸುತ್ತವೆ. ಹೀಗಾಗಿ ಈ ಸಮಯದಲ್ಲಿ ಅಸ್ತಮಾದಂತಹ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಹೊರಗೆ ಹೋಗುವಾಗ ಸ್ಕಾರ್ಫ್​ಗಳನ್ನು ಕಟ್ಟಿಕೊಂಡು ಹೋಗುವುದು ಉತ್ತಮ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment