newsfirstkannada.com

ಇಂದಿನಿಂದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಆರಂಭ; ಕನ್ನಡಿಗ ಕೆತ್ತಿದ ಬಾಲರಾಮನ ಮೂರ್ತಿಯೇ ಶಕ್ತಿ ಕೇಂದ್ರ

Share :

Published January 16, 2024 at 6:14am

  ಮಂದಿರ ಟ್ರಸ್ಟ್‌ನಿಂದ ಚಿನ್ನ ಲೇಪಿತ ಬಾಗಿಲ ಚಿತ್ರ ಬಿಡುಗಡೆ

  ಭವ್ಯಮಂದಿರಕ್ಕೆ ಕನ್ನಡಿಗ ಕೆತ್ತಿದ ‘ಬಾಲರಾಮ’ ಮೂರ್ತಿ ಆಯ್ಕೆ

  ಅಯೋಧ್ಯೆ ಡ್ಯಾನ್ಸ್​ ಮಾಡಿದ ಶಿಲ್ಪಿ ಅರುಣ್​ ಯೋಗಿರಾಜ್

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ವಿಧಿವಿಧಾನ ಇಂದಿನಿಂದ ಆರಂಭವಾಗಲಿವೆ. ಸಂಪ್ರದಾಯ ಬದ್ಧವಾಗಿ ರಾಮನ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆದಿವೆ. ಇದೇ ಹೊತ್ತಲ್ಲಿ ರಾಮಲಲ್ಲಾ ಪ್ರತಿಮೆಯ ಆಯ್ಕೆ ಅಧಿಕೃತವಾಗಿದೆ. ಕನ್ನಡಿಗ ಕೆತ್ತಿದ ಬಾಲರಾಮನ ಮೂರ್ತಿ ಭವ್ಯ ರಾಮಮಂದಿರದಲ್ಲಿ ರಾರಾಜಿಸಲಿದೆ. ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ದಿನ ಹತ್ತಿರವಾಗ್ತಿದೆ. ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಪೂಜಾ ಕೈಂಕರ್ಯಗಳು ಇಂದಿಯಿಂದ ಆರಂಭವಾಗುತ್ತಿವೆ. ಇದೇ ಹೊತ್ತಲ್ಲಿ ಮಂದಿರ ವಿಚಾರದಲ್ಲಿ ಕನ್ನಡಿಗರಿಗೆ ಗುಡ್‌ನ್ಯೂಸ್‌ವೊಂದು ಅಧಿಕೃತವಾಗಿ ಸಿಕ್ಕಿದೆ.

ಭವ್ಯರಾಮಮಂದಿರದ ಗರ್ಭ ಗುಡಿಯಲ್ಲಿ ಕನ್ನಡಿಗ ಕೆತ್ತಿದ ಬಾಲರಾಮನ ಮೂರ್ತಿ ರಾರಾಜಿಸುವ ದಿನ ಹತ್ತಿರವಾಗ್ತಿದೆ. ಅರ್ಥಾತ್‌ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ್ದ ರಾಮಲಲ್ಲಾ ಮೂರ್ತಿಯನ್ನೇ ರಾಮಮಂದಿರ ಟ್ರಸ್ಟ್ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಆಯ್ಕೆ ಮಾಡಿಕೊಂಡಿದೆ. ಕರ್ನಾಟಕದ ಹೆಚ್.ಡಿ.ಕೋಟೆಯ ಕಲ್ಲಿನಿಂದ ಕೆತ್ತಲಾದ ಮೂರ್ತಿಗೆ ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಈ ಬಗ್ಗೆ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಚಂಪತ್ ರಾಯ್ ಅಧಿಕೃತ ಘೋಷಣೆ ಮಾಡಿದ್ದಾರೆ. ರಾಮಮಂದಿರ ಟ್ರಸ್ಟ್‌ನ 15 ಸದಸ್ಯರ ಪೈಕಿ 11 ಮಂದಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಮೂಲಕ 15 ದಿನದ ಹಿಂದೆ ಈ ಬಗ್ಗೆ ಮೊಟ್ಟ ಮೊದಲಿಗೆ ವರದಿ ಮಾಡಿದ್ದ ನ್ಯೂಸ್ ಫಸ್ಟ್ ವರದಿ ನಿಜವಾಗಿದೆ.

ಅರುಣ್ ಯೋಗಿರಾಜ್, ಮೈಸೂರಿನ ನಿವಾಸಿ. ಅನೇಕ ತಲೆಮಾರುಗಳಿಂದ ಇವರ ಪರಿವಾರ ಮೂರ್ತಿ ಕೆತ್ತನೆಯಲ್ಲಿ ತೊಡಗಿದೆ. ನನಗೆ ಇರುವ ಮಾಹಿತಿಯ ಪ್ರಕಾರ, ಕೇದಾರನಾಥದ ಶಂಕರಾಚಾರ್ಯರ ಮೂರ್ತಿಯನ್ನು ಈ ಯುವಕ ಕೆತ್ತಿದ್ದಾರೆ. ಅತ್ಯಂತ ವಿನಮ್ರ, ಹಸನ್ಮುಖಿ. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಇನ್ನೂ ಬಾಲರಾಮನ ಮೂರ್ತಿ ಸುಮಾರು 150 ರಿಂದ 200 ಕೆಜಿ ತೂಕ ಇರುವ ಸಾಧ್ಯತೆ ಇದೆ. 5 ವರ್ಷದ ಮಗುವಿನ ಅವತಾರದಲ್ಲಿ ಬಾಲರಾಮನ ಪ್ರತಿಮೆ ಇರಲಿದೆ. ಜನವರಿ 18ರಂದೇ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಇಟ್ಟು, ನೀರಿನ ಅಭಿಷೇಕ, ಅನ್ನ, ಹಣ್ಣು, ದ್ರವ್ಯ, ಸುಗಂಧ, ತುಪ್ಪ ಮತ್ತು ಇನ್ನು ಅನೇಕ ರೀತಿಯಲ್ಲಿ ಅಭಿಷೇಕ ಮಾಡಲಾಗುತ್ತದೆ.

ಕುಣಿದು ಕುಪ್ಪಳಿಸಿದ ಶಿಲ್ಪಿ ಅರುಣ್ 

ಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಮೂವರು ಶಿಲ್ಪಿಗಳ ಜೊತೆ ನೃತ್ಯ ಮಾಡಿದ್ದಾರೆ. ರಾಮಮಂದಿರ ಟ್ರಸ್ಟ್ ನ ಸದಸ್ಯರ ಜೊತೆ ಕುಣಿದಿದ್ದಾರೆ. ಇದಲ್ಲದೆ, ರಾಮಮಂದಿರ ಟ್ರಸ್ಟ್ ನಿಂದ ಅರುಣ್ ಗೆ ಸನ್ಮಾನ ಮಾಡಲಾಗಿದೆ. ನೆನಪಿನ ಕಾಣಿಕೆ ಕೊಡಲಾಗಿದೆ.

ಇಂದಿಯಿಂದ ಪ್ರಾಣಪ್ರತಿಷ್ಠಾಪನೆ ಕಾರ್ಯ

ಅಯೋಧ್ಯೆಯಲ್ಲಿ ಇಂದಿಯಿಂದ ಜನವರಿ 21ರವರೆಗೆ ಪ್ರಾಣಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಇಂದು ಕರ್ಮಕುಟಿ ತಪಸ್ಸು ಮತ್ತು ಪೂಜಾ ಕಾರ್ಯಗಳು ನಡೆಯಲಿವೆ. ಜನವರಿ 17ರಂದು ಬಾಲರಾಮನ ಮೂರ್ತಿಯು ರಾಮಮಂದಿರ ಆವರಣ ಪ್ರವೇಶ ಮಾಡಲಿದೆ. ಜನವರಿ 18ರ ಸಂಜೆಯ ವೇಳೆ ತೀರ್ಥೋದ್ಭವ ಮತ್ತು ಜಲಪ್ರವಾಸ, ಜಲಾಧಿವಾಸ ಮತ್ತು ಗಂಧಾಧಿವಾಸ ಕಾರ್ಯಗಳು ನೆರವೇರಲಿವೆ. ಜನವರಿ 19ರಂದು ಬೆಳಗ್ಗೆ ಔಷಧಿವಾಸ, ಕೇಸರಧಿವಾಸ, ಘೃತಾಧಿವಾಸ, ಸಾಯಂಕಾಲ ಧಾನ್ಯಾಧಿವಾಸ ಪೂಜಾ ಕೈಂಕರ್ಯ ನಡೆಯಲಿದೆ. ಜ.20 ಬೆಳಗ್ಗೆ ಸುಗರ್ಧಿವಾಸ, ಫಲಧಿವಾಸ, ಸಂಜೆ ಪುಷ್ಪಾಧಿವಾಸ ನೆರವೇರಲಿದೆ. ಜನವರಿ 21ರಂದು ಬೆಳಗ್ಗೆ ಮಧ್ಯಾಧಿವಾಸ, ಸಂಜೆ ಮಲಗುವ ಸಮಯ. ಹೀಗೆ ಜನವರಿ 18ರಿಂದ 21ರವರೆಗೆ ಹನ್ನೆರಡು ಅಧಿವಾಸಗಳು ನೆರವೇರಲಿವೆ. ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ರಾಮಮಂದಿರದ ಒಳಭಾಗದ ಪೋಟೋ ಬಿಡುಗಡೆ

ಬಾಲರಾಮ ಪ್ರಾಣಪ್ರತಿಷ್ಠಾಪನೆಗೂ ಮುನ್ನ ರಾಮಜನ್ಮಭೂಮಿ ತೀರ್ಥ ಟ್ರಸ್ಟ್‌ ರಾಮಮಂದಿರದ ಒಳಭಾಗದ ಪೋಟೋ ಬಿಡುಗಡೆ ಮಾಡಿದೆ. ರಾಮಮಂದಿರದೊಳಗೆ ನೃತ್ಯ ಮಂಟಪ ಸೇರಿ ಐದು‌ ಮಂಟಪಗಳ ನಿರ್ಮಾಣ ಮಾಡಲಾಗಿದೆ. ಜೊತೆಗೆ ಗರ್ಭಗುಡಿಯ ಬಳಿ ಚಿನ್ನದ ಲೇಪಿತ ಬಾಗಿಲಿನ ಫೋಟೋ ಕೂಡಾ ರಿಲೀಸ್ ಆಗಿದೆ. ಒಟ್ಟಾರೆ, ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಅಯೋಧ್ಯೆಯ ಭವ್ಯ ಮಂದಿರದ ಆಸ್ಥಾನದಲ್ಲಿ ಜಾನಕಿ ವಲ್ಲಭ ರಾರಾಜಿಸುವ ಶುಭಗಳಿಗೆ ಮತ್ತಷ್ಟು ಹತ್ತಿರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಆರಂಭ; ಕನ್ನಡಿಗ ಕೆತ್ತಿದ ಬಾಲರಾಮನ ಮೂರ್ತಿಯೇ ಶಕ್ತಿ ಕೇಂದ್ರ

https://newsfirstlive.com/wp-content/uploads/2024/01/shri-rama-20.jpg

Load More