/newsfirstlive-kannada/media/post_attachments/wp-content/uploads/2024/11/HONEY.jpg)
ಜೇನುತುಪ್ಪ ಹಲವಾರು ಔಷಧೀಯ ಗುಣ ಹೊಂದಿದೆ. ಹಾಗಾಗಿ ಅದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ವಿಶೇಷವಾಗಿ ಚಳಿಗಾಲದಲ್ಲಿ ಜೇನುತುಪ್ಪ ಸೇವನೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋ ವಿವರ ಹೀಗಿದೆ..
ಉಸಿರಾಟ ಸಮಸ್ಯೆಗೆ ಮುಕ್ತಿ
ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿದಿನ ಜೇನುತುಪ್ಪ ಸೇವನೆ ಮಾಡುವುದರಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು. ಜೇನು ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ. ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೃದಯಾಘಾತದಂತಹ ಅಪಾಯಗಳನ್ನು ತಪ್ಪಿಸುತ್ತದೆ.
ಇದನ್ನೂ ಓದಿ:ಡ್ರೈಫ್ರೂಟ್ಸ್ ಹಾಗೂ ಡೈರಿ ಹಾಲು ಇವುಗಳಲ್ಲಿ ಆರೋಗ್ಯಕ್ಕೆ ಯಾವುದು ಶ್ರೇಷ್ಠ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ.
ಜೇನುತುಪ್ಪದಲ್ಲಿ ಮೆಗ್ನೀಸಿಯಮ್, ಐರನ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿರುತ್ತದೆ. ಇವು ದೇಹಕ್ಕೆ ತುಂಬಾ ಉಪಯುಕ್ತವಾಗಿವೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಐರನ್ ಕಂಟೆಂಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಜೇನು ತಪ್ಪದಿಂದ ಮಾನಸಿಕ ಆರೋಗ್ಯ
ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರತಿದಿನ ಬೆಳಗ್ಗೆ ಜೇನುತುಪ್ಪವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಗುಣಪಡಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ದಾಲ್ಚಿನ್ನಿ ಪುಡಿ ಮತ್ತು ಶುಂಠಿಯ ರಸಕ್ಕೆ ಜೇನುತುಪ್ಪ ಬೆರೆಸಿ ಕಂಠಪೂರ್ತಿ ಸೇವಿಸಿದರೆ ಒತ್ತಡ ನಿವಾರಣೆಯಾಗಿ ಉತ್ತಮ ನಿದ್ದೆ ಬರುತ್ತದೆ.
ಇದನ್ನೂ ಓದಿ:ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್