/newsfirstlive-kannada/media/post_attachments/wp-content/uploads/2024/07/Divorce-Party.jpg)
ಮದುವೆ ಎಂದರೆ ಸಂಭ್ರಮ, ವಿಚ್ಛೇದನ ಎಂದರೆ ಬೇಸರ. ಆದರೆ ಈಗ ಕಾಲ ಬದಲಾಗಿದೆ. ಮದ್ವೆ ಎಂದರೆ ಬೇಸರ ಮಾಡುವವರು ಡಿವೋರ್ಸ್​ ಎಂದರೆ ಖುಷಿ ಪಡುತ್ತಾರೆ. ಅದರಂತೆಯೇ ಇಲ್ಲೊಬ್ಬಳು ಮಹಿಳೆ ವಿಚ್ಛೇದನ ಪಾರ್ಟಿ ಆಯೋಜಿಸಿ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಾರೆ. ಅಂದಹಾಗೆಯೇ ಈ ವಿಡಿಯೋದಲ್ಲಿ ಇರೋದು ಯಾರು ಗೊತ್ತಾ?.
ವಿಡಿಯೋದಲ್ಲಿ ಡ್ಯಾನ್ಸ್​ ಮಾಡುತ್ತಿರುವ ಮಹಿಳೆಯನ್ನು ಪಾಕಿಸ್ತಾನಿ ಎಂದು ಗುರುತಿಸಲಾಗಿದೆ. ದೃಶ್ಯದಲ್ಲಿ ಕಂಡಂತೆ ವಿಚ್ಛೇದನ ಪಾರ್ಟಿ ಆಯೋಜಿಸಿ ಮಹಿಳೆ ಸಂಭ್ರಮಿಸುತ್ತಿದ್ದಾಳೆ. ‘ಡಿವೋರ್ಸ್​ ಮುಬಾರಕ್​’ ಹೆಸರಿನಲ್ಲಿ ಪಾರ್ಟಿ ಆಯೋಜಿಸಿದ್ದಾಳೆ.
ಸದ್ಯ ಸಾಮಾಜಿಕ ಜಾಲತಣದಲ್ಲಿ ಮಹಿಳೆಯ ಡಿವೋರ್ಸ್​ ಪಾರ್ಟಿ ದೃಶ್ಯ ವೈರಲ್​ ಆಗುತ್ತಿದೆ. ಬಾಲಿವುಡ್​ ಹಿಟ್​​ ಹಾಡುಗಳಿಗೆ ಮಹಿಳೆ ಎಂಜಾಯ್​ ಮಾಡುತ್ತಾ ನೃತ್ಯ ಮಾಡಿದ್ದಾಳೆ. ಇನ್ನು ಈ ದೃಶ್ಯವನ್ನು ಕಂಡ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ