/newsfirstlive-kannada/media/post_attachments/wp-content/uploads/2025/07/TN_WIFE_HUSBAND.jpg)
ತಮಿಳುನಾಡಿನಲ್ಲಿ ವಿಸಿಕೆ ಪಕ್ಷದ ಮಹಿಳಾ ಕೌನ್ಸಿಲರ್ ಒಬ್ಬರು ತನ್ನ ಗಂಡನಿಂದಲೇ ಜೀವ ಕಳೆದುಕೊಂಡಿದ್ದಾರೆ. ತಮಿಳುನಾಡಿನ ಅವಧಿ ಜಿಲ್ಲೆಯಲ್ಲಿ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಶಂಕಿಸಿ ಗಂಡನೇ ಪತ್ನಿಯನ್ನು ಮುಗಿಸಿದ್ದಾನೆ.
ವಿಸಿಕೆ ಪಕ್ಷದಿಂದ ಕೌನ್ಸಿಲರ್ ಆಗಿ ಸ್ಥಳೀಯ ಸಂಸ್ಥೆಗೆ ಆಯ್ಕೆಯಾಗಿದ್ದ ಗೋಮಿತಿ, ತಿರುನಿನರವೂರ್ ನಗರದ ಜಯರಾಮ ನಗರ ರಸ್ತೆಯಲ್ಲಿ ನಿಂತುಕೊಂಡು ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಪತಿ ಸ್ಟೀಫನ್ ರಾಜ್ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಗಂಡ- ಹೆಂಡತಿ ನಡುವೆ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿದೆ. ತಕ್ಷಣವೇ ಪತಿ ಸ್ಟೀಫನ್ ರಾಜ್, ಚಾಕುವಿನಿಂದ ಗೋಮತಿ ಮೇಲೆ ದಾಳಿ ನಡೆಸಿದ್ದಾನೆ. ಕೆಳಕ್ಕೆ ಕುಸಿದು ಬಿದ್ದ ಗೋಮತಿ, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಒಳ್ಳೆಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ.. ಎಷ್ಟು ರೂಪಾಯಿ?
ಹೀಗೆ ಪತ್ನಿಯನ್ನು ಮುಗಿಸಿದ ಬಳಿಕ ಸ್ಟೀಫನ್ ರಾಜ್, ನೇರ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು, ಆರೋಪಿ ಸ್ಟೀಫನ್ ರಾಜ್ನನ್ನು ವಶಕ್ಕೆ ಪಡೆದು ವಿಚಾರಣೆ, ಕೇಸ್ ತನಿಖೆ ನಡೆಸುತ್ತಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಅಜಿತ್ ಕುಮಾರ್ ಪೊಲೀಸ್ ಠಾಣೆಯ ಲಾಕಪ್ನಲ್ಲಿ ಜೀವ ಬಿಟ್ಟಿದ್ದನು. ಜೂನ್ 30 ರಂದು 22 ವರ್ಷದ ವಿವಾಹಿತ ಮಹಿಳೆಯೊಬ್ಬಳು ತನ್ನ ಮದುವೆಯಾದ ಮೂರೇ ದಿನಕ್ಕೆ ಚೆನ್ನೈನ ಪೊನ್ನೇರಿ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು. 2025ರ ಮೊದಲ ತ್ರೈಮಾಸಿಕದಲ್ಲಿ ತಮಿಳುನಾಡಿನಲ್ಲಿ 340 ಕೊಲೆಗಳು ನಡೆದಿವೆ. 2024ಕ್ಕೆ ಹೋಲಿಸಿದರೇ, ಶೇ.3.4 ರಷ್ಟು ಕೊಲೆಗಳು ಕಡಿಮೆಯಾಗಿವೆ ಎಂದು ಪೊಲೀಸರು, ತಮಿಳುನಾಡು ಸರ್ಕಾರ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ