ಬೆಂಗಳೂರಲ್ಲಿ ಅಣ್ಣ-ತಮ್ಮನ ಡ್ರಗ್​ ಪೆಡ್ಲಿಂಗ್.. ಜೈಲಲ್ಲಿದ್ಕೊಂಡೇ ಕೆಟ್ಟ ದಂಧೆಗೆ ಇಳಿದಿದ್ದು ಹೇಗೆ..?

author-image
Ganesh
Updated On
ಬೆಂಗಳೂರಲ್ಲಿ ಅಣ್ಣ-ತಮ್ಮನ ಡ್ರಗ್​ ಪೆಡ್ಲಿಂಗ್.. ಜೈಲಲ್ಲಿದ್ಕೊಂಡೇ ಕೆಟ್ಟ ದಂಧೆಗೆ ಇಳಿದಿದ್ದು ಹೇಗೆ..?
Advertisment
  • ಅಣ್ಣ ರೂಪೇಶ್ ಪರಾರಿ.. ತಮ್ಮ ಅರುಣ್ ಅರೆಸ್ಟ್..
  • ಮುಳಬಾಗಿಲು ಪೊಲೀಸರ ಕೈಗೆ ಲಾಕ್ ಆದ ಗ್ಯಾಂಗ್
  • ಆಂಧ್ರ ಟು ಬೆಂಗಳೂರು ಗಾಂಜಾ ಸಪ್ಲೈ ಕೇಸ್ ಕೇಸ್

ಬೆಂಗಳೂರಿನ ಕುಖ್ಯಾತ ಡ್ರಗ್ ಪೆಡ್ಲಿಂಗ್ ಗ್ಯಾಂಗ್ ( Drug peddling gang) ಒಂದು ಮುಳಬಾಗಿಲಿನ ಪೊಲೀಸರ ಕೈಗೆ ಲಾಕ್ ಆಗಿದೆ. ಸಿಂಥೆಟಿಕ್ ಡ್ರಗ್ ಪೆಡ್ಲರ್​ (Synthetic drug peddler) ರೂಪೇಶ್ ಸಹೋದರ ಅರುಣ್ ಸೇರಿ ಸಂಜಯ್, ಗೋಕುಲ್ ಅರೆಸ್ಟ್ ಆಗಿದ್ದಾರೆ.

ಇವರು ಬೆಂಗಳೂರು ಪೊಲೀಸರಿಗೆ ಮುಖ್ಯವಾಗಿ ಬೇಕಾಗಿದ್ದರು. ಬಂಧಿತ ಆರೋಪಿ ಅರುಣ್​, ಕುಖ್ಯಾತ ಸಿಂಥೆಟಿಕ್ ಡ್ರಗ್ ಪೆಡ್ಲರ್ ರೂಪೇಶ್​​ನ ಸಹೋದರ ಆಗಿದ್ದಾನೆ. ನೈಜೀರಿಯನ್ ಪ್ರಜೆಗಳಿಗೆ ಸಿಂಥೆಟಿಕ್ ಡ್ರಗ್ ಖರೀದಿಸಿ ಮಾರುತ್ತಿದ್ದ ರೂಪೇಶ್​ ಕಳೆದ ವರ್ಷ ಪೊಲೀಸರ ಅತಿಥಿ ಆಗಿದ್ದ. ಚೆನ್ನಮ್ಮ ಅಚ್ಚುಕಟ್ಟು ಠಾಣೆ ಪೊಲೀಸರು, 120 ಗ್ರಾಂ MDMA ಸಮೇತ ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು.

ಜೈಲು ಸೇರಿದ್ದ ರೂಪೇಶ್​ನನ್ನು ಸಹೋದರ ಅರುಣ್ ಆಗಾಗ ಭೇಟಿ ಆಗ್ತಿದ್ದ. ಜೈಲು ಸೇರಿದ್ದ ರೂಪೇಶನಿಗೆ ಆಂಧ್ರ ಪ್ರದೇಶದ ವೈಜಾಗ್ ಮೂಲದ ಗಾಂಜಾ ಪೆಡ್ಲರ್ ಪರಿಚಯವಾಗಿದ್ದರು. ಜೈಲಿನಲ್ಲಿ ಅಣ್ಣ ರೂಪೇಶನಿಗೆ ಪರಿಚಯವಾಗಿದ್ದ ಪೆಡ್ಲರ್ಸ್ ಸಹಾಯದಿಂದ ಅರುಣ್, ದಂಧೆಗೆ ಮಾಡಲು ಶುರುಮಾಡ್ಕೊಂಡಿದ್ದ.

ಇದನ್ನೂ ಓದಿ:ಬೆಡ್, ಟಾಯ್ಲೆಟ್, ಮಿನಿ ಫ್ರಿಡ್ಜ್.. ಅಮೆರಿಕ B-2 ಯುದ್ಧ ವಿಮಾನದೊಳಗೆ ಏನೇನಿದೆ..?

publive-image

ಆಂಧ್ರದ ವೈಜಾಗ್​ನಿಂದ ಗಾಂಜಾ ಖರೀದಿಸಿ ಕೋಲಾರ ಮೂಲಕ ಬೆಂಗಳೂರಿಗೆ ಸಪ್ಲೈ ಮಾಡಲು ಶುರುಮಾಡಿದ್ದ. ಜೈಲಿನಲ್ಲಿದ್ದುಕೊಂಡೇ ಸಹೋದರ ಅರುಣ್ ಮತ್ತು ಗ್ಯಾಂಗ್​ನಿಂದ ಗಾಂಜಾ ಪೆಡ್ಲಿಂಗ್ ಮಾಡಲು ರೂಪೇಶ್ ಪ್ಲಾನ್ ಮಾಡಿದ್ದ. ಇತ್ತಿಚೆಗೆ ರೂಪೇಶ್ ಜೈಲಿನಿಂದ ಹೊರಬಂದು ತಮ್ಮನಿಗೆ ಸಹಾಯ ಮಾಡಲು ಶುರುಮಾಡಿದ್ದ.

ಬೆಂಗಳೂರು ಪೊಲೀಸರು ಕುಖ್ಯಾತ ಪೆಡ್ಲರ್ ಸಹೋದರರ ಬೆನ್ನುಬಿದ್ದಿದ್ದರು. ಇದೀಗ ಆಂಧ್ರದಿಂದ ಹನ್ನೊಂದು ಲಕ್ಷ ಮೌಲ್ಯದ ಗಾಂಜಾ ತರುವ ವೇಳೆ ಮುಳಬಾಗಿಲು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಆಂಧ್ರದಿಂದ ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಮುಳಬಾಗಿಲು ಸರ್ಕಲ್ ಇನ್ಸ್​ಪೆಕ್ಟರ್ ಸತೀಶ್ ಟೀಂನಿಂದ ದಾಳಿ ನಡೆದಿದೆ. ದಾಳಿ ವೇಳೆ ಕುಖ್ಯಾತ ಪೆಡ್ಲರ್ ರೂಪೇಶ್ ಪರಾರಿ ಆಗಿದ್ದು, ಸಹೋದರ ಅರುಣ್ ಲಾಕ್ ಆಗಿದ್ದಾನೆ. ಅರುಣ್ ಜೊತೆ ಸಹಚರರಾದ ಸಂಜಯ್, ಗೋಕುಲ್ ಕೂಡ ಸಿಕ್ಕಿಬಿದ್ದಿದ್ದಾರೆ. NDPS ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ರೂಪೇಶ್ ರಾಜಣ್ಣ ಪೊಲೀಸ್ ವಶಕ್ಕೆ.. ಜಮೀರ್ ಆಪ್ತ ಸರ್ಫರಾಜ್ ಮಾಡಿದ ಗಂಭೀರ ಆರೋಪ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment