/newsfirstlive-kannada/media/post_attachments/wp-content/uploads/2025/07/non-stick-pan.jpg)
ಅಡುಗೆ ಮನೆಯಲ್ಲಿ ನಾನ್-ಸ್ಟಿಕ್ ಪ್ಯಾನ್ ಕಡ್ಡಾಯವಾಗಿ ಇರುತ್ತೆ. ಅದರಲ್ಲಿ ನೆಚ್ಚಿನ ಅಡುಗೆ ಮಾಡೋದರಿಂದ ದೊಡ್ಡ ಖುಷಿ. ಆದ್ರೆ ನೆನಪಿರಲಿ ನಾನ್ ಸ್ಟಿಕ್ ಪ್ಯಾನ್ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದನ್ನು ಅನೇಕರು ಅನುಭವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ರಾವಣ ಆದ್ರೆ.. ಹನುಮಾನ್, ಲಕ್ಷ್ಮಣ, ಸೂರ್ಪನಕಿ ಪಾತ್ರ ಮಾಡ್ತಿರೋದು ಯಾರು?
ಅಮೆರಿಕದ ಪಾಯ್ಸನ್ ಸೆಂಟರ್ ನೀಡಿರುವ ವರದಿ ಪ್ರಕಾರ, ನೂರಾರು ಮಂದಿಯಲ್ಲಿ ಪಾಲಿಮರ್ ಫ್ಯೂಮ್ ಫೀವರ್ ಅನ್ನೋ ಅಪರೂಪದ ಕಾಯಿಲೆ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಬಿಸಿಯಾದ ನಾನ್ ಸ್ಟಿಕ್ ಪ್ಯಾನ್ನಿಂದ ಆಚೆ ಬರುವ ಹೊಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರ ಹೊಗೆಯನ್ನು ಸೇವಿಸಿದ ಮಹಿಳೆಯರಲ್ಲಿ ಈ ರೀತಿಯ ಒಂದು ಫೀವರ್ (ಜ್ವರ) ಕಾಣಿಸಿಕೊಂಡಿದೆ. ನಾನ್ ಸ್ಟಿಕ್ ಪ್ಯಾನ್ಗೆ ಮಾಡಿರುವ ಕೋಟಿಂಗ್ನಲ್ಲಿ ಇದೆಯಂತೆ ವಿಷ.
ಹೌದು, ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪ್ಯಾನ್ಗಳು ಹೆಚ್ಚು ಸದ್ದು ಮಾಡುತ್ತಿವೆ. ಆಮ್ಲೆಟ್ ದೋಸೆ ಗರಿಗರಿ ಐಟಮ್ಸ್ಗಳನ್ನ ಮಾಡುವುದು ಅಂದ್ರೆ ಹೆಣ್ಣು ಮಕ್ಕಳಿಗೆ ಸಂಭ್ರಮ. ಟೆಫ್ಲಾನ್ ಪ್ಯಾನ್ ಸೇರಿದಂತೆ ಎಲ್ಲಾ ಪ್ಯಾನ್ಗಳು ಪಿಟಿಎಫ್ಇ ಅನ್ನೋ ಅಂಶದಿಂದ ಕೋಟಿಂಗ್ ಆಗಿರುತ್ತದೆ. ಇದರಲ್ಲಿ ಅನೇಕ ವಿಷಕಾರಿ ಅಂಶಗಳು ಇರುತ್ತವೆ. ನೀವು ಒಲೆಯ ಮೇಲೆ ಪ್ಯಾನ್ ಬಿಸಿಗೆ ಇಟ್ಟಾಗ ಈ ಕೋಟಿಂಗ್ನಲ್ಲಿರುವ ಅಂಶ ಹೊಗೆಯೊಂದಿಗೆ ಸೇರಿ ಆಚೆ ಬರುತ್ತೆ. ಅದನ್ನು ಉಸಿರಿನೊಂದಿಗೆ ನಮ್ಮ ದೇಹ ಸೇರಿದಾಗ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಾನ್ಸ್ಟಿಕ್ ಬಳಸೋದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತೆ?
ಪ್ಯಾನ್ ಬಿಸಿಯಿಂದಾಗಿ ಹೊಗೆ ಮೂಲಕ ಹೊರ ಬರುವ ವಿಷಕಾರಿ ಹೊಗೆಯನ್ನು ಸೇವಿಸುವುದರಿಂದ ಉಸಿರಾಟದಲ್ಲಿ ತೊಂದರೆ, ಕಫಾ, ತಲೆನೋವು, ತಲೆ ಸುತ್ತುವುದು, ಸುಸ್ತು, ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಫರಿದಾಬಾದ್ನ ಏಷಿಯಾ ಆಸ್ಪತ್ರೆಯ ವೈದ್ಯರಾದ ಸಂತೋಷ್ ಕುಮಾರ್ ಅಗ್ರವಾಲ್ ಹೇಳಿದ್ದಾರೆ. ಹೀಗಾಗಿ ಆದಷ್ಟು ನಾನ್ ಸ್ಟಿಕ್ ಪ್ಯಾನ್ನಿಂದ ಗೃಹಿಣಿಯರು ದೂರ ಉಳಿದಲ್ಲಿ ತುಂಬಾ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ದಶಕಗಳಿಂದ ಜನರು ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸ್ತಿದ್ದಾರೆ. ಇದರಲ್ಲಿ ಆಹಾರ ಅಂಟಿಕೊಳ್ಳೋದಿಲ್ಲ. ಹಾಗಾಗಿ ಅಡುಗೆ ಮಾಡೋದು ಸುಲಭ. ಜತೆಗೆ ಸ್ವಚ್ಛಗೊಳಿಸೋದು ಸುಲಭ. ಇದೇ ಕಾರಣಕ್ಕೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆಗಳು ಜಾಗ ಪಡೆದಿವೆ. ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ನಾನ್ ಸ್ಟಿಕ್ ಪಾತ್ರೆಗಳನ್ನು ನಾವು ಕಾಣಬಹುದು. ನಾನ್ ಸ್ಟಿಕ್ ಪಾತ್ರೆಗಳಿಗೆ ಮರದ ಸೌಟುಗಳನ್ನು ಬಳಸ್ಬೇಕು. ಇದರ ಬಗ್ಗೆ ಸೂಕ್ತ ಮಾಹಿತಿ ಜನರಿಗೆ ಇಲ್ಲ. ಈ ಕಾರಣದಿಂದಲೇ ನಾನ್ ಸ್ಟಿಕ್ ಪಾತ್ರೆಗಳಿಗೆ ಸ್ಟೀಲ್ ಸೌಟು ಬಳಸುತ್ತಾರೆ. ಕ್ಲೀನ್ ಮಾಡುವ ಭರಾಟೆಯಲ್ಲಿ ಚೆನ್ನಾಗಿ ಪಾತ್ರೆಯನ್ನು ಉಜ್ಜುತ್ತಾರೆ. ಇದ್ರಿಂದಾಗಿ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಗೀರು ಕಾಣಿಸಿಕೊಳ್ಳುತ್ತೆ.
ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಗೀರು ಬಿದ್ರೆ ಏನಾಗುತ್ತೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಟೆಫ್ಲಾನ್ ಲೇಪಿತ ಪ್ಯಾನ್ ಮೇಲೆ ಒಂದು ಗೀರು 9,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಆಹಾರಕ್ಕೆ ಬಿಡುಗಡೆ ಮಾಡುತ್ತದೆ. ಗೀರು ಹೆಚ್ಚಾಗ್ತಿದ್ದಂತೆ ಮೈಕ್ರೋಪ್ಲಾಸ್ಟಿಕ್ ಕಣ ಆಹಾರ ಸೇರುವ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಪ್ರತಿ ಬಾರಿ ಅಡುಗೆ ಮಾಡುವ ಸಮಯದಲ್ಲಿ 2 ಮಿಲಿಯನ್ ಮೈಕ್ರೋಪ್ಲಾಸ್ಟಿಕ್ ಕಣ ರಿಲೀಸ್ ಆಗುತ್ತಿದ್ದು, ಇದು ಆರೋಗ್ಯಕ್ಕೆ ಅಪಾಯ. ಯಾವುದೇ ಕಾರಣಕ್ಕೂ ಒಂದೇ ಒಂದು ಗೀರಾದ್ರೂ ಆ ನಾನ್ ಸ್ಟಿಕ್ ಪಾತ್ರೆಯನ್ನು ಬಳಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ