ಹುಷಾರ್​ ಕಣ್ರೀ.. ಕಪ್ಪಗೆ ಆಗಿಬಿಡ್ತೀನಿ ಅಂತ ಸೂರ್ಯನಿಂದ ದೂರವೇ ಇದ್ದವ ಮಹಿಳೆಗೆ ಬಿಗ್ ಶಾಕ್!

author-image
admin
Updated On
ಹುಷಾರ್​ ಕಣ್ರೀ.. ಕಪ್ಪಗೆ ಆಗಿಬಿಡ್ತೀನಿ ಅಂತ ಸೂರ್ಯನಿಂದ ದೂರವೇ ಇದ್ದವ ಮಹಿಳೆಗೆ ಬಿಗ್ ಶಾಕ್!
Advertisment
  • ಸೂರ್ಯನ ಕಿರಣಗಳು ಚರ್ಮದ ಮೇಲೆ ಬಿದ್ದರೆ ಕಪ್ಪಗೆ ಆಗಿಬಿಡ್ತೀವಿ
  • ಈಕೆ ಮಂಚದಿಂದ ಎದ್ದು ಕೂತರೆ ಮೈ ಮೂಳೆಗಳೇ ಪೀಸ್​ ಪೀಸ್​!
  • ಅತಿಯಾದ ಧೂಮಪಾನ ಹಾಗೂ ಮಧ್ಯಪಾನ ಸಹ ಇದಕ್ಕೆ ಕಾರಣ

ಎಷ್ಟೋ ಮಂದಿ ಹುಡುಗೀರು, ಮಹಿಳೆಯರು ಸೌಂದರ್ಯ ಪ್ರಜ್ಞೆ ಸೂರ್ಯನನ್ನ ದ್ವೇಷಿಸುವಂತಿದೆ. ಸೂರ್ಯನ ಗಾಢ ಕಿರಣಗಳು ಚರ್ಮದ ಮೇಲೆ ಬಿದ್ದರೆ ಕಪ್ಪಗೆ ಆಗಿಬಿಡ್ತೀವಿ ಅಂತ ಹೆದರುತ್ತಾರೆ. ಇದೇ ಕಾರಣಕ್ಕೆ ವೇಲ್​​ನಿಂದಲಾದರೂ ಮುಖವನ್ನು ಮುಚ್ಚಿಕೊಂಡೇ ಹೊರಗೆ ಕಾಲಿಡುತ್ತಾರೆ. ಆದರೆ. ಸೂರ್ಯನನ್ನ ಅಷ್ಟು ದ್ವೇಷಿಸೋದು ಒಳ್ಳೆಯದಲ್ಲ ಅನ್ನೋ ಸಂಗತಿಯನ್ನ ಇದೀಗ ಚೀನಾದ ಈ ಮಹಿಳೆ ಸಾರಿ, ಸಾರಿ ಹೇಳುತ್ತಿದ್ದಾಳೆ.

ಸೂರ್ಯನಿಂದ ದೂರವಿದ್ಳು.. ತುರ್ತು ನಿಗಾ ಘಟಕಕ್ಕೆ ಸೇರಿದ್ಳು
ಇದೇ ಮೇ 14ನೇ ತಾರೀಖು ಚೀನಾದ ಕ್ಸಿಂಗ್ಡು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಓರ್ವ ರೋಗಿ ದಾಖಲಾದ್ರು. ಆ ರೋಗಿಯ ಹಿನ್ನೆಲೆ ಕೇಳಿಯೇ ಅಲ್ಲಿನ ಸಾಂಪ್ರದಾಯಿಕ ಚೀನಾ ವೈದ್ಯಾಧಿಕಾರಿ ದಂಗಾಗಿ ಹೋಗಿದ್ದಾರೆ. ಲಾಂಗ್​ ಷುಆಂಗ್ ಅನ್ನೋ ಇದೇ 48 ವರ್ಷದ ಮಹಿಳೆ ಅಕ್ಷರಶಃ ಬದುಕಿದ್ದು ನರಕವನ್ನು ನೋಡುತ್ತಿದ್ದಾಳೆ. ಈಕೆ ಮಂಚದಿಂದ ಎದ್ದು ಕೂತರೂ, ಪಕ್ಕಕ್ಕೆ ತಿರುಗಿದ್ರೂ ಮೈ ಮೂಳೆಗಳೇ ಪೀಸ್​ ಪೀಸ್​ ಆಗುತ್ತಿವೆ. ಇದಕ್ಕೆಲ್ಲಾ ಕಾರಣ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಬಹುದೊಡ್ಡ ತಪ್ಪು. ಅದುವೇ ಸೂರ್ಯನಿಂದ ಸದಾ ದೂರವೇ ಇದ್ದಿದ್ದು.

publive-image

ಸರಿ ಸುಮಾರು 30 ವರ್ಷಗಳಿಂದಲೂ ಸೂರ್ಯನಿಂದ ದೂರ
ಸೂರ್ಯನ ಬೆಳಕಿಗೆ ಹೋಗಿ ಬಿಟ್ಟರೆ ತನ್ನ ಬಿಳಿ ಬಣ್ಣದ ಚರ್ಮ ಕಪ್ಪಾಗಿ ಹೋಗಬಹುದು ಅನ್ನೋ ಭಯಕ್ಕೆ ಲಾಂಗ್ ಷುಅಂಗ್ ಮನೆಯಿಂದ ಆಚೆಯೇ ಬರ್ತಾ ಇರ್ಲಿಲ್ಲ. ಇದು ಎಂಥಾ ಆರೋಗ್ಯ ಸಮಸ್ಯೆಗೆ ತಂದು ನಿಲ್ಲಿಸಿದೆ ಎಂದರೆ ಅತಿಯಾದ ವಿಟಮಿನ್ D ಕೊರತೆಯಿಂದ ಇದೀಗ ಲಾಂಗ್ ಷುಅಂಗ್ ಬಳಲುವಂತಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ನಮ್ಮ ಮೂಳೆಗಳು ಪುನರ್​ಉತ್ಪತ್ತಿ ಆಗುತ್ತವೆ ಎನ್ನುತ್ತದೆ ವೈದ್ಯಕೀಯ ಲೋಕ. ಆದರೇ, 30 ವರ್ಷಗಳ ಬಳಿಕ ಅದು ಪ್ರತೀ ವರ್ಷ ಶೇಕಡಾ 0.5 ರಿಂದ 1ರಷ್ಟು ಸವೆಯೋದಕ್ಕೆ ಶುರುವಾಗುತ್ತದೆ.

publive-image

ಇದನ್ನೂ ಓದಿ: ನಟ ಮಡೆನೂರು ಮನುಗೆ ಬಿಗ್ ಶಾಕ್.. ಪೊಲೀಸ್‌ ವಿಚಾರಣೆಯಲ್ಲಿ ಸಂತ್ರಸ್ತೆ ಸಾಕ್ಷ್ಯ ದಾಖಲು; ಹೇಳಿದ್ದೇನು?  

ಸೂರ್ಯನ ಬೆಳಕು ಮೈಮೇಲೆ ಬೀಳದೇ ಹೋದರೆ ಏನಾಗುತ್ತೆ?
ಕ್ಯಾಲ್ಸಿಯಂ ಕೊರತೆ, ಸೂರ್ಯ ಕಿರಣಗಳಿಗೆ ದೂರ ಉಳಿಯುವಂತಹ ಕಾರಣಗಳಿಗೆ ಮನುಷ್ಯನಲ್ಲಿ ವಿಟಮಿನ್ D ಸಮಸ್ಯೆ ಎದುರಾಗುತ್ತದೆ. ಅತಿಯಾದ ಧೂಮಪಾನ ಹಾಗೂ ಮಧ್ಯಪಾನ ಸಹ ಮೂಳೆಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಸದ್ಯ, ಚೀನಾದ ಲಾಂಗ್ ಷುಅಂಗ್ ವಿಟಮಿನ್ D ಕೊರತೆಯಿಂದಾಗಿ ಗಂಭೀರವಾದ ಆಸ್ಟಿಯೊಪೊರೋಸಿಸ್​ ಸ್ಥಿತಿಗೆ ತಲುಪಿದ್ದಾರೆ. ಈ ಪ್ರಕರಣ ಚೀನಾದಲ್ಲಿ ಹೊಸದೊಂದು ಚರ್ಚೆಯನ್ನೇ ಹುಟ್ಟು ಹಾಕಿದೆ. ಇದೀಗ ಚೀನಿ ಮಹಿಳೆಯರು ಅತಿ ಹೆಚ್ಚು ಸೂರ್ಯ ಕಿರಣಗಳಿಗೆ ಮೈವೊಡ್ಡಿ ನಿಲ್ಲುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment