IIM ಹಾಸ್ಟೆಲ್​ನಲ್ಲೇ ಕೊಟ್ಟರೂ ಮತ್ತು ಬರೋ ಡ್ರಿಂಕ್ಸ್​.. ಕೋಲ್ಕತ್ತಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ!

author-image
Bheemappa
IIM ಹಾಸ್ಟೆಲ್​ನಲ್ಲೇ ಕೊಟ್ಟರೂ ಮತ್ತು ಬರೋ ಡ್ರಿಂಕ್ಸ್​.. ಕೋಲ್ಕತ್ತಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ!
Advertisment
  • ಬಾಲಕರ ಹಾಸ್ಟೆಲ್​ಗೆ ಯುವತಿ ಬಂದಿರೋದು ಯಾಕೆ.?
  • ಯಾರಿಗೂ ಏನು ಹೇಳಬಾರದೆಂದು ಯುವತಿಗೆ ಬೆದರಿಕೆ
  • ಸೋಶಿಯಲ್ ಮೀಡಿಯಾ ಮೂಲಕ ಇಬ್ಬರಿಗೆ ಪರಿಚಯ

ಕೋಲ್ಕತ್ತಾ ಕಾನೂನು ಕಾಲೇಜು ವಿದ್ಯಾರ್ಥಿನಿಯ ಮೇಲೆ ಕ್ಯಾಂಪಸ್ ಆವರಣದಲ್ಲಿ ಅಸಭ್ಯವಾಗಿ ವರ್ನತೆ ಮಾಡಲಾಗಿತ್ತು. ಇದು ನಡೆದು ಕೆಲವೇ ಕೆಲವು ದಿನಗಳ ನಂತರ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಐಐಎಂ ಜೋಕಾ ಬಾಲಕರ ಹಾಸ್ಟೆಲ್‌ಗೆ ಯುವತಿಯನ್ನು ಕರೆಸಿ ನಂತರ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಯುವತಿ ಹಾಸ್ಟೆಲ್‌ಗೆ ಹೋದಾಗ ಮತ್ತು ಬರಿಸುವ ಪಾನೀಯ ನೀಡಲಾಗಿದೆ. ಬಳಿಕ ಯುವತಿ ಪ್ರಜ್ಞೆ ತಪ್ಪಿದ ಮೇಲೆ ಕೃತ್ಯ ಎಸಗಲಾಗಿದೆ. ಇದು ಯುವತಿಗೆ ಪ್ರಜ್ಞೆ ಬಂದ ನಂತರ, ತನ್ನ ಮೇಲೆ ಏನೋ ಅಸಹ್ಯಕರವಾಗಿ ದೌರ್ಜನ್ಯ ನಡೆದಿದೆ ಎಂದು ಯುವತಿಗೆ ಅರಿವಾಗಿದೆ. ಹರಿದೇವ್‌ಪುರ ಪೊಲೀಸ್ ಠಾಣೆಯಲ್ಲಿ ಯುವತಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಪೊಲೀಸರ ಪ್ರಕಾರ, ಇಬ್ಬರೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾಗಿದ್ದರು. ಯುವತಿ ಶುಕ್ರವಾರ (ಜುಲೈ 11) ಸಂಜೆ ವೈಯಕ್ತಿಕ ವಿಷಯದ ಬಗ್ಗೆ ಸಲಹೆ ಪಡೆಯಲು ವಿದ್ಯಾರ್ಥಿಯೊಬ್ಬನನ್ನು ಭೇಟಿಯಾಗಿದ್ದರು. ನಂತರ ಆಕೆಯನ್ನು ಹಾಸ್ಟೆಲ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯ ಮೇಲೆ ಕಿರುಕುಳ ನಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಸ್ಥಾನ ಇಲ್ವಾ.. ಇನ್ನು ಎಷ್ಟು ವರ್ಷ ಕಾಯಬೇಕು?

publive-image

ಮಹಿಳೆ ಎಫ್‌ಐಆರ್‌ನಲ್ಲಿ ಕೌನ್ಸೆಲಿಂಗ್ ಸೆಷನ್​ಗಾಗಿ ಹಾಸ್ಟೆಲ್‌ಗೆ ಕರೆಸಲಾಗಿತ್ತು ಎಂದು ಹೇಳಿದ್ದಾಳೆ. ನಂತರ ಹಾಸ್ಟೆಲ್‌ನಲ್ಲಿ ಮತ್ತು ಬರಿಸುವ ಪಾನೀಯ ಸೇವಿಸಿದ ನಂತರ ನಂತರ ಪ್ರಜ್ಞಾಹೀನಳಾದೆ. ಪ್ರಜ್ಞೆ ಮರಳಿದ ನಂತರ ಮಹಿಳೆ ತನ್ನ ಮೇಲೆ ಏನೋ ನಡೆದಿದೆ ಎಂದು ಅರಿವಾಗಿದೆ ಎಂದು ಉಲ್ಲೇಖಿಸಿದ್ದಾಳೆ.

ಐಐಎಂ- ಕೋಲ್ಕತ್ತಾದ ಬಾಲಕರ ಹಾಸ್ಟೆಲ್ ಒಳಗೆ ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾರಿಗಾದರೂ ಈ ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment