ಕಲಾಪ ಆರಂಭ; ರತನ್ ಟಾಟಾ ಸೇರಿ ಅಗಲಿದ ಗಣ್ಯರಿಗೆ ಸಂತಾಪ.. ನೂತನ ಶಾಸಕರ ಪ್ರಮಾಣ ವಚನ

author-image
Bheemappa
Updated On
ಕಲಾಪ ಆರಂಭ; ರತನ್ ಟಾಟಾ ಸೇರಿ ಅಗಲಿದ ಗಣ್ಯರಿಗೆ ಸಂತಾಪ.. ನೂತನ ಶಾಸಕರ ಪ್ರಮಾಣ ವಚನ
Advertisment
  • ಅಗಲಿದ ಗಣ್ಯರಿಗೆ ಮೊದಲು ಸಂತಾಪ ಸೂಚನೆ ಮಾಡಿದ ಸದಸ್ಯರು
  • ವಂದೇ ಮಾತರಂ ಗೀತೆಯ ಮೂಲಕ ವಿಧಾನಸಭೆ ಕಲಾಪ ಆರಂಭ
  • ಅಧಿವೇಶನಗಳಿಗೆ ಸದಸ್ಯರೆಲ್ಲ ಹಾಜರಾಗಬೇಕು- ಸ್ಪೀಕರ್ ಖಾದರ್

ಬೆಳಗಾವಿ: ಸುವರ್ಣಸೌಧದಲ್ಲಿ ವಿಧಾನಮಂಡಲದ ಎರಡು ಅಧಿವೇಶನಗಳು ಆರಂಭವಾಗಿವೆ. ವಿಧಾನ ಪರಿಷತ್ ಹಾಗೂ ವಿಧಾನಸಭಾ ಕಲಾಪ ಆರಂಭವಾಗಿವೆ. ಇಂದಿನಿಂದ ಡಿಸೆಂಬರ್ 19ರವರೆಗೆ ಈ ಅಧಿವೇಶನಗಳು ನಡೆಯಲಿವೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಕಲಾಪ ಆರಂಭಿಸಿದರು. ಇದಾದ ಮೇಲೆ ಸದನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಾಡಿದರು.

ವಿಧಾನಪರಿಷತ್ ಸದಸ್ಯರಾಗಿದ್ದ ಕೆ.ಹೆಚ್ ಶ್ರೀನಿವಾಸ್, ಮಾಜಿ ಸದಸ್ಯೆ ಶುಭಲತಾ ವಸಂತ್ ಅಸ್ನೋಟಿಕರ್, ಮಾಜಿ ಸದಸ್ಯ ಕಾಲೇಬುಡ್ಡ ಇಸ್ಮಾಯಿಲ್ ಸಾಬ್, ಮಾಜಿ ಸದಸ್ಯ ನರೇಂದ್ರ ಖೇಣಿ, ಮಾಜಿ ಸದಸ್ಯ ಕೆ.ನಿರಂಜನ್ ನಾಯ್ಡು, ಮಾಜಿ ಸದಸ್ಯೆ ಸಾವಿತ್ರಮ್ಮ ಎಂ.ಗುಂಡಿ, ಮಾಜಿ ಉಪ ಸಭಾಧ್ಯಕ್ಷರಾಗಿದ್ದ ಮನೋಹರ್ ತಹಶೀಲ್ದಾರ್, ಭಾರತೀಯ ಕೈಗಾರಿಕೋದ್ಯಮಿ ರತನ್ ನಾವಲ್ ಟಾಟಾ, ಶಿಕ್ಷಣ ತಜ್ಞ ಡಾ.ಸೈಯದ್ ಶಹಾ ಖುಸ್ರೋ ಹುಸೇನಿ, ಖ್ಯಾತ ಸಾಹಿತಿ ರಾಜಶೇಖರ ನೀರಮಾನ್ವಿ ಅವರುಗಳಿಗೆ ವಿಧಾನಪರಿಷತ್ ಕಲಾಪದಲ್ಲಿ ಸಂತಾಪ ಸೂಚನೆ ಮಾಡಲಾಯಿತು.

ಇದನ್ನೂ ಓದಿದೇಶದಲ್ಲೇ ಅತಿ ದುಬಾರಿ ಮೈಸೂರು ಸ್ಯಾಂಡಲ್ ಸೋಪ್‌.. ಕೇವಲ ಒಂದು ಸಾಬೂನು ಬೆಲೆ 4,000 ರೂಪಾಯಿ

publive-image

ಇನ್ನು ವಿಧಾನಸಭೆ ಕಲಾಪವನ್ನು ವಂದೇ ಮಾತರಂ ಗೀತೆಯ ಮೂಲಕ ಕಲಾಪ ಆರಂಭಿಸಲಾಯಿತು. ನಂತರ ಸ್ಪೀಕರ್ ಯುಟಿ ಖಾದರ್ ಅವರು ಸಂವಿಧಾನದ ಪ್ರಸ್ತಾವನೆಯನ್ನು ಸದನದ ಎಲ್ಲ ಸದಸ್ಯರ ಜೊತೆ ಓದಿದರು. ಪ್ರಸ್ತಾವನೆ ಮುಗಿದ ಬಳಿಕ ನೂತನವಾಗಿ ಶಾಸಕರಾಗಿ ಆಯ್ಕೆ ಆದ ಅನ್ನಪೂರ್ಣ ತುಕಾರಂ, ಸಿ.ಪಿ ಯೋಗೇಶ್ವರ್ ಹಾಗೂ ಯಾಸೀರ್ ಪಠಾಣ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಎಲ್ಲ ಮುಗಿದ ಮೇಲೆ ಸ್ಪೀಕರ್ ಯುಟಿ ಖಾದರ್ ಅವರು ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment