Advertisment

ಭಾವನ ಜೊತೆ ಅಫೇರ್.. ಗಂಡನಿಗೆ ಮುಹೂರ್ತ ಇಟ್ಟ ಸುಂದರ ಹೆಂಡತಿ ಅರೆಸ್ಟ್ ಆಗಿದ್ದೇಗೆ?

author-image
Veena Gangani
Updated On
ಭಾವನ ಜೊತೆ ಅಫೇರ್.. ಗಂಡನಿಗೆ ಮುಹೂರ್ತ ಇಟ್ಟ ಸುಂದರ ಹೆಂಡತಿ ಅರೆಸ್ಟ್ ಆಗಿದ್ದೇಗೆ?
Advertisment
  • 36 ವರ್ಷದ ಪತಿ ಬಲಿಯಾಗಿದ್ದು ಹೇಗೆ ಗೊತ್ತಾ?
  • ತನ್ನ ಗಂಡನ ಪ್ರಾಣವನ್ನೇ ತೆಗೆದ ಸುಂದರ ಹೆಂಡತಿ
  • ಈ ಕೇಸ್​ನಲ್ಲಿ ಆರೋಪಿಗಳೇ ತಪ್ಪು ಒಪ್ಪಿಕೊಂಡಿದ್ದೇಗೆ?

ವಿದ್ಯುತ್ ಶಾಕ್​ನಿಂದ ಜೀವಬಿಟ್ಟಿದ್ದ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ದೆಹಲಿಯಲ್ಲಿ 36 ವರ್ಷದ ವ್ಯಕ್ತಿಯು ವಿದ್ಯುತ್ ಶಾಕ್​ನಿಂದ ಸಾವನ್ನಪ್ಪಿದ್ದ ಎಂಬ ಕೇಸ್​ನಲ್ಲಿ ಹೊಸ ಟ್ವಿಸ್ಟ್​ ಸಿಕ್ಕಿದೆ. ಅದು ಕೂಡ ಪೊಲೀಸ್ ತನಿಖೆ ಮೂಲಕ ತಿಳಿದು ಬಂದಿದ್ದೇ ಇದು ಒಂದು ಕೊಲೆ ಅಂತ. ಸುಂದರ ಹೆಂಡತಿಯೇ ಗಂಡನ ಪ್ರಾಣವನ್ನು ತೆಗೆದಿದ್ದಾಳೆ. ಪತಿಯ ಸೋದರ ಸಂಬಂಧಿಯ ಜೊತೆ ಸೇರಿ ಗಂಡನಿಗೆ ನಿದ್ರೆ ಮಾತ್ರೆ ನೀಡಿದ್ದಾರೆ. ಬಳಿಕ ಕರೆಂಟ್ ಶಾಕ್ ಕೊಟ್ಟು ಕೊಂದಿರುವುದಾಗಿ ಈಗ ಆರೋಪಿಗಳೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

Advertisment

ಇದನ್ನೂ ಓದಿ:ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಜುಲೈ 13ರಂದು ದೆಹಲಿಯ ಮಾತಾ ರೂಪಾನಿ ಮ್ಯಾಗೋ ಆಸ್ಪತ್ರೆಗೆ ಪತ್ನಿ ಸುಶ್ಮಿತಾ, ತನ್ನ ಪತಿ ಕರಣ್ ದೇವ್​ನನ್ನು ಕರೆತಂದಿದ್ದಳು. ಪತಿ ಕರಣ್ ದೇವ್‌ಗೆ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆಯಿತು ಎಂದು ಹೇಳಿದ್ದಳು. ಆದರೇ, ಕರಣ್ ದೇವ್​ನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಕರಣ್ ದೇವ್ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಬಳಿಕ ಕರಣ್ ದೇವ್ ಪೋಷಕರು ಕೂಡ ಶವದ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಆಕಸ್ಮಿಕವಾಗಿ ಕರೆಂಟ್ ಶಾಕ್​ನಿಂದ ಸಾವನ್ನಪ್ಪಿರುವುದರಿಂದ ಮರಣೋತ್ತರ ಪರೀಕ್ಷೆಯ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ, ಕರಣ್ ದೇವ್​ಗೆ ಇನ್ನೂ 36 ವರ್ಷ ವಯಸ್ಸು, ಸಾವಿನ ಸಂದರ್ಭದ ಬಗ್ಗೆ ಅನುಮಾನಗಳಿವೆ, ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ದೆಹಲಿ ಪೊಲೀಸರು ಒತ್ತಾಯ ಮಾಡಿದ್ದರು. ಹೀಗಾಗಿ ದೆಹಲಿಯ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದಕ್ಕೆ ಪತ್ನಿ ಸುಶ್ಮಿತಾ ಹಾಗೂ ಪತಿಯ ಸೋದರ ಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದ್ದರು.

publive-image

ಕರಣ್ ದೇವ್ ಸಾವನ್ನಪ್ಪಿದ ಮೂರು ದಿನಗಳ ನಂತರ, ಕರಣ್ ದೇವ್ ಸೋದರ ಕುನಾಲ್, ಪೊಲೀಸ್ ಠಾಣೆಗೆ ಬಂದು ತನ್ನ ಸೋದರನನ್ನು ಆತನ ಹೆಂಡತಿ ಸುಶ್ಮಿತಾಳೇ ಕೊಂದಿರುವುದಾಗಿ ಹೇಳಿದ್ದಾನೆ. ನಮ್ಮ ಸೋದರ ಸಂಬಂಧಿ ರಾಹುಲ್ ಜೊತೆಗೆ ಸೇರಿ ಪತ್ನಿ ಸುಶ್ಮಿತಾಳೇ ಗಂಡನ ಕೊಲೆ ಮಾಡಿದ್ದಾಳೆ ಎಂದು ಸಾಕ್ಷ್ಯವನ್ನು ಕುನಾಲ್ ಪೊಲೀಸರಿಗೆ ನೀಡಿದ್ದ. ಸುಶ್ಮಿತಾ ಹಾಗೂ ರಾಹುಲ್ ನಡುವೆ ಕೊಲೆ ನಡೆಸುವುದಕ್ಕೂ ಮುನ್ನ ಇನ್ ಸ್ಟಾಗ್ರಾಮ್ ನಲ್ಲಿ ಚಾಟ್ ನಡೆದಿದೆ. ಈ ಇನ್ ಸ್ಟಾಗ್ರಾಮ್ ಚಾಟ್ ನಲ್ಲೇ ಸುಶ್ಮಿತಾ- ರಾಹುಲ್ ಇಬ್ಬರೂ ಕರಣ್ ದೇವನನ್ನು ಕೊಲೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ.
ಸುಶ್ಮಿತಾ ಹಾಗೂ ರಾಹುಲ್ ನಡುವೆ ಅಫೇರ್ ಇತ್ತು. ಇದರಿಂದಾಗಿ ಇಬ್ಬರೂ ಸೇರಿ ಕರಣ್ ದೇವ್​ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು ಅನ್ನೋದು ಈ ಇನ್​ಸ್ಟಾಗ್ರಾಮ್​ ಚಾಟ್​ಗಳಿಂದಲೇ ಬಹಿರಂಗವಾಗಿತ್ತು. ಕರಣ್ ದೇವ್‌ಗೆ ಊಟದಲ್ಲಿ 15 ನಿದ್ರೆ ಮಾತ್ರೆಗಳನ್ನ ಹಾಕಿ ನೀಡಿದ್ದರು. ಇದರಿಂದ ಕರಣ್ ದೇವ್ ಪ್ರಜ್ಞಾಹೀನನಾಗಿದ್ದ. ನಿದ್ರೆ ಮಾತ್ರೆಯಿಂದ ವ್ಯಕ್ತಿ ಸಾವನ್ನಪ್ಪಲು ಎಷ್ಟು ಗಂಟೆ ಬೇಕಾಗುತ್ತೆ ಅನ್ನೋದನ್ನು ಸುಶ್ಮಿತಾ- ರಾಹುಲ್ ಗೂಗಲ್ ನಲ್ಲಿ ಚೆಕ್ ಮಾಡಿದ್ದರು. ಬಳಿಕ ಕರೆಂಟ್ ಶಾಕ್ ಕೊಟ್ಟು ಕರಣ್ ದೇವ್ ನನ್ನು ಹತ್ಯೆಗೈದ್ದಿದ್ದರು. ಆಕಸ್ಮಿಕವಾಗಿ ಕರಣ್ ದೇವ್, ಕರೆಂಟ್ ಶಾಕ್ ನಿಂದ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು.

Advertisment

ಇನ್​ಸ್ಟಾಗ್ರಾಮ್​ ಚಾಟ್ ನಲ್ಲೇ ಕೊಲೆಯ ಪ್ಲ್ಯಾನ್ ನಡೆದಿರುವುದು ಪೊಲೀಸರಿಗೆ ಗೊತ್ತಾದ ಮೇಲೆ, ಪತ್ನಿ ಸುಶ್ಮಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನ ಭಾವ ರಾಹುಲ್ ಜೊತೆಗೆ ಅಫೇರ್ ಇರೋದನ್ನು ಸುಶ್ಮಿತಾ ಒಪ್ಪಿಕೊಂಡಿದ್ದಾಳೆ. ತನ್ನ ಗಂಡ ಕರಣ್ , ತನಗೆ ಕರ್ವಾಚೌತ್​ಗೂ ಮುನ್ನ ದಿನ ಹೊಡೆದು ಬೈದ್ದಿದ್ದ. ಆಗ್ಗಾಗ್ಗೆ ಹಣ ಕೂಡ ಕೇಳುತ್ತಿದ್ದ. ಹೀಗಾಗಿ ಕೊಲೆ ಮಾಡಿದ್ದೇವೆ ಎಂದು ಸುಶ್ಮಿತಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಇದರಿಂದಾಗಿ ದೈಹಿಕ, ಭಾವನಾತ್ಮಕವಾಗಿ ಗಂಡ- ಹೆಂಡತಿ ನಡುವೆ ಅಂತರ ಏರ್ಪಟ್ಟಿತ್ತು ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಬಿಎನ್‌ಎಸ್‌ನ ಸೂಕ್ತ ಸೆಕ್ಷನ್ ಗಳಡಿ ಕೇಸ್ ದಾಖಲಿಸಲಾಗಿದೆ. ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾವು ವಿಸ್ತೃತವಾದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ದ್ವಾರಕ ಪ್ರದೇಶದ ಡಿಸಿಪಿ ಅಂಕಿತ್ ಸಿಂಗ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment