newsfirstkannada.com

ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ವೋಲ್ವೋ ಬಸ್​.. ಧಗ ಧಗ ಬೆಂಕಿ ಹೊತ್ತಿಕೊಂಡು ಮಹಿಳೆ ಸಜೀವ ದಹನ

Share :

Published January 14, 2024 at 8:02am

  ರಾತ್ರಿ 3 ಗಂಟೆ ಸುಮಾರಿಗೆ ಭೀಕರವಾಗಿ ರಸ್ತೆಗೆ ಉರುಳಿಬಿದ್ದ ಬಸ್

  ಬಸ್​ ಅಪಘಾತಲ್ಲಿ ಓರ್ವ ಮಹಿಳೆ ಸಾವು ಇನ್ನೊಬ್ಬರು ಗಂಭೀರ

  ಬಸ್​ ಚಾಲನೆ ವೇಳೆ ನಿದ್ದೆಗೆ ಜಾರಿದ ಡ್ರೈವರ್, ಉರುಳಿಬಿದ್ದ ಬಸ್​

ಹೈದರಾಬಾದ್: ಚಾಲಕನ ನಿಯಂತ್ರ ತಪ್ಪಿ ರಸ್ತೆಗೆ ಬಿದಿದ್ದ ಬಸ್​ ಬೆಂಕಿಯಿಂದ ಧಗಧಗಿಸಿದ ಪರಿಣಾಮ ಒಳಗಿದ್ದ ಮಹಿಳೆಯೊಬ್ಬರು ಸಜೀವವಾಗಿ ದಹನಗೊಂಡಿದ್ದಾರೆ. ಈ ಘಟನೆ ತೆಲಂಗಾಣದ ಗದ್ವಾಲ್​ ಜಿಲ್ಲೆಯ ಜೋಗುಲಾಂಬದ ಬಳಿ ನಡೆದಿದೆ.

ಜಗನ್​ ಅಮೆಜಾನ್ ಟ್ರಾವೆಲ್​​ನ ವೋಲ್ವೋ ಬಸ್​ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೈದರಾಬಾದ್​ನಿಂದ ಚಿತ್ತೂರಿಗೆ ತೆರಳುತ್ತಿತ್ತು. ಈ ವೇಳೆ ಗದ್ವಾಲ್​ನ ಜೋಗುಲಾಂಬದ ರಸ್ತೆ ಬಳಿ ಬರುತ್ತಿದ್ದಂತೆ ರಾತ್ರಿ 3 ಗಂಟೆ ಸುಮಾರಿಗೆ ಚಾಲಕನ ನಿಯಂತ್ರ ತಪ್ಪಿ ಬಸ್​ ಬಿದ್ದು ಹಾಗೇ ಜಾರಿಕೊಂಡು ಹೋಗಿದೆ. ಪರಿಣಾಮ ಬಸ್​ಗೆ ಬೆಂಕಿ ಹೊತ್ತಿಕೊಂಡು ಧಗಧಗಿಸಿದೆ. ಈ ವೇಳೆ ಒಳಗಿದ್ದ ಎಲ್ಲ ಪ್ರಯಾಣಿಕರು ಇಳಿದು ಜೀವ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಆದರೆ ಬಸ್​ ಒಳಗಿದ್ದ ಓರ್ವ ಮಹಿಳೆಯ ಕೈ ಸಿಕ್ಕಿಕೊಂಡಿದ್ದರಿಂದ ಹೊರಗೆ ಬರಲಾಗಿಲ್ಲ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್​ ಅನ್ನು ವ್ಯಾಪಿಸಿಕೊಂಡಿದ್ದರಿಂದ ಸಿಕ್ಕಿಕೊಂಡಿದ್ದ ಮಹಿಳೆ ಸಜೀವವಾಗಿ ದಹನಗೊಂಡಿದ್ದಾರೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಒಬ್ಬರ ಪರಿಸ್ಥತಿ ಗಂಭೀರವಾಗಿದೆ ಎನ್ನಲಾಗಿದ್ದು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಸಾವನ್ನಪ್ಪಿದ ಮಹಿಳೆ ಯಾರೆಂದು ಇನ್ನು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ವೋಲ್ವೋ ಬಸ್​.. ಧಗ ಧಗ ಬೆಂಕಿ ಹೊತ್ತಿಕೊಂಡು ಮಹಿಳೆ ಸಜೀವ ದಹನ

https://newsfirstlive.com/wp-content/uploads/2024/01/TN_BUS_CATCH_FIRE.jpg

Load More