VIDEO: ಕಾಳಿ ನದಿಗೆ ಹಾರಿ ಬದುಕು ಮುಗಿಸಿದ ಮಹಿಳೆ.. ರಕ್ಷಿಸಲು ಮುಂದಾದಂತೆ ನೀರಿಗೆ ಜಿಗಿದಳು

author-image
AS Harshith
Updated On
VIDEO: ಕಾಳಿ ನದಿಗೆ ಹಾರಿ ಬದುಕು ಮುಗಿಸಿದ ಮಹಿಳೆ.. ರಕ್ಷಿಸಲು ಮುಂದಾದಂತೆ ನೀರಿಗೆ ಜಿಗಿದಳು
Advertisment
  • ಮೊಬೈಲ್​ನಲ್ಲಿ ಸೆರೆಯಾಯ್ತು ಮಹಿಳೆ ಆತ್ಮಹತ್ಯೆಯ ದೃಶ್ಯ
  • ರಭಸವಾಗಿ ಹರಿಯುತ್ತಿದ್ದ ಕಾಳಿ ನದಿಗೆ ಹಾರಿದ ಮಹಿಳೆ
  • ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳೋಕೆ ನೈಜ ಕಾರಣವೇನು ಗೊತ್ತಾ?

ಮಹಿಳೆಯೊಬ್ಬಳು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಮಹಿಳೆಯನ್ನು ರಕ್ಷಿಸಲು ಮುಂದಾದಂತೆ ಆಕೆ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾಳೆ. ಪರಿಣಾಮ ಕೊಚ್ಚಿಕೊಂಡು ಹೋದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಅಂದಹಾಗೆಯೇ ಈ ಘಟನೆ ನೇಪಾಳದ ದಾರ್ಚುಲದಲ್ಲಿ ಘಟನೆ ನಡೆದಿದೆ. ಶನಿವಾರದಂದು ಮಹಿಳೆ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಕಾಳಿ ನದಿಯ ದಡದಲ್ಲಿ ನಿಂತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೇರಳದಲ್ಲಿ ಮಹಾ ದುರಂತ.. 250 ಕುಟುಂಬಗಳು ಕಣ್ಮರೆ ಶಂಕೆ.. ಸಾವಿನ ದವಡೆಯಲ್ಲಿ ಸಿಕ್ಕಿರುವ ಜನರ ಕತೆ ಭಯಾನಕ..


">July 29, 2024

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಧನಿಕಾ ಕುನ್ವರ್​ ಎಂದು ಗುರುತಿಸಲಾಗಿದೆ. ಅನೇಕರು ಆಕೆಯ ಮನವೊಳಿಸುವ ಪಯತ್ನ ಮಾಡಿದರಾದರು ಆಕೆ ಯಾರ ಮಾತನ್ನು ಕೇಳಲಿಲ್ಲ. ಪೊಲೀಸ್​ ಆಕೆಯನ್ನು ರಕ್ಷಿಸಲು ಹೋದಂತೆ ಮಹಿಳೆ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment