ಮಗನಿಗೆ ಕಾರು ಕೊಟ್ಟಿದ್ದಕ್ಕೆ ತಂದೆನೂ ಅರೆಸ್ಟ್, ಮಗಳು ಎಸ್ಕೇಪ್
ಓರ್ವ ಮಹಿಳೆಯ ಸಾವಿಗೆ ಕಾರಣನಾದ 17 ವರ್ಷದ ವಿದ್ಯಾರ್ಥಿ
ಆಸ್ಪತ್ರೆಯಿಂದ ತಾಯಿ, ಮಗಳು ಬರುವಾಗ ಭೀಕರ ಅಪಘಾತ
ಲಕ್ನೋ: 17 ವರ್ಷದ ಬಾಲಕನೊಬ್ಬ ಕಾರಿನಲ್ಲಿ ಸ್ಟಂಟ್ ಮಾಡಲು ಹೋಗಿ ಭೀಕರವಾಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇವರ ಮಗಳು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ್ದ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೇರಳದಲ್ಲಿ 100 ಮನೆ ನಿರ್ಮಾಣ.. ಸಿಎಂ ಸಿದ್ದು ಘೋಷಣೆಗೆ ರಾಹುಲ್, ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಸ್ಕೂಟರ್ನಲ್ಲಿ ತಾಯಿ, ಮಗಳು ಆಸ್ಪತ್ರೆಯಿಂದ ಮನೆಗೆ ಹೋಗುವಾಗ ರಸ್ತೆಯಲ್ಲಿ ಬಲಕ್ಕೆ ತಿರುವು ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ 12ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ತಂದೆಗೆ ತಿಳಿಯದಂತೆ ಮಾರುತಿ ಸಿಯಾಜ್ ಕಾರನ್ನು ಸ್ಟಂಟ್ ಮಾಡಿಕೊಂಡು ವೇಗವಾಗಿ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟರ್ನಲ್ಲಿದ್ದ ತಾಯಿ, ಮಗಳು ಸುಮಾರು 20 ರಿಂದ 30 ಅಡಿ ದೂರ ಬಿದ್ದಿದ್ದಾರೆ. ಆದರೆ ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದು ಮಗಳು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಓಡೋಡಿ ಬಂದ ಸ್ಥಳೀಯರು ಗಾಯಳುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಆರೋಪಿ ಅಪ್ರಾಪ್ತ ಬಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Ind vs Sl; ಮ್ಯಾಚ್ ಡ್ರಾ ಆದ್ರೂ ಸೂಪರ್ ಓವರ್ ಯಾಕೆ ಆಡಿಸಲಿಲ್ಲ.. ಟೀಮ್ ಇಂಡಿಯಾಕ್ಕೆ ಮೋಸ ಆಗಿದ್ಯಾ?
ಇನ್ನು ಕಾರಿನಲ್ಲಿ ಇಬ್ಬರು ಯುವತಿಯರು, ಇಬ್ಬರು ಬಾಲಕರು ಸೇರಿ ಒಟ್ಟು ನಾಲ್ವರು ಇದ್ದರು. ಆಕ್ಸಿಡೆಂಟ್ ಆಗ್ತಿದ್ದಂತೆ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ತನಿಖೆ ಕೈಕೊಂಡಿರುವ ಪೊಲೀಸರು ಕಾರು ಡ್ರೈವ್ ಮಾಡ್ತಿದ್ದ ಬಾಲಕನ ಜೊತೆಗೆ ತಂದೆಯನ್ನು ಅರೆಸ್ಟ್ ಮಾಡಿದ್ದಾರೆ. ಲೈಸೆನ್ಸ್ ಇಲ್ಲದೇ ಬಾಲಕನಿಗೆ ಕಾರು ಚಾಲನೆ ಮಾಡಿದ್ದಾನೆ. ಬಂಧಿತ ತಂದೆಯನ್ನು ವಿಚಾರಣೆ ಮಾಡಲಾಗಿದ್ದು, ನನಗೆ ಗೊತ್ತಿರದಂತೆ ತನ್ನ ತಂಗಿಯನ್ನು ಕಾಲೇಜಿಗೆ ಡ್ರಾಪ್ ಮಾಡಲು ಕಾರು ತಂದು ಈ ದುರ್ಘಟನೆಗೆ ಕಾರಣನಾಗಿದ್ದಾನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!
In UP’s Kanpur, mother-daughter duo on a scooty were hit by a over-speeding car which lost control. The car was being driven by a minor. The woman succumbed to her injuries while the daughter is under medical observation. The juvenile at the wheel during the time of accident has… pic.twitter.com/44XZkAj7nq
— Piyush Rai (@Benarasiyaa) August 3, 2024
ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ ಕಾರು 100 ಕಿಲೋ ಮೀಟರ್ನಷ್ಟು ವೇಗದಲ್ಲಿತ್ತು. ಅದೇ ವೇಗದಲ್ಲಿ ಸ್ಟಂಟ್ ಮಾಡುವಾಗ ಸ್ಕೂಟರ್ಗೆ ಡಿಕ್ಕಿ ಹೊಡೆದು ಮಹಿಳೆಯ ಸಾವಿಗೆ ಕಾರಣವಾಗಿದ್ದಾನೆ. ಅಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇನ್ನೊಂದು ಕಾರಿಗೂ ಈ ಕಾರು ಡಿಕ್ಕಿಯಾಗಿ ಹಾನಿ ಮಾಡಿದೆ ಎಂದಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃತ ಮಹಿಳೆಯ ಕುಟುಂಬ ಒತ್ತಾಯಿಸಿದೆ. ಇನ್ನು ಈ ಸಂಬಂಧ ಮಹಿಳೆಯ ಪತಿ ಅನೂಪ್ ಮಿಶ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ