Advertisment

ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!

author-image
Bheemappa
Updated On
ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!
Advertisment
  • ಐಶ್ವರ್ಯ ರೈ, ಆರಾಧ್ಯರನ್ನ ಮಾತಾಡಿಸಲಿಲ್ವಾ ಅಮಿತಾಬ್ ಬಚ್ಚನ್?
  • ಬಚ್ಚನ್​ ಫ್ಯಾಮಿಲಿ ಫೋಟೋಗಳಲ್ಲಿ ಐಶ್ವರ್ಯ ರೈ, ಮೊಮ್ಮಗಳಿಲ್ಲ
  • ಅಪ್ಪ, ಅಮ್ಮ, ಸಹೋದರಿ ಜೊತೆ ಮದುವೆಗೆ ಬಂದಿದ್ದ ಅಭಿಷೇಕ್

ಮುಂಬೈನಲ್ಲಿ ನಡೆದ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಮಹೋತ್ಸವದಲ್ಲಿ ಇಡೀ ದೇಶದ ಗಣ್ಯರೇ ಭಾಗಿಯಾಗಿದ್ದಾರೆ. ಇದರಲ್ಲಿ ಸಿನಿಮಾ ಸ್ಟಾರ್ಸ್​, ಕ್ರಿಕೆಟರ್ಸ್​, ಉದ್ಯಮಿಗಳು ಸೇರಿದಂತೆ ಹಾಲಿವುಡ್​ ಸ್ಟಾರ್ಸ್​ ಕೂಡ ಭಾಗಿಯಾಗಿದ್ದರು. ಈ ಸಂಭ್ರಮದ ಮದುವೆಯಲ್ಲಿ ಬಾಲಿವುಡ್​ ಬಿಗ್ ಬಿ ಅಮಿತಾಬ್ ಬಚ್ಚನ್ ಫ್ಯಾಮಿಲಿಯ ಅದೊಂದು ವಿಷ್ಯ ಎಲ್ಲರನ್ನ ಅಚ್ಚರಿ ಮೂಡಿಸಿದೆ. ಅದು ನಿಜನೋ ಅಥವಾ ಸುಳ್ಳೋ ಎಂಬುದು ಯಾರಿಗೂ ತಿಳಿದಿಲ್ಲ.

Advertisment

ಇದನ್ನೂ ಓದಿ:ಇಂದು ಭಾರತ-ಪಾಕ್ ಮಧ್ಯೆ​ ಫೈನಲ್ ಪಂದ್ಯ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ..?

publive-image

ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್​ ಮತ್ತು ಪತ್ನಿ ಐಶ್ವರ್ಯ ರೈ ನಡುವಿನ ದಾಂಪತ್ಯ ಬಿರುಕು ಮೂಡಿದೆಯಾ, ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಾ, ಇಲ್ಲವಾದರೆ ಡಿವೋರ್ಸ್​ ಪಡೆದುಕೊಂಡಿದ್ದಾರಾ, ಅಮಿತಾಬ್ ಬಚ್ಚನ್ ಅವರ ಮುದ್ದಿನ ಮೊಮ್ಮಗಳು ಆರಾಧ್ಯ ಸದ್ಯಕ್ಕೆ ಯಾರ ಜೊತೆ ಇದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಭಾರೀ ಸಂಶಗಳನ್ನು ಮೂಡಿಸಿದೆ. ಈ ಎಲ್ಲ ಅನುಮಾನಗಳು ಬರುವುದಕ್ಕೆ ಮುಖ್ಯ ಕಾರಣ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್​ ಮದುವೆ ಆಗಿದೆ.

ಇದನ್ನೂ ಓದಿ: ಟ್ರಕ್ಕಿಂಗ್​ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು

Advertisment

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಂಭ್ರಮಕ್ಕೆ ಇಡೀ ಬಾಲಿವುಡ್​ ಸ್ಟಾರ್ಸ್​ ಕುಟುಂಬ ಸಮೇತ ಭಾಗಿಯಾಗಿದ್ದರು. ಇದರಲ್ಲಿ ಅಮಿತಾಬ್ ಬಚ್ಚನ್ ಫ್ಯಾಮಿಲಿ ಕೂಡ ಆಗಮಿಸಿತ್ತು. ಆದರೆ ಈ ತುಂಬು ಫ್ಯಾಮಿಲಿಯಿಂದ ಅಭಿಷೇಕ್​ ಬಚ್ಚನ್ ಅವರ ಪತ್ನಿ ಐಶ್ವರ್ಯ ರೈ, ಮಗಳು ಆರಾಧ್ಯ ಪ್ರತ್ಯೇಕವಾಗಿ ಮದುವೆಗೆ ಬಂದಿದ್ದರು. ಮದುವೆಯಲ್ಲಿ ಎಲ್ಲರನ್ನು ಮಾತನಾಡಿಸಿದ ಅಮಿತಾಬ್ ಬಚ್ಚನ್ ದೀಪಿಕಾ ಪಡುಕೋಣೆಯನ್ನು ಖುಷಿಯಿಂದ ಮಾತಾಡಿಸಿದರು. ಆದರೆ ಮೊಮ್ಮಗಳನ್ನು, ಸೊಸೆಯನ್ನು ಮಾತಾಡಿಸಿದ್ದು ಏನು ಕಾಣಲಿಲ್ಲ. ಇದರಿಂದ ಬಚ್ಚನ್ ಫ್ಯಾಮಿಲಿಯಿಂದ ಸೊಸೆ ಐಶ್ವರ್ಯ, ಮಗಳನ್ನು ಕರೆದುಕೊಂಡು ಹೊರ ಬಂದಿದ್ದಾರಾ, ಇದು ಡಿವೋರ್ಸ್​ ಸೂಚನೆನಾ ಎನ್ನುವ ಅನುಮಾನ ವ್ಯಕ್ತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಇಂದು ಭಾರತ-ಪಾಕ್ ಪಂದ್ಯ; ​ಎಲ್ಲಿ, ಯಾವಾಗ ನಡೆಯುತ್ತೆ? ನೇರಪ್ರಸಾರ ಯಾವ ಚಾನೆಲ್​​ನಲ್ಲಿ ನೋಡಬಹುದು?

Advertisment


">July 12, 2024

ಅನಂತ್ ಅಂಬಾನಿ ಮದುವೆಗೆ ಮಗಳು ಶ್ವೇತಾ‌ನಂದ, ಅಳಿಯ ಹಾಗೂ ಅವರ ಮಕ್ಕಳು ಜೊತೆ ಅಮಿತಾಬ್ ಬಚ್ಚನ್- ಜಯಾ ದಂಪತಿ ಆಗಮಿಸಿದ್ದರು. ಇವರ ಜೊತೆ ಅಭಿಷೇಕ್ ಬಚ್ಚನ್ ಕೂಡ ಇದ್ದರು. ಫ್ಯಾಮಿಲಿ ಫೋಟೋದಲ್ಲಿ ಅಭಿಷೇಕ್ ಜೊತೆ ಐಶ್ವರ್ಯ ರೈ, ಮಗಳು ಇರಲಿಲ್ಲ. ಹಲವು ದಿನಗಳಿಂದ ಅಭಿ- ಐಶ್​ ನಡುವೆ ಡಿವೋರ್ಸ್ ಗುಮಾನಿ ಇದೆ. ಹೀಗಾಗಿ ಇಬ್ಬರು ಬೇರೆ ಬೇರೆ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಗಳ ಶಾಲಾ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದಂಪತಿ ಆಗ ಬೇರೆ ಬೇರೆ ಕಾರಿನಲ್ಲಿ ಆಗಮಿಸಿದ್ದರು. ಇದರಿಂದ ಬಚ್ಚನ್ ಫ್ಯಾಮಿಲಿಯಲ್ಲಿ ಡಿವೋರ್ಸ್​ ಮಾತುಗಳು ಏನಾದರು ನಡೆಯುತ್ತಿವೆಯಾ ಎನ್ನುವುದು ಫ್ಯಾನ್ಸ್ ಮಾತಾಗಿದೆ. ಅಲ್ಲದೇ ಅಂಬಾನಿ ಸಂಭ್ರಮದಲ್ಲಿನ ಬಚ್ಚನ್ ಫ್ಯಾಮಿಲಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment